Duplicate Ashwin – Ravichandran Ashwin : ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಕಾಂಗರೂಗಳ ಗೇಮ್ ಪ್ಲಾನ್ ಸೀಕ್ರೆಟ್ ಬಿಚ್ಚಿಟ್ಟ ಡುಪ್ಲಿಕೇಟ್ ಅಶ್ವಿನ್

ನಾಗ್ಪುರ: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ(Border-Gavaskar test series) ಟೀಮ್ ಇಂಡಿಯಾದ ಸ್ಪಿನ್ ಚಾಲೆಂಜನ್ನು ಸಮರ್ಥವಾಗಿ ಎದುರಿಸಲು ಆಸ್ಟ್ರೇಲಿಯಾ ಆಟಗಾರರು “ಡುಪ್ಲಿಕೇಟ್ ಅಶ್ವಿನ್” ನೆರವು ಪಡೆದ ವಿಚಾರ ನಿಮ್ಗೆ ಗೊತ್ತೇ ಇದೆ. ನಾಗ್ಪುರಕ್ಕೆ ಆಗಮಿಸುವ ಮೊದಲು ಆಸ್ಟ್ರೇಲಿಯಾ ತಂಡ, ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ KSCA ಮೈದಾನದಲ್ಲಿ 4 ದಿನಗಳ ಅಭ್ಯಾಸ ಶಿಬಿರ ನಡೆಸಿತ್ತು. ಆ ಶಿಬಿರದಲ್ಲಿ ಡುಪ್ಲಿಕೇಟ್ ಅಶ್ವಿನ್ (Duplicate Ashwin – Ravichandran Ashwin) ಕಾಣಿಸಿಕೊಂಡಿದ್ದರು.

ಭಾರತದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರ ಶೈಲಿಯಲ್ಲೇ ಬೌಲಿಂಗ್ ಮಾಡುವ ಬರೋಡದ ಯುವ ಆಫ್’ಸ್ಪಿನ್ನರ್ ಮಹೇಶ್ ಪಿಥಿಯಾ (Mahesh Pithiya) ಅವರನ್ನು ಆಸ್ಟ್ರೇಲಿಯಾ ತಂಡ ತನ್ನ ಅಭ್ಯಾಸಕ್ಕೆ ಕರೆಸಿಕೊಂಡಿತ್ತು. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಅವರ ಸ್ಪಿನ್ ದಾಳಿಯನ್ನು ಎದುರಿಸಲು ಆಸೀಸ್ ಈ ತಂತ್ರಕ್ಕೆ ಮೊರೆ ಹೋಗಿತ್ತು.

ಬೆಂಗಳೂರಿನಲ್ಲಿ ಅಭ್ಯಾಸ ಮುಗಿದ ಬಳಿಕ ಮಹೇಶ್ ಪಿಥಿಯಾ ಆಸ್ಟ್ರೇಲಿಯಾ ತಂಡದ ಜೊತೆ ನಾಗ್ಪುರಕ್ಕೆ ಪ್ರಯಾಣಿಸಿದ್ದರು. ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಮಂಗಳವಾರ ನಡೆದ ಅಭ್ಯಾಸದ ವೇಳೆ ಮಹೇಶ್ ಪಿಥಿಯಾ, ತನ್ನ ರೋಲ್ ಮಾಡೆಲ್ ರವಿಚಂದ್ರನ್ ಅಶ್ವಿನ್ ಮತ್ತು ರನ್ ಮಷಿನ್ ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಮಹೇಶ್ ಪಿಥಿಯಾ ಅಶ್ವಿನ್ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಯುವ ಕ್ರಿಕೆಟಿಗನನ್ನು ಅಪ್ಪಿಕೊಂಡ ಅಶ್ವಿನ್ ಸ್ವಲ್ಪ ಹೊತ್ತು ಮಹೇಶ್ ಪಿಥಿಯಾ ಜೊತೆ ಮಾತನಾಡಿದ್ದಾರೆ.

