Kohli Vs Siraj : ಚಿನ್ನಸ್ವಾಮಿಯಲ್ಲಿ ಸಿರಾಜ್ ಬೆವರಿಳಿಸಿದ ಕಿಂಗ್, ಐಪಿಎಲ್‌ನ ಬೆಸ್ಟ್ ಬೌಲರ್‌ಗೆ ಹಿಗ್ಗಾಮುಗ್ಗ ಬಾರಿಸಿದ ವಿರಾಟ್ : ವೀಡಿಯೊ ವೈರಲ್

ಬೆಂಗಳೂರು: ಈ ಬಾರಿಯ ಐಪಿಎಲ್‌ನ ಬೆಸ್ಟ್ ಬೌಲರ್ ಯಾರು ಎಂಬ ಪ್ರಶ್ನೆಗೆ ಒಂದೇ ಉತ್ತರ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಬೆಂಕಿ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj). ಐಪಿಎಲ್‌ನಲ್ಲಿ ಧೂಳೆಬ್ಬಿಸುತ್ತಿರುವ ಬಲಗೈ ವೇಗಿ ಮೊಹಮ್ಮದ್ ಸಿರಾಜ್, ಘಟಾನುಘಟಿ (Kohli Vs Siraj) ಬ್ಯಾಟ್ಸ್‌ಮನ್‌ಗಳನ್ನೇ ಬೆಚ್ಚಿ ಬೀಳಿಸಿದ್ದಾರೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಆಡಿರುವ 7 ಪಂದ್ಯಗಳಿಂದ ಸಿರಾಜ್ 7.14ರ ಉತ್ತಮ ಎಕಾನಮಿಯಲ್ಲಿ 13 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದಾರೆ.

ಟಿ20 ಕ್ರಿಕೆಟ್’ನ ದೈತ್ಯ ದಾಂಡಿಗರೇ ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಯನ್ನು ಎದುರಿಸಲು ಪರದಾಡುತ್ತಿರುವ ಹೊತ್ತಲ್ಲಿ, ಅಲ್ಲೊಬ್ಬ ಕಿಂಗ್ ಸಿರಾಜ್ ಬೆವರಿಳಿಸಿದ್ದಾನೆ. ಆತ “ಕಿಂಗ್ ಕೊಹ್ಲಿ”. ಬುಧವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯವನ್ನಾಡಲಿದೆ. ಈ ಪಂದ್ಯಕ್ಕೆ ಪೂರ್ವಭಾವಿಯಾಗಿ ಆರ್’ಸಿಬಿ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಕಠಿಣ ಅಭ್ಯಾಸ ನಡೆಸಿತು. ಈ ವೇಳೆ ವೇಗಿ ಮೊಹಮ್ಮದ್ ಸಿರಾಜ್ ಮತ್ತು ವಿರಾಟ್ ಕೊಹ್ಲಿ (Virat Kohli) ನಡುವಿನ ಮುಖಾಮುಖಿ ಗಮನ ಸೆಳೆಯಿತು.

ಐಪಿಎಲ್’ನಲ್ಲಿ ಅಮೋಘ ಫಾರ್ಮ್’ನಲ್ಲಿರುವ ಸಿರಾಜ್ ಮೊದಲೆರಡು ಎಸೆತಗಳಲ್ಲಿ ವಿರಾಟ್ ಕೊಹ್ಲಿಯವರನ್ನೇ ಬೆಚ್ಚಿ ಬೀಳಿಸಿದರು. ನಂತರ ಲಯ ಕಂಡುಕೊಂಡ ಕೊಹ್ಲಿ, ಸಿರಾಜ್ ಎಸೆತಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದ ನಾಲ್ಕೂ ದಿಕ್ಕುಗಳಿಗೆ ಬಡಿದಟ್ಟಿದರು. ಈ ವೀಡಿಯೊವನ್ನು ಆರ್’ಸಿಬಿ ಫ್ರಾಂಚಿಸಿ ತನ್ನ ಟ್ವಿಟರ್ ಅಕೌಂಟರ್’ನಲ್ಲಿ ಪೋಸ್ಟ್ ಮಾಡಿದೆ.

ಇದನ್ನೂ ಓದಿ : Sachin Tendulkar Sharjah : ಶಾರ್ಜಾ ಮೈದಾನಕ್ಕೆ ಸಚಿನ್ ಹೆಸರು, ಕ್ರಿಕೆಟ್ ದಿಗ್ಗಜನಿಗೆ ಗೌರವ ಸಲ್ಲಿಸಿದ ಶಾರ್ಜಾ ಕ್ರಿಕೆಟ್ ಸಂಸ್ಥೆ

ಈ ಬಾರಿಯ ಐಪಿಎಲ್’ನಲ್ಲಿ ಅಬ್ಬರಿಸುತ್ತಿರುವ ಕಿಂಗ್ ಕೊಹ್ಲಿ, ಆಡಿರುವ 7 ಪಂದ್ಯಗಳಿಂದ 46.50 ಸರಾಸರಿಯಲ್ಲಿ, 141.62ರ ಸ್ಟ್ರೈಕ್’ರೇಟ್’ನೊಂದಿಗೆ 4 ಅರ್ಧಶತಕಗಳ ಸಹಿತ 279 ರನ್ ಕಲೆ ಹಾಕಿದ್ದಾರೆ. ಕಳೆದೆರಡು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನೂ ವಹಿಸಿದ್ದ ವಿರಾಟ್ ಕೊಹ್ಲಿ, ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್’ಸಿಬಿ ಭರ್ಜರಿ ಗೆಲುವು ತಂದು ಕೊಟ್ಟಿದ್ದಾರೆ. ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಕಿಂಗ್ ಕೊಹ್ಲಿ ಆರ್’ಸಿಬಿ ಸಾರಥ್ಯ ವಹಿಸಲಿದ್ದು, ತಂಡಕ್ಕೆ ಹ್ಯಾಟ್ರಿಕ್ ಗೆಲುವು ತಂದುಕೊಡುವ ವಿಶ್ವಾಸದಲ್ಲಿದ್ದಾರೆ.

Kohli Vs Siraj: Siraj made King sweat in Chinnaswamy, Virat beat the best bowler of IPL: Video viral

Comments are closed.