Exclusive : Abu Dhabi T10 League : ಡೆಕ್ಕನ್ ಗ್ಲಾಡಿಯೇಟರ್ಸ್ ಚಾಂಪಿಯನ್ ಆಗಿದ್ದರ ಹಿಂದೆ ಕನ್ನಡಿಗ “ರಾಮನ್ ಎಫೆಕ್ಟ್”

ಬೆಂಗಳೂರು: ಅಬುಧಾಬಿ ಟಿ10 ಲೀಗ್’ನಲ್ಲಿ (Abu Dhabi T10 League) ಹಾಲಿ ಚಾಂಪಿಯನ್ ಡೆಕ್ಕನ್ ಗ್ಲಾಡಿಯೇಟರ್ಸ್ (Deccan Gladiators) ತಂಡ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನಿಕೋಲಸ್ ಪೂರನ್ ನಾಯಕತ್ವದ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡ ನ್ಯೂಯಾರ್ಕ್ ಸ್ಟ್ರೈಕರ್ಸ್ (New York Strikers) ತಂಡವನ್ನು 37 ರನ್’ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಕ್ಕನ್ ಗ್ಲಾಡಿಯೇಟರ್ಸ್ ನಿಗದಿತ 10 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 128 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು.

ನಾಯಕ ನಿಕೋಲಸ್ ಪೂರನ್ 23 ಎಸೆತಗಳಲ್ಲಿ 40 ರನ್ ಸಿಡಿಸಿದ್ರೆ, ಕೊನೆ ಕ್ಷಣದಲ್ಲಿ ಅಬ್ಬರಿಸಿದ ಡೇವಿಡ್ ವೈಸ್ ಕೇವಲ 18 ಎಸೆತಗಳಲ್ಲಿ ಅಜೇಯ 43 ರನ್ ಬಾರಿಸಿದರು. ನಂತರ ಗುರಿ ಬೆನ್ನಟ್ಟಿದ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡ 10 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಡೆಕ್ಕನ್ ಗ್ಲಾಡಿಯೇಟರ್ಸ್ ತಂಡದ ಗೆಲುವಿನ ಹಿಂದೆ ಕನ್ನಡಿಗರೊಬ್ಬರ ಪಾತ್ರವಿದೆ. ಡೆಕ್ಕನ್ ತಂಡದ ವೀಡಿಯೊ ವಿಶ್ಲೇಷಕರಾಗಿರುವ ಪ್ರಸನ್ನ ರಾಮನ್ ಮೂಲತಃ ಕರ್ನಾಟಕದವರು.

ಇದನ್ನೂ ಓದಿ : Kuldeep Sen life story : ಕ್ಷೌರಿಕನ ಮಗ ಭಾರತ ಪರ ಏಕದಿನ ಕ್ರಿಕೆಟ್ ಆಡಿದ ರೋಚಕ ಕಥೆ

ಇದನ್ನೂ ಓದಿ : KL Rahul : ಕೆ.ಎಲ್ ರಾಹುಲ್ 5ನೇ ಕ್ರಮಾಂಕಕ್ಕೆ ಬೆಸ್ಟ್ ಪ್ಲೇಯರ್.. ಯಾಕೆ ಗೊತ್ತಾ..? ಇಲ್ಲಿದೆ ಉತ್ತರ

ಇದನ್ನೂ ಓದಿ : India vs Bangladesh 1st ODI: ಕನ್ನಡಿಗ ರಾಹುಲ್ ಏಕಾಂಗಿ ಹೋರಾಟ ವ್ಯರ್ಥ, ಬಾಂಗ್ಲಾದೇಶಕ್ಕೆ 1 ವಿಕೆಟ್ ರೋಚಕ ಜಯ

ಇದನ್ನೂ ಓದಿ : Mayank Agarwal – Manish Pandey : ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ ಮೂಲ ಬೆಲೆ ರೂ. 1 ಕೋಟಿ

ಈ ಹಿಂದೆ ಕರ್ನಾಟಕ ರಣಜಿ ತಂಡದ ವೀಡಿಯೊ ಅನಾಲಿಸ್ಟ್ ಆಗಿದ್ದ ಪ್ರಸನ್ನ ರಾಮನ್, ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೀಡಿಯೊ ವಿಶ್ಲೇಷಕರಾಗಿದ್ದರು. ಈ ಸಂದರ್ಭದಲ್ಲಿ RCB ಪರ ಆಡುತ್ತಿದ್ದ ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್ ಡೇಲ್ ಸ್ಟೇನ್, ಪ್ರಸನ್ನ ರಾಮನ್ ಅವರ ಕಾರ್ಯವೈಖರಿಯನ್ನು ಮೆಚ್ಚಿ ಅವರನ್ನು ದಕ್ಷಿಣ ಆಫ್ರಿಕಾ ತಂಡಕ್ಕೆ ಸೇರಿಸಿಕೊಂಡಿದ್ದರು. ದಕ್ಷಿಣ ಆಫ್ರಿಕಾ ತಂಡದ ಪರ ಪ್ರಸನ್ನ ರಾಮನ್ ಹಲವಾರು ವರ್ಷಗಳ ಕಾಲ ವೀಡಿಯೊ ವಿಶ್ಲೇಷಕರಾಗಿ ಕೆಲಸ ಮಾಡಿದ್ದರು. ಕ್ರಿಕೆಟ್ ಜಗತ್ತಿನ ಅತ್ಯುತ್ತಮ ವೀಡಿಯೊ ವಿಶ್ಲೇಷಕರಲ್ಲಿ ಒಬ್ಬರಾಗಿರುವ ಪ್ರಸನ್ನ ರಾಮನ್, ಐಪಿಎಲ್’ನಲ್ಲಿ ಪುಣೆ ಸೂಪರ್’ಜೈಂಟ್ಸ್ ಪರ ವೀಡಿಯೊ ಅನಾಲಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ದರು.

Exclusive : Abu Dhabi T10 League : Kannadiga “Raman Effect” Behind Deccan Gladiators Champions

Comments are closed.