Sachin Tendulkar RCB: ಚಿನ್ನಸ್ವಾಮಿ ಪಿಚ್ ಬಗ್ಗೆ ಕ್ರಿಕೆಟ್ ದೇವರು ನುಡಿದ ಭವಿಷ್ಯ ನಿಜವಾಯ್ತು!

ಬೆಂಗಳೂರು: (Sachin Tendulkar RCB) 40 ಓವರ್, 425 ರನ್. 212 ರನ್’ಗಳ ಗುರಿಯನ್ನು ಬೆನ್ನಟ್ಟಿ ರಾಯಲ್ ಚಾಲೆಂಜರ್ಸ್ (Royal Challengers Bangalore) ವಿರುದ್ಧ ರಾಯಲ್ ಗೆಲುವು ದಾಖಲಿಸಿದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants). ಇದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ರೋಚಕ ಪಂದ್ಯದ ಹೈಲೈಟ್ಸ್.

ಮೊದಲು ಬ್ಯಾಟ್ ಮಾಡಿದ ಆರ್’ಸಿಬಿ ತಂಡ ನಿಗದಿತ 20 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆ ಹಾಕಿದ್ರೆ, ಕಠಿಣ ಗುರಿ ಬೆನ್ನಟ್ಟಿದ್ದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್’ಗಳಲ್ಲಿ 9 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿ ರೋಚಕ ಗೆಲುವು ದಾಖಲಿಸಿತು. ಆರ್’ಸಿಬಿ ಬ್ಯಾಟಿಂಗ್ ಮುಗಿದ ಕೂಡಲೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಮಾಡಿದ್ದ ಟ್ವೀಟ್ ಕೊನೆಗೂ ನಿಜವಾಗಿದೆ. ಆರ್’ಸಿಬಿ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ, ನಾಯಕ ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್’ವೆಲ್ ಸ್ಫೋಟಕ ಅರ್ಧಶತಕಗಳನ್ನು ಬಾರಿಸಿದ್ದರು. ಕೊಹ್ಲಿ 44 ಎಸೆತಗಳಲ್ಲಿ 61 ರನ್ ಸಿಡಿಸಿದ್ರೆ, ಫಾಫ್ 46 ಎಸೆತಗಳಲ್ಲಿ ಅಜೇಯ 79 ರನ್ ಸಿಡಿಸಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಅಬ್ಬರಿಸಿದ ಮ್ಯಾಕ್ಸ್’ವೆಲ್ ಕೇವಲ 29 ಎಸೆತಗಳಲ್ಲಿ 59 ರನ್ ಚಚ್ಚಿದರು.

ಕೊಹ್ಲಿ, ಫಾಫ್, ಮ್ಯಾಕ್ಸಿ ಅಬ್ಬರದ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಟ್ವೀಟ್ ಒಂದನ್ನು ಮಾಡಿದ್ದರು. “ಚಿನ್ನಸ್ವಾಮಿ ಪಿಚ್’ನಲ್ಲಿ 210 ರನ್ ಕೂಡ ಸೇಫ್ ಅಲ್ಲ ಅಂತ ನನಗನ್ನಿಸುತ್ತಿದೆ” ಎಂದು ಸಚಿನ್ ಟ್ವಿಟರ್’ನಲ್ಲಿ ಬರೆದುಕೊಂಡಿದ್ದರು.

ಕೊನೆಗೆ ಸಚಿನ್ ಮಾಡಿದ ಟ್ವೀಟ್ ನಿಜವಾಗಿದೆ. ಆರ್’ಸಿಬಿ ಒಡ್ಡಿದ 212 ರನ್’ಗಳ ಗುರಿಯನ್ನು ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್, ಸೋಲಿನ ಸುಳಿಯಿಂದ ಮೇಲೆದ್ದು ಬಂದು ಒಂದು ವಿಕೆಟ್’ನ ರೋಮಾಂಚನಕಾರಿ ಗೆಲುವು ದಾಖಲಿಸಿತು. ಮಾರ್ಕಸ್ ಸ್ಟೋಯ್ನಿಸ್ 30 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ನೆರವಿನಿಂದ 65 ರನ್ ಸಿಡಿಸಿದ್ರೆ, ನಿಕೋಲಸ್ ಪೂರನ್ 19 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಅಮೋಘ ಸಿಕ್ಸರ್’ಗಳ ನೆರವಿನಿಂದ ವಿಸ್ಫೋಟಕ 62 ರನ್ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಇದನ್ನೂ ಓದಿ : Shreyas Iyer set for Surgery in London : ಶ್ರೇಯಸ್ ಅಯ್ಯರ್ ಐಪಿಎಲ್ ಕನಸು ನುಚ್ಚುನೂರು ; ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೂ ಇಲ್ಲ!

Sachin Tendulkar RCB: Cricket god’s prediction about Chinnaswamy pitch came true!

Comments are closed.