Suzuki: 20% ಎಥೆನಾಲ್‌ ಮಿಶ್ರಣದಿಂದಲೂ ಚಲಿಸುವ ಸಾಮರ್ಥ್ಯವಿರುವ ಹೊಸ 2023 ಎಕ್ಸಿಸ್‌ 125, ಎವ್‌ನಿಸ್‌ ಮತ್ತು ಬರ್ಗ್‌ಮನ್‌ ಸ್ಟ್ರೀಟ್‌ ಶ್ರೇಣಿಯ ಸ್ಕೂಟರ್‌ಗಳ ಬಿಡುಗಡೆ ಮಾಡಿದ ಸುಜುಕಿ

ವಾಹನ ತಯಾರಿಕಾ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಸುಜುಕಿ ಮೋಟಾರ್ಸ್‌ ಇಂಡಿಯಾ ಬುಧವಾರ ಪ್ರೀಮಿಯಂ ರೇಂಜ್‌ನ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಕಂಪನಿಯು (Suzuki) ಹೊಸ 2023 ಎಕ್ಸಿಸ್‌ 125, ಎವ್‌ನಿಸ್‌ ಮತ್ತು ಬರ್ಗ್‌ಮನ್‌ ಸ್ಟ್ರೀಟ್‌ ಶ್ರೇಣಿಯ ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್‌ಗಳು 20% ಎಥೆನಾಲ್‌ ಮಿಶ್ರಣವಿರುವ ಪೆಟ್ರೋಲ್‌ನಿಂದಲೂ ಚಲಿಸುವ ಸಾಮರ್ಥ್ಯ ಹೊಂದಿದೆ.

ಬೆಲೆ :
ಸುಜುಕಿ ಹೊಸದಾಗಿ ಬಿಡುಗಡೆ ಮಾಡಿರುವ ಸ್ಕೂಟರ್‌ನ ಬೆಲೆಗಳು ಹೀಗಿವೆ (ಎಕ್ಸ್‌ ಶೋ ರೂಂ ಬೆಲೆ)
ಸುಜುಕಿ ಎಕ್ಸಿಸ್‌ 125 : 84,800 ರೂ.
ಸುಜುಕಿ ಎಕ್ಸಿಸ್‌ 125 ರೈಡ್‌ ಕನೆಕ್ಟ್‌ ಎಡಿಷನ್‌ : 89,500 ರೂ.
ಸುಜುಕಿ ಎವ್‌ನಿಸ್‌ : 92,000 ರೂ.
ಸುಜುಕಿ ಎವ್‌ನಿಸ್‌ ರೇಸ್‌ ಎಡಿಷನ್‌ : 92,300 ರೂ.
ಸುಜುಕಿ ಬರ್ಗ್‌ಮನ್ ಸ್ಟ್ರೀಟ್‌ : 93,000 ರೂ
ಸುಜುಕಿ ಬರ್ಗ್‌ಮನ್ ಸ್ಟ್ರೀಟ್‌ ರೈಡ್‌ ಕನೆಕ್ಟ್‌ : 97,000 ರೂ.

ಸುಜುಕಿ ಬಿಡುಗಡೆ ಮಾಡಿರುವ ಹೊಸ ಸ್ಕೂಟರ್‌ ಶ್ರೇಣಿಯಲ್ಲಿ ಅಳವಡಿಸಲಾದ ಎಂಜಿನ್‌ಗಳು OBD2-A ಮಾನದಂಡಗಳನ್ನು ಅನುಸರಿಸಿದ ಕಂಪನಿಯ ಮೊದಲ ವಾಹನಗಳಾಗಿದೆ. OBD2-A ಅಂದರೆ ಆನ್‌–ಬೋರ್ಡ್‌ ಡೈಯಾಗ್ನೋಸ್ಟಿಕ್ಸ್‌ ಸಿಸ್ಟಮ್. ಇದು ಹೊಸ ಸಿಸ್ಟಮ್‌ನ ವೈಫಲ್ಯಗಳನ್ನು ಪತ್ತೆಹಚ್ಚಲು ಮತ್ತು ವಾಹನ ವ್ಯವಸ್ಥೆಯಲ್ಲಿ ಯಾವುದೇ ದೋಷಗಳಿದ್ದ ಸಂದರ್ಭದಲ್ಲಿ ಕನ್ಸೋಲ್‌ ದೀಪಗಳನ್ನು ಬೆಳಗಿಸಲು ಹೆಚ್ಚು ಉಪಯುಕ್ತವಾಗಿದೆ ಎಂದು ಕಂಪನಿಯು ಹೇಳಿದೆ.

ಸುಜುಕಿ ಶಕ್ತಿಶಾಲಿ 125 cc ಎಂಜಿನ್‌ ಅನ್ನು ಇವುಗಳಲ್ಲಿ ನೀಡಿದೆ. ಇದರ ಹೆಚ್ಚಿನ ಕಾರ್ಯಕ್ಷಮತೆಯಿಂದಾಗಿ ಇದು ಸವಾರರ ಮನ ಗೆಲ್ಲಲಿದೆ. ಈಗ ಹೊಸದಾಗಿ ಬಿಡುಗಡೆಯಾಗಿರುವ ಸ್ಕೂಟರ್‌ ಶ್ರೇಣಿಗಳು 20% ಎಥೆನಾಲ್‌ ಮಿಶ್ರಣವಿರುವ ಪೆಟ್ರೋಲ್‌ನಿಂದ ಚಲಿಸಲಿದೆ. ಇದರಿಂದ ಮಾಲಿನ್ಯ ತಡೆಗಟ್ಟಬಹುದಾಗಿದೆ ಮತ್ತು ಮುಂದಿನ ದಿನಗಳಲ್ಲಿ ಇಂಗಾಲದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡಲಿವೆ ಎಂದು ಸುಜುಕಿ ಮೋಟಾರ್‌ಸೈಕಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಮಾರಾಟ, ಮಾರುಕಟ್ಟೆ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ದೇವಶಿಶ್‌ ಹಂದಾ ಹೇಳಿದರು. ಕಂಪನಿಯು ತನ್ನ 2023ರ ಆವೃತ್ತಿಯಲ್ಲಿ ಜಿಕ್ಸರ್‌ ಮತ್ತು ಜಿಕ್ಸರ್‌ SF ಶ್ರೇಣಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ : Tata Starts Scrapping Facility Center: ಟಾಟಾದಿಂದ ಮೊದಲ ಸ್ಕ್ರ್ಯಾಪಿಂಗ್‌ ಸೆಂಟರ್‌ ಪ್ರಾರಂಭ; ಇದು ಹೇಗೆ ಕೆಲಸ ಮಾಡುತ್ತದೆ ಗೊತ್ತಾ…

ಇದನ್ನೂ ಓದಿ : River Indie E-Scooter : ಬಿಡುಗಡೆಯಾದ ತಕ್ಷಣ ಸಂಚಲನ ಮೂಡಿಸಿದ ರಿವರ್‌ ಇಂಡೀ ಎಲೆಕ್ಟ್ರಿಕ್‌ ಸ್ಕೂಟರ್‌; ವೈಶಿಷ್ಟ್ಯಗಳೇನು ಗೊತ್ತಾ…

(Suzuki launched access 125, avenis, and burgman street range scooters in India.)

Comments are closed.