Rishabh Pant : ವಿಶ್ವಕಪ್‌ಗಿಲ್ಲ ರಿಷಭ್ ಪಂತ್, ಬೆಂಗಳೂರಿಗೆ ಬಂದದ್ದೇಕೆ ಸ್ಫೋಟಕ ವಿಕೆಟ್ ಕೀಪರ್?

ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ಇದೀಗ ಚೇತರಿಸಿಕೊಳ್ಳುತ್ತಿರುವ ಭಾರತ ತಂಡದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಮುಂಬರುವ ಐಸಿಸಿ ಏಕದಿನ ವಿಶ್ವಕಪ್ (ICC Men’s World Cup 2023) ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಮುಂದಿನ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಭಾರತದಲ್ಲೇ ನಡೆಯಲಿದೆ. ರಿಷಭ್ ಪಂತ್ ಚೇತರಿಕೆಗೆ ಇನ್ನೂ 7ರಿಂದ 8 ತಿಂಗಳುಗಳು ಬೇಕಾಗಿರುವುದರಿಂದ ವಿಶ್ವಕಪ್ ಜೊತೆಗೆ ಏಷ್ಯಾಕಪ್ ಟೂರ್ನಿಗೂ ರಿಷಭ್ ಪಂತ್ ಅಲಭ್ಯರಾಗಲಿದ್ದಾರೆ.

ರಿಷಭ್ ಪಂತ್ ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದರೂ, ಯಾವ ಸಪೋರ್ಟ್ ಇಲ್ಲದೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲು ಇನ್ನೂ ಸಮಯ ಹಿಡಿಯಲಿದ್ದು, ಮುಂದಿನ ವರ್ಷದ ಜನವರಿಯಲ್ಲಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ. ಕಳೆದ ಕೆಲ ದಿನಗಳಿಂದ ರಿಷಬ್ ಪಂತ್ ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದಾರೆ. ಇತ್ತೀಚೆಗೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ‌ ವೀಕ್ಷಿಸಲು ರಿಷಭ್ ಪಂತ್, ಊರುಗೋಲು ಸಹಾಯದಿಂದ ಆಗಮಿಸಿದ್ದರು.

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ ಬುಧವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (National Cricket Academy – NCA) ಆಗಮಿಸಲಿದ್ದು, ಪುನಶ್ಚೇತನ ಶಿಬಿರವನ್ನು ಆರಂಭಿಸಲಿದ್ದಾರೆ. ಕಳೆದ ವರ್ಷದ ಡಿಸೆಂಬರ್ 30ರಂದು ಮುಂಜಾನೆ ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ ಎಂಬಲ್ಲಿ ರಿಷಭ್‌ ಪಂತ್ ಚಲಾಯಿಸುತ್ತಿದ್ದ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು.

ಇದನ್ನೂ ಓದಿ : Sachin Tendulkar Sharjah : ಶಾರ್ಜಾ ಮೈದಾನಕ್ಕೆ ಸಚಿನ್ ಹೆಸರು, ಕ್ರಿಕೆಟ್ ದಿಗ್ಗಜನಿಗೆ ಗೌರವ ಸಲ್ಲಿಸಿದ ಶಾರ್ಜಾ ಕ್ರಿಕೆಟ್ ಸಂಸ್ಥೆ

ಇದನ್ನೂ ಓದಿ : ICC World Test Championship Final : “ಟೆಸ್ಟ್ ವಿಶ್ವಕಪ್ ಫೈನಲ್”ಗೆ ಟೀಮ್ ಇಂಡಿಯಾ ಪ್ರಕಟ : ಅಜಿಂಕ್ಯ ರಹಾನೆ ಕಂಬ್ಯಾಕ್, ಸೂರ್ಯ ಔಟ್

ಡೆಹ್ರಾಡೂನ್’ನಲ್ಲಿರುವ ಗೆಳತಿಯನ್ನು ನೋಡಲು ಮುಂಜಾನೆ ಹೊರಟಿದ್ದ ರಿಷಭ್ ಪಂತ್, ಅತ್ಯಂತ ವೇಗವಾಗಿ ಕಾರು ಚಲಾಯಿಸುತ್ತಿದ್ದರು. ನಿದ್ದೆಯ ಮಂಪರಿನಲ್ಲಿದ್ದ ಕಾರಣ ಕಾರು ರಸ್ತೆ ಡಿವೈಡರ್’ಗೆ ಢಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾಗಿತ್ತು. ನಂತರ ಸ್ಥಳೀಯರು ರಿಷಭ್‌ ಪಂತ್ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿ ಡೆಹ್ರಾಡೂನ್ ಆಸ್ಪತ್ರೆಗೆ ದಾಖಲಿಸಿದ್ದರು.

ICC Men’s World Cup 2023 : Rishabh Pant is not in the World Cup, why did he come to Bangalore, the explosive wicket keeper?

Comments are closed.