ಅಶ್ವಿನ್‌ ಅರನ್ನು ಭೇಟಿಯಾದ ಬಗ್ಗೆ ಮಹೇಶ್ ಪಿಥಿಯಾ ಸಂತಸ ವ್ಯಕ್ತಪಡಿಸಿದ್ದು, “ಅವತ್ತು ನಾನು ನನ್ನ ಆರಾಧ್ಯ ದೈವದ ಆಶೀರ್ವಾದ ಪಡೆದಿದ್ದೇನೆ. ನಾನು ಸದಾ ಅವರಂತೆಯೇ ಬೌಲಿಂಗ್ ಮಾಡಲು ಬಯಸುತ್ತೇನೆ. ಅವರನ್ನು ಭೇಟಿಯಾದಾಗ, ಅವರ ಕಾಲಿಗೆ ಬಿದ್ದು ಆಶೀರ್ವಾದ ಕೋರಿದೆ. ಅವರು ನನ್ನನ್ನು ತಬ್ಬಿಕೊಂಡರು ಮತ್ತು ನೆಟ್ಸ್‌ನಲ್ಲಿ ಆಸ್ಟ್ರೇಲಿಯಾ ಆಟಗಾರರಿಗೆ ಹೇಗೆ ಬೌಲಿಂಗ್ ಮಾಡುತ್ತಿದ್ದೇನೆ ಎಂಬ ಬಗ್ಗೆ ಕೇಳಿದರು. ವಿರಾಟ್ ಕೊಹ್ಲಿ ಕೂಡ ನನ್ನನ್ನು ನೋಡಿ ಮುಗುಳ್ನಕ್ಕರು ” ಎಂದಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಅಭ್ಯಾಸ ಶಿಬಿರದಲ್ಲಿ ಆಸೀಸ್ ಆಟಗಾರರಿಗೆ ಬೌಲಿಂಗ್ ಮಾಡಿದ ಅನುಭವವನ್ನು ಮಹೇಶ್ ಪಿಥಿಯಾ ಅಶ್ವಿನ್ ಜೊತೆ ಹಂಚಿಕೊಂಡಿದ್ದಾರೆ. ಸ್ಪಿನ್ ವಿರುದ್ಧ ಆಡಲು ಆಸ್ಟ್ರೇಲಿಯಾ ಯಾವರ ರೀತಿ ಸಿದ್ಧತೆ ಮಾಡಿಕೊಂಡಿದೆ ಎನ್ನುವುದರ ಬಗ್ಗೆ ಸ್ಪಿನ್ ಮಾಂತ್ರಿಕ ಅಶ್ವಿನ್, ಡುಪ್ಲಿಕೇಟ್ ಅಶ್ವಿನ್ ಅವರಿಂದ ಮಾಹಿತಿ ಪಡೆದಿದ್ದಾರೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಪ್ರಥಮ ಟೆಸ್ಟ್ ಪಂದ್ಯ ನಾಳೆ (ಫೆಬ್ರವರಿ 9) ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ(ವಿಸಿಎ) ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

ಭಾರತ Vs ಆಸ್ಟ್ರೇಲಿಯಾ ಪ್ರಥಮ ಟೆಸ್ಟ್ :
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ಸ್ಥಳ: ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನ, ಜಮ್ತಾ; ನಾಗ್ಪುರ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : Border-Gavaskar test series: ನಾಳೆಯಿಂದ ಪ್ರಥಮ ಟೆಸ್ಟ್, ಕಾಂಗರೂಬೇಟೆಗೆ ಹೀಗಿದೆ ಭಾರತದ ಪ್ಲೇಯಿಂಗ್ XI

ಇದನ್ನೂ ಓದಿ : ಮಾರ್ಚ್ 4ರಿಂದ ಮಹಿಳಾ ಐಪಿಎಲ್; ಫೆಬ್ರವರಿ 13ಕ್ಕೆ ಆಟಗಾರ್ತಿಯರ ಹರಾಜು, ಯಾರ ಮೂಲ ಬೆಲೆ ಎಷ್ಟು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇದನ್ನೂ ಓದಿ : ಬಿಸಿಸಿಐ ಸೀನಿಯರ್ ಮಹಿಳಾ ಏಕದಿನ ಟ್ರೋಫಿ: ಫೈನಲ್‌ನಲ್ಲಿ ಮತ್ತೆ ನಿರಾಸೆ, ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟ ಕರ್ನಾಟಕದ ವನಿತೆಯರು

ಪ್ರಥಮ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
1.ರೋಹಿತ್ ಶರ್ಮಾ (ನಾಯಕ), 2.ಮಯಾಂಕ್ ಅಗರ್ವಾಲ್ (ಉಪನಾಯಕ), 3.ಚೇತೇಶ್ವರ್ ಪೂಜಾರ, 4.ವಿರಾಟ್ ಕೊಹ್ಲಿ, 5.ಶುಭಮನ್ ಗಿಲ್/ಸೂರ್ಯಕುಮಾರ್ ಯಾದವ್, 6.ಕೆ.ಎಸ್ ಭರತ್ (ವಿಕೆಟ್ ಕೀಪರ್), 7.ರವೀಂದ್ರ ಜಡೇಜ, 8.ರವಿಚಂದ್ರನ್ ಅಶ್ವಿನ್, 9.ಅಕ್ಷರ್ ಪಟೇಲ್/ಕುಲ್ದೀಪ್ ಯಾದವ್, 10.ಮೊಹಮ್ಮದ್ ಶಮಿ, 11.ಮೊಹಮ್ಮದ್ ಸಿರಾಜ್.

Duplicate Ashwin – Ravichandran Ashwin : Duplicate Ashwin revealed the secret of Kangaroo’s game plan in the Team India camp

Comments are closed.