ಕರಾಚಿ: (Asad Rauf died) ಐಸಿಸಿ ಎಲೈಟ್ ಪ್ಯಾನೆಲ್’ನ ಮಾಜಿ ಅಂಪೈರ್, ಪಾಕಿಸ್ತಾನದ ಅಸಾದ್ ರೌಫ್ ಹೃದಯಾಘಾತದಿಂದ ನಿಧನರಾಗಿದ್ದಾರೆ (ICC Elite Panel Umpire Asad Rauf). 66 ವರ್ಷದ ಅಸಾದ್ ರೌಫ್ 2006ರಿಂದ 2013ರವರೆಗೆ ಐಸಿಸಿ ಎಲೈಟ್ ಪ್ಯಾನೆಲ್’ನಲ್ಲಿ ಅಂಪೈರ್ ಆಗಿದ್ದರು. ಆದರೆ 2013ರ ಐಪಿಎಲ್ ಫಿಕ್ಸಿಂಗ್ ಪ್ರಕರಣದಲ್ಲಿ ಅಸಾದ್ ರೌಫ್ ಹೆಸರು ಥಳಕು ಹಾಕಿಕೊಂಡಿದ್ದ ಕಾರಣ ಅವರ ಮೇಲೆ ನಿಷೇಧ ಹೇರಲಾಗಿತ್ತು. ಅಸಾದ್ ರೌಫ್ ನಿಧನಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ, ಮಾಜಿ ಕ್ರಿಕೆಟಿಗ ಉಮರ್ ಅಕ್ಮಲ್, ಅಜರ್ ಮಹ್ಮೂದ್ ಸಹಿತ ಹಲವರು ಟ್ವೀಟ್ ಮೂಲಕ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಸಾದ್ ರೌಫ್ 2000ನೇ ಇಸವಿಯಲ್ಲಿ ಮೊದಲ ಬಾರಿ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವವಹಿಸಿದ್ದರು. 2005ರಲ್ಲಿ ಟೆಸ್ಟ್ ಅಂಪೈರಿಂಗ್’ಗೆ ಪದಾರ್ಪಣೆ ಮಾಡಿದ್ದ ರೌಫ್, 2006ರಲ್ಲಿ ಐಸಿಸಿ ಎಲೈಟ್ ಪ್ಯಾನೆಲ್’ಗೆ ಆಯ್ಕೆಯಾಗಿದ್ದರು.
Former ICC umpire Asad Rauf’s passed away due to cardiac arrest, one of the best umpires in world cricket.
— Zohaib (Cricket King) 🏏 (@Zohaib1981) September 15, 2022
Officiated in 64 Tests (49 as on-field umpire and 15 as TV umpire), 139 ODIs and 28 T20Is.
1st Time LBW Decisions Given by #AsadRauf In all 3 formats Odi, Test & T20. pic.twitter.com/YwwcexdR1t
ಅಂಪೈರಿಂಗ್ ವೃತ್ತಿಜೀವನದಲ್ಲಿ ಒಟ್ಟು 64 ಟೆಸ್ಟ್, 139 ಏಕದಿನ, 28 ಟಿ20 ಹಾಗೂ 11 ಮಹಿಳಾ ಟಿ20 ಪಂದ್ಯಗಳಲ್ಲಿ ಅಸಾದ್ ರೌಫ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಐಪಿಎಲ್ ಸೇರಿದಂತೆ ಒಟ್ಟು 89 ಟಿ20 ಪಂದ್ಯಗಳಲ್ಲಿ ಅಂಪೈರ್ ಆಗಿದ್ದರು. ಅಸಾದ್ ರೌಫ್ ಪಾಕಿಸ್ತಾನದಲ್ಲಿ ಜೀವನ ನಿರ್ವಹಣೆಗಾಗಿ ಶೂ ಹಾಗೂ ಬಟ್ಟೆ ಮಾರುತ್ತಿದ್ದ ಸುದ್ದಿ ಕೆಲ ತಿಂಗಳ ಹಿಂದಷ್ಟೇ ವೈರಲ್ ಆಗಿತ್ತು. ಪಾಕಿಸ್ತಾನದ ಮಾಜಿ ಪ್ರಥಮದರ್ಜೆ ಕ್ರಿಕೆಟಿಗನೂ ಆಗಿದ್ದ ಅಸಾದ್ ರೌಫ್ ಒಟ್ಟು 71 ಫಸ್ಟ್ ಕ್ಲಾಸ್ ಮ್ಯಾಚ್’ಗಳನ್ನಾಡಿದ್ದು, 3,423 ರನ್ ಗಳಿಸಿದ್ದಾರೆ. 40 ಲಿಸ್ಟ್ ಎ ಪಂದ್ಯಗಳಿಂದ 611 ರನ್ ಕಲೆ ಹಾಕಿದ್ದಾರೆ.
ಇದನ್ನೂ ಓದಿ : Virat Kohli Instagram Post : “ಯಾರ ಭಾವನೆಗಳನ್ನೂ ನೋಯಿಸದಿರಿ..” ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್‌ನ ಅರ್ಥ ಏನು ?
ಇದನ್ನೂ ಓದಿ : Robin Uthappa: ಕಾರ್‌ನಲ್ಲೇ ನಿದ್ದೆ, ಆತ್ಮಹತ್ಯೆಯ ಯೋಚನೆ.. ಗೊತ್ತಾ ಕೊಡಗಿನ ಕುವರ ರಾಬಿನ್ ಉತ್ತಪ್ಪನ ಕಣ್ಣೀರ ಕಥೆ ?
ಇದನ್ನೂ ಓದಿ : New Coach For Mumbai Indians: ಜಹೀರ್ ಖಾನ್, ಜಯವರ್ಧನೆಗೆ ಪ್ರಮೋಷನ್.. ಮುಂಬೈ ಇಂಡಿಯನ್ಸ್’ಗೆ ಬರಲಿದ್ದಾರೆ ಹೊಸ ಕೋಚ್
ICC Elite Panel Umpire Asad Rauf died