Hardik Pandya Ban : ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ (Mumbai Indians captain Hardik Pandya) ಒಂದು ಪಂದ್ಯದಿಂದ ನಿಷೇಧ ಶಿಕ್ಷೆ ಹೇರಲಾಗಿದ್ದು, 30 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಶುಕ್ರವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಲಕ್ನೋ ಸೂಪರ್ ಜಯಂಟ್ಸ್ (Lucknow Super Giants) ವಿರುದ್ಧ 18 ರನ್’ಗಳಿಂದ ಸೋಲು ಕಂಡಿತ್ತು. ಇದರೊಂದಿಗೆ ಮುಂಬೈ ಆಡಿದ 14 ಪಂದ್ಯಗಳಲ್ಲಿ 4ನ್ನು ಗೆದ್ದು, 10 ಪಂದ್ಯಗಳಲ್ಲಿ ಸೋಲು ಕಂಡು ಕೇವಲ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.

ಲಕ್ನೋ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ (slow over rate) ಕಾರಣಕ್ಕೆ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರೂ. ದಂಡ ಹಾಗೂ ಒಂದು ಪಂದ್ಯದ ನಿಷೇಧ ಹೇರಲಾಗಿದೆ. ಲಕ್ನೋ ವಿರುದ್ಧದ ಪಂದ್ಯಕ್ಕೂ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಮುಂಬೈ ತಂಡ ನಿಧಾನಗತಿಯ ಬೌಲಿಂಗ್ ನಡೆಸಿತ್ತು. ಸತತ 2 ಪಂದ್ಯಗಳಲ್ಲಿ ಸ್ಲೋ ಓವರ್ ರೇಟ್ ಕಾರಣಕ್ಕೆ ಮುಂಬೈ ನಾಯಕ ಪಾಂಡ್ಯಗೆ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ : IPL 2024 Food Poisoning For RCB Fan: ಪಂದ್ಯ ವೀಕ್ಷಿಸಲು ಬಂದವರಿಗೆ ಹಳಸಿದ ಆಹಾರ ಕೊಟ್ಟ ಆರೋಪ, KSCA ವಿರುದ್ಧ ಎಫ್ಐಆರ್!
ಲಕ್ನೋ ಸೂಪರ್ ಜಯಂಟ್ಸ್ ವಿರುದ್ಧದ ಸೋಲಿನೊಂದಿಗೆ ಈ ಬಾರಿಯ ಐಪಿಎಲ್’ನಲ್ಲಿ ಮುಂಬೈ ತಂಡದ ಅಭಿಯಾನ ಅಂತ್ಯಗೊಂಡಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಮೇಲೆ ಹೇರಿರುವ ನಿಷೇಧದ ಕಥೆಯೇನು ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಪಾಂಡ್ಯ ಮೇಲೆ ಹೇರಲಾಗಿರುವ ನಿಷೇಧ ಮುಂದಿನ ವರ್ಷದ ಐಪಿಎಲ್’ನಲ್ಲಿ ಕಾರ್ಯರೂಪಕ್ಕೆ ಬರಲಿದೆ.

ಹಾರ್ದಿಕ್ ಪಾಂಡ್ಯಗೆ ಒಂದು ಪಂದ್ಯದ ನಿಷೇಧ ಹೇರಲಾಗಿರುವ ಕಾರಣ, ಮುಂದಿನ ವರ್ಷದ ಐಪಿಎಲ್’ನ ಮೊದಲ ಪಂದ್ಯದಲ್ಲಿ ಪಾಂಡ್ಯ ಆಡುವಂತಿಲ್ಲ. ಐಪಿಎಲ್ 2024 ಟೂರ್ನಿ ಆರಂಭಕ್ಕೂ ಮೊದಲೇ ನಾಯಕ ಪಟ್ಟದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ನಾಯಕನ ಪಟ್ಟ ಕಟ್ಟಲಾಗಿತ್ತು.
ಇದನ್ನೂ ಓದಿ : Last Match For Rahul & Rohit: ಲಕ್ನೋ ಪರ ರಾಹುಲ್’ಗೆ ಇಂದೇ ಲಾಸ್ಟ್ ಮ್ಯಾಚ್, ಮುಂಬೈ ಪರ ಕೊನೆಯ ಪಂದ್ಯವಾಡಲಿದ್ದಾರೆ ರೋಹಿತ್ !
ಮುಂಬೈ ನಾಯಕತ್ವ ವಹಿಸಿದ ಮೊದಲ ವರ್ಷವೇ ನಾಯಕನಾಗಿ ಹಾರ್ದಿಕ್ ಪಾಂಡ್ಯ ದಯನೀಯ ವೈಫಲ್ಯ ಎದುರಿಸಿದು, 14 ಪಂದ್ಯಗಳಲ್ಲಿ ಕೇವಲ 4 ಗೆಲುವು ಕಂಡಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್’ನಲ್ಲೂ ಎಡವಿರುವ ಪಾಂಡ್ಯ, ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸುವಲ್ಲಿ ವಿಫಲರಾಗಿದ್ದಾರೆ. ಈ ಬಾರಿಯ ಐಪಿಎಲ್’ನಲ್ಲಿ 14 ಪಂದ್ಯಗಳಿಂದ ಕೇವಲ 216 ರನ್ ಗಳಿಸಿರುವ ಪಾಂಡ್ಯ, ಬೌಲಿಂಗ್’ನಲ್ಲಿ 11 ವಿಕೆಟ್’ಗಳನ್ನಷ್ಟೇ ಪಡೆದಿದ್ದಾರೆ.
ಇದನ್ನೂ ಓದಿ : Virat Kohli’s Daughter: ಅಪ್ಪನಂತೆ ಮಗಳು, 3ನೇ ವಯಸ್ಸಲ್ಲೇ ಬ್ಯಾಟ್ ಬೀಸುತ್ತಿದ್ದಾಳಂತೆ ವಿರಾಟ್ ಕೊಹ್ಲಿ ಪುತ್ರಿ !
Hardik Pandya Banned For One Match in IPL 2024 ! What is the story ?