Minister ST Somashekhar : ಸಿದ್ದರಾಮಯ್ಯ ಒಳ್ಳೆಯ ಮಾತನಾಡಲಿ ಎಂದು ಚಾಮುಂಡಿಯಲ್ಲಿ ಪ್ರಾರ್ಥಿಸುವೆ : ಎಸ್​.ಟಿ ಸೋಮಶೇಖರ್​ ವ್ಯಂಗ್ಯ

ಮೈಸೂರು : outrage against Siddaramaiah : ರಾಜ್ಯದಲ್ಲಿ ವೀರ ಸಾವರ್ಕರ್​ ಫೋಟೋ ವಿವಾದ ವಿಚಾರವಾಗಿ ನಡೆದ ಗಲಭೆಗಳ ಸಂಬಂಧ ಪ್ರತಿಕ್ರಯಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್​ ಫೋಟೋ ಯಾಕಿಡಬೇಕು ಎಂದು ಪ್ರಶ್ನಿಸಿದ್ದರು. ಸಿದ್ದರಾಮಯ್ಯರ ಈ ಹೇಳಿಕೆ ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದೆ. ಈ ಸಂಬಂಧ ಇದೀಗ ಮೈಸೂರಿನಲ್ಲಿ ಸಚಿವ ಎಸ್​.ಟಿ ಸೋಮಶೇಖರ್​ ಪ್ರತಿಕ್ರಿಯಿಸಿದ್ದು ಸಿದ್ದರಾಮಯ್ಯ ಯಾವಾಗಲೂ ವಿವಾದಾತ್ಮಕ ಹೇಳಿಕೆಗಳನ್ನೇ ನೀಡುತ್ತಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಇತ್ತೀಚಿಗೆ ವಿವಾದಾತ್ಮಕ ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಮುಂದೆ ಅವರು ಯಾವುದೇ ವಿವಾದತ್ಮಕ ಹೇಳಿಕೆ ನೀಡದೇ ಇರಲಿ ಎಂದು ಚಾಮುಂಡಿಯಲ್ಲಿ ಪ್ರಾರ್ಥಿಸಿ ಕೊಳ್ಳುತ್ತೇನೆ. ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಅವರ ಮಾತಿಗೆ ಒಂದು ತೂಕವಿರ್ತಿತ್ತು. ಆದರೆ ಇತ್ತೀಚಿಗೆ ಅವರು ಏನು ಮಾತನಾಡುತ್ತಾರೆಂದು ಅವರಿಗೆ ಅರ್ಥವಾಗುತ್ತಿಲ್ಲ. ಕೇವಲ ವಿವಾದಾತ್ಮಕ ಹೇಳಿಕೆಗಳನ್ನೇ ನೀಡುತ್ತಿದ್ದಾರೆ ಎಂದು ಎಸ್​.ಟಿ ಸೋಮಶೇಖರ್​ ಹೇಳಿದ್ದಾರೆ.

ನೆರೆ ಪ್ರವಾಹ ವೀಕ್ಷಣೆಗೆ ಸಿದ್ದರಾಮಯ್ಯ ಕೊಡಗಿಗೆ ಭೇಟಿ ನೀಡಿರುವ ವಿಚಾರವಾಗಿ ಇದೇ ವೇಳೆ ಮಾತನಾಡಿದ ಸೋಮಶೇಖರ್​, ಸಿದ್ದರಾಮಯ್ಯಗೆ ಈಗ ಪುರುಸೊತ್ತಾಗಿದೆ ಎಂದು ಕಾಣಿಸುತ್ತೆ. ಅದಕ್ಕೆ ಇಷ್ಟೊಂದು ತಡವಾಗಿ ಕೊಡಗಿಗೆ ಭೇಟಿ ನೀಡಿದ್ದಾರೆ. ಕಳೆದ 15 ದಿನಗಳಿಂದ ಅವರು ನೆರೆ ವೀಕ್ಷಣೆಗೆ ತೆರಳಿಲ್ಲ. ಅವರಿಗೂ ಸರ್ಕಾರದ ಕಾರು ಸೇರಿದಂತೆ ಎಲ್ಲಾ ಸವಲತ್ತುಗಳು ಇರುತ್ತದೆ. ಅವರೇ ಮೊದಲು ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಸರ್ಕಾರದ ಗಮನ ಸೆಳೆಯಬಹುದಿತ್ತು. ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರವನ್ನು ನೀಡಿದ ಮೇಲೆ ಈಗ ಯಾಕೆ ಹೋಗ್ತಿದ್ದಾರೆ ಎಂಬುದೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪಗೆ ಪಕ್ಷದಲ್ಲಿ ಹಿರಿಯ ಸ್ಥಾನ ನೀಡಿರುವ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಯಿಸಿದ ಅವರು. ಪಕ್ಷದಲ್ಲಿ ಯಡಿಯೂರಪ್ಪರ ಹಿರಿತನ, ಶ್ರಮವನ್ನು ಗಮನಿಸಿದ ಅವರಿಗೆ ದೊಡ್ಡ ಸ್ಥಾನವನ್ನು ನೀಡಲಾಗಿದೆ. ಮುಖ್ಯಮಂತ್ರಿ ಯಾರಾಗಬೇಕು ಎಂಬುದರಿಂದ ಹಿಡಿದು ಎಲ್ಲವನ್ನು ಇದೇ ಸಮಿತಿ ತೀರ್ಮಾನ ಮಾಡುತ್ತದೆ. ಭವಿಷ್ಯದ ಚುನಾವಣೆಯ ದೃಷ್ಟಿಯಿಂದ ಇದು ಒಳ್ಳೆಯ ನಿರ್ಧಾರವಾಗಿದೆ. ಇದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ. ಯಡಿಯೂರಪ್ಪರನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂದು ಕಾಂಗ್ರೆಸ್​ ಸುಮ್ಮನೇ ಆರೋಪ ಮಾಡುತ್ತಿತ್ತು. ರಾಜಕಾರಣಕ್ಕಾಗಿ ಯಡಿಯೂರಪ್ಪರನ್ನು ಕಾಂಗ್ರೆಸ್​ ಪದೇ ಪದೇ ಬಳಕೆ ಮಾಡಿಕೊಳ್ತಿತ್ತು. ಈಗ ಅವರಿಗೆ ಉತ್ತರ ಸಿಕ್ಕಿದೆ ಎಂದು ಎಸ್​.ಟಿ ಸೋಮಶೇಖರ್​ ಹೇಳಿದ್ದಾರೆ.

ಇದನ್ನು ಓದಿ : Yuvraj Singh comeback : ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಶ್ವಕಪ್ ಹೀರೋ, ಕಂಬ್ಯಾಕ್ ಸುಳಿವು ಕೊಟ್ಟ ಯುವರಾಜ್ ಸಿಂಗ್

ಇದನ್ನೂ ಓದಿ : KKR Head Coach Chandrakant Pandit : ಕೋಲ್ಕತಾ ನೈಟ್ ರೈಡರ್ಸ್‌ಗೆ ರಣಜಿ ಹೀರೋ ಚಂದ್ರಕಾಂತ್ ಪಂಡಿತ್ ಹೆಡ್ ಕೋಚ್

Minister ST Somashekhar’s outrage against Siddaramaiah

Comments are closed.