Broadcasting Rights : ಅಬ್ಬಬ್ಬಾ… ಐಪಿಎಲ್ ಮುಂದೆ ಇಂಗ್ಲೀಷ್ ಪ್ರೀಮಿಯರ್ ಲೀಗ್ ದಾಖಲೆಯೂ ಉಡೀಸ್

ಮುಂಬೈ: ಇಂಗ್ಲಿಷ್ ಪ್ರೀಮಿಯರ್ ಲೀಗ್ (English Premier League) ಬಗ್ಗೆ ಗೊತ್ತೇ ಇದ್ಯಲ್ಲಾ.. ಜಗತ್ತಿನ ಅತ್ಯಂತ ಶ್ರೀಮಂತ ಫುಟ್ಬಾಲ್ ಲೀಗ್ (Footbal League). ಇಲ್ಲಿ ಆಡೋರೆಲ್ಲಾ ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರರೇ. ಲಿಯೋನೆಲ್ ಮೆಸ್ಸಿ (Messi), ಕ್ರಿಸ್ಚಿಯಾನೋ ರೊನಾಲ್ಡೋ (Ronaldo), ನೇಯ್ಮಾರ್ (Neymar), ಕೈಲಿಯಾನ್ ಎಂಬಾಪೆ.. ಹೀಗೆ ಆಧುನಿಕ ಫುಟ್ಬಾಲ್”ನ ದಿಗ್ಗಜರೆಲ್ಲಾ EPLನಲ್ಲಿ ಆಡುತ್ತಾರೆ. ಅಂತಹ ದೈತ್ಯ ಸ್ಪೋರ್ಟ್ಸ್ ಲೀಗ್ ದಾಖಲೆಯನ್ನು (Broadcasting Rights) ನಮ್ಮ ಐಪಿಎಲ್ ಉಡೀಸ್ ಮಾಡಿದೆ.

ಮುಂಬೈನಲ್ಲಿ ನಡೆದ ಐಪಿಎಲ್ ಬ್ರಾಡ್ ಕಾಸ್ಟಿಂಗ್ (IPL Broadcasting Rights) ಇ-ಹರಾಜಿನಲ್ಲಿ ಹಣದ ಹೊಳೆಯೇ ಹರಿದಿದೆ. ಟಿವಿ ಪ್ರಸಾರದ ಹಕ್ಕು 23,575 ಕೋಟಿ ರೂಪಾಯಿ ಗಳಿಗೆ ಸೋನಿ ನೆಟ್”ವರ್ಕ್ (Sony Network) ಪಾಲಾಗಿದ್ರೆ, ಡಿಜಿಟಲ್ ಹಕ್ಕು 20,500 ಕೋಟಿ ರೂಪಾಯಿಗಳಿಗೆ ವಯಾಕಾಮ್-18 ಪಾಲಾಗಿದೆ. ಹೀಗೆ ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್ ಒಟ್ಟಾರೆ 44,000 ಕೋಟಿ ರೂಪಾಯಿಗಳಿಗೆ ಬಿಡ್ ಆಗಿದೆ. ಜಗತ್ತಿನ ಯಾವುದೇ ಕ್ರಿಕೆಟ್ ಲೀಗ್”ನ ಬ್ರಾಡ್ ಕಾಸ್ಟಿಂಗ್ ರೈಟ್ಸ್ ವಿಚಾರದಲ್ಲಿ ಇದೊಂದು ವಿಶ್ವದಾಖಲೆ.
ಟಿವಿ ಪ್ರಸಾರದ ಹಕ್ಕು ಹಾಗೂ ಡಿಜಿಟಲ್ ಹಕ್ಕು ಸೇರಿ ಐಪಿಎಲ್ ಪಂದ್ಯವೊಂದರ ಬ್ರಾಡ್ ಕಾಸ್ಟಿಂಗ್ ರೈಟ್ಸ್ ಬೆಲೆ 105.5 ಕೋಟಿ. ಇದರಲ್ಲಿ ಟಿವಿ ಹಕ್ಕು 57.5 ಕೋಟಿ, ಡಿಜಿಟಲ್ ಹಕ್ಕು 48 ಕೋಟಿ. ಒಟ್ಟಾರೆ ಒಂದು ಪಂದ್ಯಕ್ಕೆ 105.5 ಕೋಟಿ. ಇಂಗ್ಲಿಷ್ ಪ್ರೀಮಿಯರ್ ಲೀಗ್”ನ ಪಂದ್ಯವೊಂದರ ಬ್ರಾಡ್ ಕಾಸ್ಟಿಂಗ್ ರೈಟ್ಸ್ ಬೆಲೆ 85 ಕೋಟಿ.

ಜಗತ್ತಿನ ಪ್ರಮುಖ ಲೀಗ್”ಗಳ ಪ್ರಸಾರ ಹಕ್ಕು (ಪ್ರತೀ ಪಂದ್ಯಕ್ಕೆ)
ಎನ್ಎಫ್ಎಲ್: 132 ಕೋಟಿ ರೂ.
ಐಪಿಎಲ್: 105.5 ಕೋಟಿ ರೂ.
ಇಪಿಎಲ್: 85 ಕೋಟಿ ರೂ.
ಎಂಎಲ್’ಬಿ: 85 ಕೋಟಿ ರೂ.
ಎನ್’ಬಿಎ: 15 ಕೋಟಿ ರೂ.

ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್: 44,075 ಕೋಟಿ ರೂ.
ಟಿವಿ ಪ್ರಸಾರದ ಹಕ್ಕು: 23,575 ರೂ.
ಡಿಜಿಟಲ್ ಹಕ್ಕು: 20,500 ಕೋಟಿ ರೂ.

2008ರಲ್ಲಿ ಸೋನಿ ನೆಟ್”ವರ್ಕ್ ಐಪಿಎಲ್ ಪ್ರಸಾರದ ಹಕ್ಕನ್ನು 8,200 ಕೋಟಿ ರೂಪಾಯಿಗಳಿಗೆ 10 ವರ್ಷಗಳ ಅವಧಿಗೆ ತನ್ನದಾಗಿಸಿಕೊಂಡಿತ್ತು. ಈಗ ಕೇವಲ ಐದೇ ವರ್ಷಗಳಿಗೆ ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್ 44,000 ಕೋಟಿಗೂ ಹೆಚ್ಚು.

ಇದನ್ನೂ ಓದಿ : Virat Kohli : ಸಮುದ್ರ ತಟದಲ್ಲಿ ಕುಳಿತು ಹಾಟ್ ಫೋಟೋ ಶೇರ್ ಮಾಡಿದ ಕಿಂಗ್ ವಿರಾಟ್ ಕೊಹ್ಲಿ

ಇದನ್ನೂ ಓದಿ : Flower on Mars..! Photo shared by NASA : ಮಂಗಳ ಗ್ರಹದಲ್ಲಿ ಹೂವು..!ಫೋಟೋ ಹಂಚಿಕೊಂಡ ನಾಸಾ

English Premier League Record Break Indian Premier League IPL Broadcasting Rights

Comments are closed.