Japrit Bumrah : ವೇಗಿ ಜಸ್‌ಪ್ರೀತ್ ಬುಮ್ರಾಗೆ ನ್ಯೂಜಿಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆ, ಏಳು ತಿಂಗಳು ಕ್ರಿಕೆಟ್‌ನಿಂದ ಔಟ್

ಬೆಂಗಳೂರು: ಬೆನ್ನು ನೋವಿನಿಂದ ಬಳಲುತ್ತಿರುವ ಟೀಮ್ ಇಂಡಿಯಾದ ವೇಗದ ಬೌಲರ್ ಜಸ್’ಪ್ರೀತ್ ಬುಮ್ರಾ, (Fast bowler Japrit Bumrah) ಸದ್ಯದಲ್ಲೇ ನ್ಯೂಜಿಲೆಂಡ್’ಗೆ ಹಾರಲಿದ್ದಾರೆ. ಬುಮ್ರಾಗೆ ನ್ಯೂಜಿಲೆಂಡ್’ನಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಮುಂದಿನ ಸೆಪ್ಟೆಂಬರ್’ವರೆಗೆ ಕ್ರಿಕೆಟ್’ನಿಂದ ಹೊರಗುಳಿಯಲಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಜಸ್’ಪ್ರೀತ್ ಬುಮ್ರಾ ಕನಿಷ್ಠ 20ರಿಂದ 24 ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದು, ಈ ವೇಳೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಜಸ್’ಪ್ರೀತ್ ಬುಮ್ರಾ ಅವರ ಬೆನ್ನು ನೋವಿಗೆ ನ್ಯೂಜಿಲೆಂಡ್’ನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಈ ಹಿಂದೆ ಇಂಗ್ಲೆಂಡ್’ನ ವೇಗಿ ಜೋಫ್ರಾ ಆರ್ಚರ್ ಮತ್ತು ನ್ಯೂಜಿಲೆಂಡ್’ನ ಮಾಜಿ ವೇಗದ ಬೌಲರ್ ಶೇನ್ ಬಾಂಡ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ರೊವಾನ್ ಶೌಟೆನ್ ಅವರೇ ಜಸ್’ಪ್ರೀತ್ ಬುಮ್ರಾ ಅವರಿಗೂ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ.

29 ವರ್ಷದ ಜಸ್’ಪ್ರೀತ್ ಬುಮ್ರಾ ಬೆನ್ನು ನೋವಿನ ಕಾರಣ ಈಗಾಗಲೇ ಐಪಿಎಲ್-2023 ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಐಪಿಎಲ್’ಗೆ ಬುಮ್ರಾ ಅಲಭ್ಯರಾಗಿರುವುದು 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್’ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಬುಮ್ರಾ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಸಂಪೂರ್ಣ ಐಪಿಎಲ್ ಟೂರ್ನಿಗೆ ಲಭ್ಯವಿರುವುದು ಮುಂಬೈ ಇಂಡಿಯನ್ಸ್’ಗೆ ಕೊಂಚ ಸಮಾಧಾನ ತಂದಿದೆ.

ಇದನ್ನೂ ಓದಿ : KL Rahul: ಟೀಮ್ ಇಂಡಿಯಾದಲ್ಲಿ ಬೆಂಚ್ ಕಾಯಿಸುವ ಬದಲು ರಾಹುಲ್ ಅವರನ್ನು ಇರಾನಿ ಕಪ್‌ನಲ್ಲಿ ಆಡಿಸಬಹುದಿತ್ತಲ್ವಾ?

ಇದನ್ನೂ ಓದಿ : India Vs Australia 3rd test : ಸ್ಪಿನ್ ಕೋಟೆಯಲ್ಲಿ ಭಾರತಕ್ಕೆ ಶಾಕ್ ಕೊಟ್ಟ ಕಾಂಗರೂಗಳು, ಮೊದಲ ದಿನವೇ 14 ವಿಕೆಟ್ ಪತನ

ಇದನ್ನೂ ಓದಿ : Border-Gavaskar Trophy 3rd Test: ಕಾಂಗರೂಗಳ ಸ್ಪಿನ್ ಬಲೆಗೆ ಬಿದ್ದ ಟೀಮ್ ಇಂಡಿಯಾ 109ಕ್ಕೆ ಆಲೌಟ್

2022ರ ಜುಲೈನಲ್ಲಿ ಬರ್ಮಿಂಗ್’ಹ್ಯಾಮ್’ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ನಂತರ ಜಸ್’ಪ್ರೀತ್ ಬುಮ್ರಾ ಭಾರತ ಪರ ಟೆಸ್ಟ್ ಆಡಿಲ್ಲ. ಇನ್ನು 2022ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತ ಪರ ಕೊನೆಯ ಅಂತರಾಷ್ಟ್ರೀಯ ಪಂದ್ಯವಾಡಿದ್ದ ಬುಮ್ರಾ, ನಂತರ ಬೆನ್ನು ನೋವಿನ ಕಾರಣ ಏಷ್ಯಾ ಕಪ್ ಟಿ20 ಟೂರ್ನಿ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಳಿಗೆ ಅಲಭ್ಯರಾಗಿದ್ದರು. ಅಷ್ಟೇ ಅಲ್ಲ, ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದಲೂ (India Vs Australia Border-Gavaskar test series) ಜಸ್’ಪ್ರೀತ್ ಬುಮ್ರಾ ಹೊರಗುಳಿದಿದ್ದಾರೆ.

Fast bowler Japrit Bumrah: Jasprit Bumrah undergoes surgery in New Zealand, out of cricket for seven months

Comments are closed.