ಬೆಂಗಳೂರು: DK Death Over Killer : ಕ್ರಿಕೆಟ್ ಜಗತ್ತು ಕಂಡ ಸರ್ವಶ್ರೇಷ್ಠ ಮ್ಯಾಚ್ ಫಿನಿಷರ್ ಯಾರು ಎಂಬ ಪ್ರಶ್ನೆಗೆ ಸಿಗೋ ಉತ್ತರ ಒಂದೇ.. ಅದು ದಿ ಗ್ರೇಟ್ ಮಹೇಂದ್ರ ಸಿಂಗ್ ಧೋನಿ. ಧೋನಿ ನಿವೃತ್ತಿಯ ನಂತರ ಭಾರತ ಮ್ಯಾಚ್ ಫಿನಿಷರ್ ಕೊರತೆ ಎದುರಿಸಿತ್ತು. ಈ ಕಾರಣದಿಂದ ಟೀಮ್ ಇಂಡಿಯಾ ಹಲವಾರು ಪಂದ್ಯಗಳನ್ನು ಸೋತಿತ್ತು. ಆದರೆ ಇದೀಗ ಧೋನಿ ಅವರ ಸ್ಥಾನವನ್ನು ಮತ್ತೊಬ್ಬ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ದಿನೇಶ್ ಕಾರ್ತಿಕ್ (Dinesh Karthik) ತಕ್ಕ ಮಟ್ಟಿಗೆ ತುಂಬುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ( INDvAUS) ಪಂದ್ಯದಲ್ಲಿ ಡಿಕೆ ತಮ್ಮ ಮ್ಯಾಚ್ ಫಿನಿಷಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ತೋರಿಸಿದ್ದಾರೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಆಸೀಸ್ ವಿರುದ್ಧದ 2ನೇ ಟಿ20 ಪಂದ್ಯಕ್ಕೆ (India Vs Australia T20 Series) ಮಳೆ ಅಡ್ಡಿಪಡಿಸಿತ್ತು. ಹೀಗಾಗಿ ಪಂದ್ಯವನ್ನು ತಲಾ 8 ಓವರ್’ಗಳಿಗೆ ಸೀಮಿತಗೊಳಿಸಲಾಗಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 90 ರನ್ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿದ ಭಾರತ ಇನ್ನೂ 4 ಎಸೆತಗಳು ಬಾಕಿ ಇರುತ್ತಲೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಭಾರತದ ಗೆಲುವಿಗೆ ಕೊನೆಯ ಓವರ್’ನಲ್ಲಿ 9 ರನ್’ಗಳ ಬೇಕಿದ್ದಾಗ ಕ್ರೀಸ್’ಗಿಳಿದ ದಿನೇಶ್ ಕಾರ್ತಿಕ್ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ರೆ, 2ನೇ ಎಸೆತವನ್ನು ಬೌಂಡರಿಗಟ್ಟಿ ಕೇವಲ ಎರಡೇ ಎಸೆತಗಳಲ್ಲಿ ಮ್ಯಾಚ್ ಫಿನಿಷ್ ಮಾಡಿದರು.
WHAT. A. FINISH! 👍 👍
— BCCI (@BCCI) September 23, 2022
WHAT. A. WIN! 👏 👏@DineshKarthik goes 6 & 4 as #TeamIndia beat Australia in the second #INDvAUS T20I. 👌 👌@mastercardindia | @StarSportsIndia
Scorecard ▶️ https://t.co/LyNJTtkxVv pic.twitter.com/j6icoGdPrn
ಆಸ್ಟ್ರೇಲಿಯಾ ವಿರುದ್ಧ ದಿನೇಶ್ ಕಾರ್ತಿಕ್ ಮ್ಯಾಚ್ ಫಿನಿಷ್ ಮಾಡಿದ ರೀತಿಯನ್ನು ನೋಡಿ ಡಿಕೆಗೆ ಕ್ರಿಕೆಟ್ ಪ್ರಿಯರು ಹೊಸ ಬಿರುದು ನೀಡಿದ್ದಾರೆ. DK ಅಂದ್ರೆ “ಡೆತ್ ಓವರ್ ಕಿಲ್ಲರ್” ಎಂದು ದಿನೇಶ್ ಕಾರ್ತಿಕ್ ಬಗ್ಗೆ ಸಾಮಾಜಿಕ ಜಾಲಜಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Captain @ImRo45‘s reaction ☺️
— BCCI (@BCCI) September 23, 2022
Crowd’s joy 👏@DineshKarthik‘s grin 👍
🎥 Relive the mood as #TeamIndia sealed a series-levelling win in Nagpur 🔽 #INDvAUS | @mastercardindia
Scorecard ▶️ https://t.co/LyNJTtl5L3 pic.twitter.com/bkiJmUCSeu
2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ 38 ವರ್ಷದ ದಿನೇಶ್ ಕಾರ್ತಿಕ್ 2020ರ ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಕಾಮೆಂಟೇಟರ್ ಆಗಿದ್ದರು. ಅಲ್ಲಿಗೆ ದಿನೇಶ್ ಕಾರ್ತಿಕ್ ಅವರ ಕ್ರಿಕೆಟ್ ಕರಿಯರ್ ಮುಗಿಯಿತು ಎಂದೇ ಭಾವಿಸಲಾಗಿತ್ತು. ಆದರೆ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಬ್ಬರಿಸುವ ಮೂಲಕ ಮತ್ತೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದ ದಿನೇಶ್ ಕಾರ್ತಿಕ್, ಈಗ ಭಾರತ ತಂಡದಲ್ಲಿ ಮ್ಯಾಚ್ ಫಿನಿಷರ್ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಇದನ್ನೂ ಓದಿ : Rohit Sharma World Record : ಆಸೀಸ್ ವಿರುದ್ಧ ಸಿಕ್ಸರ್‌ಗಳ ಸುರಿಮಳೆ.. ಅಮೋಘ ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ
DK Death Over Killer Dinesh Karthik Match Finisher INDvAUS