ಸೋಮವಾರ, ಏಪ್ರಿಲ್ 28, 2025
HomeSportsCricketExclusive : ಕೆ.ಎಲ್ ರಾಹುಲ್ ಕಂಬ್ಯಾಕ್ ಪ್ಲಾನ್ ಔಟ್.. ಜಿಂಬಾಬ್ವೆ ಸರಣಿಗೆ ಕನ್ನಡಿಗ ಕ್ಯಾಪ್ಟನ್ ?

Exclusive : ಕೆ.ಎಲ್ ರಾಹುಲ್ ಕಂಬ್ಯಾಕ್ ಪ್ಲಾನ್ ಔಟ್.. ಜಿಂಬಾಬ್ವೆ ಸರಣಿಗೆ ಕನ್ನಡಿಗ ಕ್ಯಾಪ್ಟನ್ ?

- Advertisement -

ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಆಡುವುದಿಲ್ಲ ಎಂಬ Exclusive ಸುದ್ದಿ ಪ್ರಕಟಿಸಿದ್ದ Newsnextಗೆ ರಾಹುಲ್ ಕಂಬ್ಯಾಕ್ ಪ್ಲಾನ್ ಬಗ್ಗೆ ಪಕ್ಕಾ ಮಾಹಿತಿ ಸಿಕ್ಕಿದೆ. ಕೋವಿಡ್”ನಿಂದ ಚೇತರಿಸಿಕೊಳ್ಳುತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ (KL Rahul Team India Comeback Plan) ಮಾಡಲಿದ್ದಾರೆ. ಮುಂದಿನ ತಿಂಗಳು ಭಾರತ ಕ್ರಿಕೆಟ್ ತಂಡ ಜಿಂಬಾಬ್ವೆ ಪ್ರವಾಸಕ್ಕೆ ತೆರಳಲಿದ್ದು, ಆತಿಥೇಯರ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ಯುಎಇನಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿಗೂ ಮುನ್ನ ರಾಹುಲ್, ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿದ್ದಾರೆ.

ಸ್ಪೋರ್ಟ್ಸ್ ಹರ್ನಿಯಾ (Sports Hernia) ಸಮಸ್ಯೆಗೆ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆ ಪಡೆದು ಬಂದಿದ್ದ ರಾಹುಲ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಖಾಡೆಮಿಯಲ್ಲಿ ಅಭ್ಯಾಸವನ್ನೂ ಆರಂಭಿಸಿದ್ದರು. ಆದರೆ ಜುಲೈ 21ರಂದು ರಾಹುಲ್ ಅವರಿಗೆ ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧ ಜುಲೈ 29ರಂದು ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ ರಾಹುಲ್ ಅಲಭ್ಯರಾಗಿದ್ದರು.

ಇದೇ ವರ್ಷದ ಮೇ 25ರಂದು ಕೋಲ್ಕತಾದಲ್ಲಿ ನಡೆದ ಐಪಿಎಲ್ ಎಲಿಮಿನೇಟರ್ ಪಂದ್ಯದ ನಂತರ, ರಾಹುಲ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ತವರು ಟಿ20 ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದ ರಾಹುಲ್ ಅವರಿಗೆ ಅಲ್ಲೂ ಅದೃಷ್ಟ ಕೈ ಕೊಟ್ಟಿತ್ತು. ಸರಣಿ ಆರಂಭಕ್ಕೆ ಮುನ್ನಾ ದಿನ ತೊಡೆ ಸಂಧು (Groin Injury) ಗಾಯಕ್ಕೊಳಗಾಗಿ ಇಡೀ ಸರಣಿಯಿಂದಲೇ ಹೊರ ಬಿದ್ದಿದ್ದರು. ನಂತರ ಇಂಗ್ಲೆಂಡ್ ಪ್ರವಾಸಕ್ಕೂ ರಾಹುಲ್ ಅಲಭ್ಯರಾಗಿದ್ದರು. ಕೊರೊನಾ ಕಾರಣದಿಂದ ವೆಸ್ಟ್ ಇಂಡೀಸ್ ಪ್ರವಾಸವನ್ನೂ ತಪ್ಪಿಸಿಕೊಂಡಿರುವ ರಾಹುಲ್, ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೂಲಕ ಟೀಮ್ ಇಂಡಿಯಾಗೆ ಮರಳಲಿದ್ದಾರೆ.

ಭಾರತ Vs ಜಿಂಬಾಬ್ವೆ ಏಕದಿನ ಸರಣಿಯ ವೇಳಾಪಟ್ಟಿ
ಮೊದಲ ಏಕದಿನ: ಆಗಸ್ಟ್ 18
ಎರಡನೇ ಏಕದಿನ: ಆಗಸ್ಟ್ 20
ಮೂರನೇ ಏಕದಿನ: ಆಗಸ್ಟ್ 22
ಸ್ಥಳ: ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ

ಇದನ್ನೂ ಓದಿ : Exclusive : KL Rahul out of West Indies T20s : ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ಕೆ.ಎಲ್ ರಾಹುಲ್ ಔಟ್

ಇದನ್ನೂ ಓದಿ : Rahul Dravid: “ರಾಹುಲ್ ದ್ರಾವಿಡ್ ಅಲ್ಲ ರಾಹುಲ್ ‘ಡೇವಿಡ್’..” ದಿ ಗ್ರೇಟ್ ವಾಲ್ ಬಿಚ್ಚಿಟ್ಟ “ಹೆಸರು” ರಹಸ್ಯ

Exclusive Here is KL Rahul Team India Comeback Plan

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular