Gautam Gambhir: ನಮ್ಮೂರಿಗೆ ಬಂದು ನಮ್ಮ ಜನರ ಮುಂದೆಯೇ ಗಂಭೀರ್ ಮಾಡಿದ್ದೇನು ಗೊತ್ತಾ?

ಬೆಂಗಳೂರು: (Gautam Gambhir) ಚಿನ್ನಸ್ವಾಮಿ ಕ್ರೀಡಾಂಗಣ (Chinnaswamy Satdiuam) ಸೋಮವಾರ ಅತ್ಯಂತ ರೋಚಕ ಕ್ಷಣಗಳಿಗೆ ಸಾಕ್ಷಿಯಾಯ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ 212 ರನ್ ಗಳಿಸಿದ್ರೂ ಗೆಲ್ಲಲು ಸಾಧ್ಯವಾಗಲಿಲ್ಲ. ಆರ್’ಸಿಬಿ ಸವಾಲನ್ನು ಮೆಟ್ಟಿ ನಿಂತ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಒಂದು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರಿದ್ದ 40 ಸಾವಿರ ಪ್ರೇಕ್ಷಕರು ಪಂದ್ಯದುದ್ದಕ್ಕೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸಿದರು. ತವರು ಪ್ರೇಕ್ಷಕರ ಅಬ್ಬರದ ಮಧ್ಯೆಯೂ ಅಬ್ಬರಿಸಿದ ಮಾರ್ಕಸ್ ಸ್ಟೋಯ್ನಿಸ್ (Marcus Stoinis) ಮತ್ತು ನಿಕೋಲಸ್ ಪೂರನ್ (Nicholas Pooran) ಸಿಡಿಲಬ್ಬರದ ಅರ್ಧಶತಕಗಳನ್ನು ಸಿಡಿಸಿ ಲಕ್ನೋಗೆ ಸೂಪರ್ ಗೆಲುವು ತಂದುಕೊಟ್ಟರು.

ಮೊದಲು ಬ್ಯಾಟ್ ಮಾಡಿದ ಆರ್’ಸಿಬಿ ತಂಡ ನಿಗದಿತ 20 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆ ಹಾಕಿದ್ರೆ, ಕಠಿಣ ಗುರಿ ಬೆನ್ನಟ್ಟಿದ್ದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್’ಗಳಲ್ಲಿ 9 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿ ರೋಚಕ ಗೆಲುವು ದಾಖಲಿಸಿತು. ಮಾರ್ಕಸ್ ಸ್ಟೋಯ್ನಿಸ್ 30 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ನೆರವಿನಿಂದ 65 ರನ್ ಸಿಡಿಸಿದ್ರೆ, ನಿಕೋಲಸ್ ಪೂರನ್ 19 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಅಮೋಘ ಸಿಕ್ಸರ್’ಗಳ ನೆರವಿನಿಂದ ವಿಸ್ಫೋಟಕ 62 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.

ಪಂದ್ಯದ ನಂತರ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಗದರ್ಶಕ ಗೌತಮ್ ಗಂಭೀರ್ (Gautam Gambhir), ಆರ್’ಸಿಬಿ ಅಭಿಮಾನಿಗಳಿಗೆ ಕೈಸನ್ನೆಯಲ್ಲಿ ಟಾಂಗ್ ಕೊಟ್ಟಿದ್ದಾರೆ. ಪಂದ್ಯದುದ್ದಕ್ಕೂ ಡಗೌಟ್’ನಲ್ಲಿ ಕುಳಿತು ಆರ್’ಸಿಬಿ ಅಭಿಮಾನಿಗಳ ಸದ್ದನ್ನು ಕೇಳಿಸಿದ್ದ ಗಂಭೀರ್, ಲಕ್ನೋ ಪಂದ್ಯ ಗೆದ್ದ ನಂತರ “ಬಾಯಿ ಮುಚ್ಚಿ” ಎಂಬ ಅರ್ಥದಲ್ಲಿ ತುಟಿಗೆ ಬೆರಳಿಟ್ಟು ಆರ್’ಸಿಬಿ ಫ್ಯಾನ್ಸ್’ಗೆ ತಿರುಗೇಟು ಕೊಟ್ಟಿದ್ದಾರೆ. ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏಪ್ರಿಲ್ 2ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಾಗ, ಆರ್’ಸಿಬಿ ಅಭಿಮಾನಿಗಳು ಮುಂಬೈ ನಾಯಕ ರೋಹಿತ್ ಶರ್ಮಾ ಅವರನ್ನು ಹೀಯಾಳಿಸಿದ್ದರು, ಅದಕ್ಕೆ ಈಗ ಪ್ರತಿಫಲ ಸಿಕ್ಕಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ.

https://twitter.com/Proud_Indian_45/status/1645497290067693568?s=20

ಲಕ್ನೋ ವಿರುದ್ಧದ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-2023 ಟೂರ್ನಿಯಲ್ಲಿ 2ನೇ ಸೋಲು ಕಂಡಂತಾಗಿದೆ. ಇದು ಪ್ರಸಕ್ತ ಸಾಲಿನಲ್ಲಿ ತವರು ನೆಲದಲ್ಲಿ ಆರ್’ಸಿಬಿಗೆ ಎದುರಾದ ಮೊದಲ ಸೋಲು. ಆಡಿರುವ 3 ಪಂದ್ಯಗಳಲ್ಲಿ 2ನ್ನು ಸೋತು ಒಂದರಲ್ಲಿ ಗೆದ್ದಿರುವ ಆರ್’ಸಿಬಿ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಫಾಫ್ ಡುಪ್ಲೆಸಿಸ್ ಬಳಗ ಶನಿವಾರ (ಏಪ್ರಿಲ್ 15) ನಡೆಯುವ ತನ್ನ 4ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Sachin Tendulkar RCB: ಚಿನ್ನಸ್ವಾಮಿ ಪಿಚ್ ಬಗ್ಗೆ ಕ್ರಿಕೆಟ್ ದೇವರು ನುಡಿದ ಭವಿಷ್ಯ ನಿಜವಾಯ್ತು!

Gautam Gambhir: Do you know what Gambhir did in front of our people

Comments are closed.