Highest score in ODI Debut : ಏಕದಿನ ಪದಾರ್ಪಣೆಯಲ್ಲಿ ಅತೀ ಹೆಚ್ಚು ರನ್: ಟಾಪ್-5ನಲ್ಲಿ ನಾಲ್ವರು ಕನ್ನಡಿಗರು

ಬೆಂಗಳೂರು: (Highest score in ODI Debut) ಕಳೆದ 48 ವರ್ಷಗಳಲ್ಲಿ ಇದುವರೆಗೆ ಒಟ್ಟು 242 ಆಟಗಾರರು ಏಕದಿನ ಕ್ರಿಕೆಟ್’ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಆದರೆ ಏಕದಿನ ಪದಾರ್ಪಣೆಯ ಪಂದ್ಯದಲ್ಲೇ ಶತಕ ಬಾರಿಸಿರುವ ಆಟಗಾರನ ಒಬ್ಬನೇ ಒಬ್ಬ. ಅವರೇ ನಮ್ಮ ಕನ್ನಡಿಗ ಕೆ.ಎಲ್ ರಾಹುಲ್. 2016ರ ಜಿಂಬಾಬ್ವೆ ಪ್ರವಾಸ ದಲ್ಲಿ ವೃತ್ತಿಜೀವನದ ಮೊದಲ ಏಕದಿನ ಪಂದ್ಯವಾಡಿದ್ದ ರಾಹುಲ್ (KL Rahul), ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿ ದಾಖಲೆ ಬರೆದಿದ್ದರು. ಈ ವರ್ಷ ಜಿಂಬಾಬ್ವೆ ಪ್ರವಾಸದಲ್ಲಿರುವ ಭಾರತ ಏಕದಿನ ತಂಡವನ್ನು ಕೆ.ಎಲ್ ರಾಹುಲ್ ಮುನ್ನಡೆಸುತ್ತಿದ್ದಾರೆ.

ಕುತೂಹಲಕಾರಿ ಸಂಗತಿ ಏನಂದ್ರೆ, ಭಾರತ ಪರ ಏಕದಿನ ಪದಾರ್ಪಣೆಯ ಪಂದ್ಯದಲ್ಲಿ ಅತೀ ಹೆಚ್ಚು ರನ್ (Highest score in ODI Debut for India) ಗಳಿಸಿರುವ ಅಗ್ರ ಐವರು ಆಟಗಾರರಲ್ಲಿ ನಾಲ್ಕು ಮಂದಿ ನಮ್ಮ ಕರ್ನಾಟಕದವರು. ಈ ಪೈಕಿ ಕೆ.ಎಲ್ ರಾಹುಲ್, ರಾಬಿನ್ ಉತ್ತಪ್ಪ (Robin Uthappa) ಮತ್ತು ಹಾಲಿ ಐಪಿಎಲ್ ಚೇರ್ಮನ್ ಆಗಿರುವ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ (IPL Chairman Brijesh Patel) ಟಾಪ್-3ನಲ್ಲಿದ್ದಾರೆ. ಕರ್ನಾಟಕದ ಮತ್ತೊಬ್ಬ ಆಟಗಾರ ಮನೀಶ್ ಪಾಂಡೆ (Manish Pandey) 5ನೇ ಸ್ಥಾನದಲ್ಲಿದ್ದಾರೆ.

ಏಕದಿನ ಪದಾರ್ಪಣೆಯಲ್ಲಿ ಭಾರತ ಪರ ಅತೀ ಹೆಚ್ಚು ರನ್.

  1. ಕೆ.ಎಲ್ ರಾಹುಲ್ (ಕರ್ನಾಟಕ): 100* ರನ್, ಜಿಂಬಾಬ್ವೆ ವಿರುದ್ಧ (2016, ಹರಾರೆ)
  2. ರಾಬಿನ್ ಉತ್ತಪ್ಪ (ಕರ್ನಾಟಕ): 86 ರನ್, ಇಂಗ್ಲೆಂಡ್ ವಿರುದ್ಧ (2006, ಇಂದೋರ್)
  3. ಬ್ರಿಜೇಶ್ ಪಟೇಲ್ (ಕರ್ನಾಟಕ): 82 ರನ್, ಇಂಗ್ಲೆಂಡ್ ವಿರುದ್ಧ (1974, ಲೀಡ್ಸ್)
  4. ನವಜೋತ್ ಸಿಂಗ್ ಸಿಧು (ಪಂಜಾಬ್): 73 ರನ್, ಆಸ್ಟ್ರೇಲಿಯಾ ವಿರುದ್ಧ (1987, ಚೆನ್ನೈ)
  5. ಮನೀಶ್ ಪಾಂಡೆ (ಕರ್ನಾಟಕ): 71 ರನ್, ಜಿಂಬಾಬ್ವೆ ವಿರುದ್ಧ (2015, ಹರಾರೆ)

ರಾಹುಲ್ ಚೊಚ್ಚಲ ಏಕದಿನ ಪಂದ್ಯದಲ್ಲೇ ಶತಕ ಬಾರಿಸುವ ಮುನ್ನ, ಭಾರತ ಪರ ಏಕದಿನ ಪದಾರ್ಪಣೆಯ ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಕೊಡಗಿನ ವೀರ ರಾಬಿನ್ ಉತ್ತಪ್ಪ ಅವರ ಹೆಸರಲ್ಲಿತ್ತು. 2006ರಲ್ಲಿ ಇಂದೋರ್’ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ರಾಬಿನ್ ಉತ್ತಪ್ಪ ಮೊದಲ ಪಂದ್ಯದಲ್ಲೇ 86 ರನ್ ಗಳಿಸಿದ್ದರು. ಬ್ರಿಜೇಶ್ ಪಟೇಲ್ 1974ರಲ್ಲಿ ಲೀಡ್ಸ್’ನಲ್ಲಿ ಆಡಿದ ತಮ್ಮ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 82 ರನ್ ಬಾರಿಸಿದ್ದರು. ಕರ್ನಾಟಕದ ಮನೀಶ್ ಪಾಂಡೆ 2015ರಲ್ಲಿ ಹರಾರೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿ, ಆ ಪಂದ್ಯದಲ್ಲಿ 73 ರನ್ ಗಳಿಸಿದ್ದರು.

ಇದನ್ನೂ ಓದಿ : Vinod Kambli : ಸಚಿನ್ ಆತ್ಮೀಯ ಸ್ನೇಹಿತ ಕಾಂಬ್ಳಿಗೆ ಇದೆಂಥಾ ದುರ್ಗತಿ ? ಕೆಲಸ ಹುಡುಕುತ್ತಿದ್ದಾರೆ ಮಾಜಿ ಕ್ರಿಕೆಟರ್

ಇದನ್ನೂ ಓದಿ : Janaki Sudhir photo viral : ಮೈಗೆ ಬಟ್ಟೆ ಬದಲು ಬಂಗಾರ ಸುತ್ತಿಕೊಂಡ ಸುಂದರಿ: ಜಾನಕಿ ಸುಧೀರ್ ಪೋಟೋ ವೈರಲ್

Highest score in ODI Debut in India Four Kannadigas in top-5

Comments are closed.