India Vs Bangladesh ODI series : 5 ಐಪಿಎಲ್ ಟ್ರೋಫಿ ಗೆದ್ದ ನಾಯಕನ ನೇತೃತ್ವದಲ್ಲಿ ಭಾರತ ತಂಡ ಬರ್ಬಾದ್!

ಬೆಂಗಳೂರು: ಐಪಿಎಲ್’ನಲ್ಲಿ ಒಂದಲ್ಲ, ಎರಡಲ್ಲ, ಐದು ಬಾರಿ ಟ್ರೋಫಿ ಗೆದ್ದ ನಾಯಕ. ಬೆಸ್ಟ್ ಕ್ಯಾಪ್ಟನ್ ಎಂದು ಕ್ರಿಕೆಟ್ ಪಂಡಿತರಿಂದ ಶಹಬ್ಬಾಸ್ ಅನ್ನಿಸಿಕೊಂಡ ನಾಯಕ. (India Vs Bangladesh ODI series) ಆದರೆ ಭಾರತ ತಂಡದ ನಾಯಕನಾಗಿ ಬೆನ್ನು ಬೆನ್ನಿಗೆ ಸೋಲುಗಳ ಸರಮಾಲೆ. ಇದು ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ನಾಯಕತ್ವದ ವೈಖರಿ.

ಕಳೆದ ವರ್ಷ ಭಾರತ ತಂಡದ ನಾಯಕನಾಗಿ ನೇಮಕಗೊಂಡಿದ್ದ ರೋಹಿತ್ ಶರ್ಮಾ, ಪ್ರಮುಖ ಟೂರ್ನಿಗಳಲ್ಲಿ ಭಾರೀ ವೈಫಲ್ಯ ಎದುರಿಸಿದ್ದಾರೆ. ಈ ವರ್ಷದ ಏಷ್ಯಾ ಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ಹೊರ ಬಿದ್ದಿದ್ದ ಭಾರತ, ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್’ಗಳ ಹೀನಾಯ ಸೋಲು ಕಂಡಿತ್ತು. ಇದೀಗ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ (India Vs Bangladesh ODI series) ಅವಮಾನಕರ ಸೋಲು ಕಂಡಿದೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಸೋತದ್ದೇ ಇಲ್ಲ. ಆದರೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ, ಭಾನುವಾರ ಮೀರ್’ಪುರದಲ್ಲಿ ನಡೆದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 1 ವಿಕೆಟ್’ನಿಂದ ಸೋಲು ಕಂಡಿತ್ತು. ಪಂದ್ಯದಲ್ಲಿ ರೋಹಿತ್ ಶರ್ಮಾ ತೆಗೆದುಕೊಂಡ ಕೆಲ ನಿರ್ಧಾರಗಳು ತಂಡಕ್ಕೆ ಮಾರಕವಾಗಿದ್ದವು. ಬೌಲಿಂಗ್ ಬದಲಾವಣೆಗಳಲ್ಲಿ ರೋಹಿತ್ ತೆಗೆದುಕೊಂಡ ನಿರ್ಧಾರಗಳು ಪ್ರಶ್ನಾರ್ಹವಾಗಿದ್ದವು. ಹೊಸ ಚೆಂಡಿನಲ್ಲಿ ಅಮೋಘ ದಾಖಲೆ ಹೊಂದಿರುವ ಸ್ವಿಂಗ್ ಬೌಲರ್ ದೀಪಕ್ ಚಹರ್ ಅವರನ್ನು ಡೆತ್ ಓವರ್’ನಲ್ಲಿ ದಾಳಿಗಿಳಿಸಿದ್ದು ಭಾರತದ ಸೋಲಿಗೆ ಕಾರಣವಾಗಿತ್ತು.

ಕಳೆದ ವರ್ಷ ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನಂತರ ಭಾರತ ಟಿ20 ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದರು. ಟಿ20 ನಾಯಕತ್ವವನ್ನು ತೊರೆದ ಕೊಹ್ಲಿ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯಲು ಬಯಸಿದ್ದರು. ಆದರೆ ಕಿಂಗ್ ಕೊಹ್ಲಿಗೆ ಶಾಕ್ ಕೊಟ್ಟಿದ್ದ ಬಿಸಿಸಿಐ, ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿದ ರೋಹಿತ್ ಶರ್ಮಾಗೆ ಪಟ್ಟ ಕಟ್ಟಿತ್ತು. ಇದೇ ಬೇಸರದಲ್ಲಿ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವವನ್ನೂ ತೊರೆದಿದ್ದರು. ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕತ್ವ ತೊರೆದ ನಂತರ ತಂಡ, ಪ್ರಮುಖ ಟೂರ್ನಿಗಳಲ್ಲಿ ಮುಗ್ಗರಿಸುತ್ತಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡದ ವೈಫಲ್ಯ :
ಏಷ್ಯಾ ಕಪ್ 2022: ಗ್ರೂಪ್ ಸ್ಟೇಜ್’ನಲ್ಲೇ ಔಟ್
ಟಿ20 ವಿಶ್ವಕಪ್ 2022: ಸೆಮಿಫೈನಲ್’ನಲ್ಲಿ ಸೋಲು
ಬಾಂಗ್ಲಾದೇಶ ವಿರುದ್ಧ ಏಕದಿನ ಪಂದ್ಯದಲ್ಲಿ ಸೋಲು

ರೋಹಿತ್ ಶರ್ಮಾ ನಾಯಕತ್ವದಲ್ಲಿ ಪದೇ ಪದೇ ವೈಫಲ್ಯ ಎದುರಿಸುತ್ತಿದ್ದಾರೆ. ಸಹ ಆಟಗಾರರ ಮೇಲೆ ಮೈದಾನದಲ್ಲಿ ತಾಳ್ಮೆ ಕಳೆದುಕೊಂಡು ವರ್ತಿಸುತ್ತಿದ್ದಾರೆ. ರೋಹಿತ್ ಅವರ ಈ ನಡವಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ, ಕೊಹ್ಲಿ-ರವಿ ಶಾಸ್ತ್ರಿ ಅವಧಿಯಲ್ಲೇ ಭಾರತ ತಂಡದ ಸಾಧನೆ ಉತ್ತಮವಾಗಿತ್ತು ಎಂದು ಕ್ರಿಕೆಟ್ ಪ್ರಿಯರು ಸೋಷಿಯಲ್ ಮೀಡಿಯಾಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : Mayank Agarwal – Manish Pandey : ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ ಮೂಲ ಬೆಲೆ ರೂ. 1 ಕೋಟಿ

ಇದನ್ನೂ ಓದಿ : Kuldeep Sen life story : ಕ್ಷೌರಿಕನ ಮಗ ಭಾರತ ಪರ ಏಕದಿನ ಕ್ರಿಕೆಟ್ ಆಡಿದ ರೋಚಕ ಕಥೆ

https://twitter.com/AkshatOM10/status/1599403960200491008?s=20&t=4y7WhnA2m4i0iw57EMtXgA

India Vs Bangladesh ODI series : Indian team ruined under the leadership of the captain who won 5 IPL trophies!

Comments are closed.