U-19 Women’s WC FINAL : ನಾಳೆ ಇಂಡಿಯಾ Vs ಇಂಗ್ಲೆಂಡ್ ಫೈನಲ್; ಚಾಂಪಿಯನ್ ಪಟ್ಟಕ್ಕೆ ಭಾರತವೇ ಫೇವರಿಟ್

ಪೋಚೆಫ್’ಸ್ಟ್ರೂಮ್ (ದಕ್ಷಿಣ ಆಫ್ರಿಕಾ): ಚೊಚ್ಚಲ ಆವೃತ್ತಿಯ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ (ICC Women’s U-19 Women’s WC FINAL) ಫೈನಲ್ ಪಂದ್ಯ ನಾಳೆ ನಡೆಯಲಿದ್ದು, ಭಾರತ ಮತ್ತು ಇಂಗ್ಲೆಂಡ್ ( India W Vs England W) ತಂಡಗಳು ಮುಖಾಮುಖಿಯಾಗಲಿವೆ. ಶೆಫಾಲಿ ವರ್ಮಾ ನಾಯಕತ್ವದ ಭಾರತ ತಂಡ ಸೆಮಿಫೈನಲ್’ನಲ್ಲಿ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್’ಗಳಿಂದ ಸುಲಭವಾಗಿ ಮಣಿಸಿ ಫೈನಲ್ ತಲುಪಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಮತ್ತೊಂದೆಡೆ 2ನೇ ಸೆಮಿಫೈನಲ್’ನಲ್ಲಿ ಆಸ್ಟ್ರೇಲಿಯಾ ತಂಡವನ್ನು 3 ರನ್’ಗಳಿಂದ ರೋಚಕವಾಗಿ ಮಣಿಸಿರುವ ಇಂಗ್ಲೆಂಡ್ ಫೈನಲ್ ತಲುಪಿದೆ. ಸೆಮಿಫೈನಲ್’ನಲ್ಲಿ ಕೇವಲ 99 ರನ್ನಿಗೆ ಆಲೌಟಾಗಿದ್ದ ಇಂಗ್ಲೆಂಡ್, ನಂತರ ಬೌಲಿಂಗ್’ನಲ್ಲಿ ತಿರುಗೇಟು ನೀಡಿ ಕಾಂಗರೂ ಪಡೆಯನ್ನು 96 ರನ್ನಿಗೆ ಕಟ್ಟಿ ಹಾಕಿ ರೋಚಕ ಗೆಲುವು ಸಾಧಿಸಿತ್ತು. ಓಪನರ್’ಗಳಾದ ನಾಯಕಿ ಶೆಫಾಲಿ ವರ್ಮಾ (Shefali Verma)ಮತ್ತು ಉಪನಾಯಕಿ ಶ್ವೇತಾ ಸೆಹ್ರಾವತ್ ಭಾರತದ ಬ್ಯಾಟಿಂಗ್ ಸರದಿಯ ಬೆನ್ನುಬಾಗಿದ್ದು, ಈ ಇಬ್ಬರ ಆಟದ ಮೇಲೆ ಟೀಮ್ ಇಂಡಿಯಾದ ಗೆಲುವು-ಸೋಲು ನಿರ್ಧಾರವಾಗಲಿದೆ.

ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಭಾರತ ಇಲ್ಲಿಯವರೆಗೆ ವಿಶ್ವಕಪ್ ಗೆದ್ದಿಲ್ಲ. ಐಸಿಸಿ ಮಹಿಳಾ ಏಕದಿನ ವಿಶ್ವಕಪ್’ನಲ್ಲಿ ಭಾರತ ತಂಡ ಎರಡು ಬಾರಿ ಫೈನಲ್ ಪ್ರವೇಶಿಸಿದ್ರೂ, ಎರಡು ಬಾರಿಯೂ ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿದೆ. ಆದರೆ ಇದೀಗ ಶೆಫಾಲಿ ವರ್ಮಾ ಸಾರಥ್ಯದಲ್ಲಿ ಟೀಮ್ ಇಂಡಿಯಾ ಮೊದಲ ಮಹಿಳಾ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

U19 ಮಹಿಳಾ ವಿಶ್ವಕಪ್ ಫೈನಲ್

ಭಾರತ Vs ಇಂಗ್ಲೆಂಡ್
ಪಂದ್ಯ ಆರಂಭ: ಸಂಜೆ 5.15ಕ್ಕೆ
ಸ್ಥಳ: ಸೆನ್ವೆಸ್ ಪಾರ್ಕ್, ಪೋಚೆಫ್’ಸ್ಟ್ರೂಮ್ (ದಕ್ಷಿಣ ಆಫ್ರಿಕಾ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : KL Rahul wedding photos : ಮದುವೆ ಮಹೋತ್ಸವದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ರಾಹುಲ್

ಇದನ್ನೂ ಓದಿ : Mahendra Singh Dhoni : ಭಾರತ Vs ನ್ಯೂಜಿಲೆಂಡ್ ಟಿ20 ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ವಿಶೇಷ ಅತಿಥಿ

ಫೈನಲ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

  1. ಶೆಫಾಲಿ ವರ್ಮಾ (ನಾಯಕಿ), 2. ಶ್ವೇತಾ ಸೆಹ್ರಾವತ್ (ಉಪನಾಯಕಿ). 3. ಸೌಮ್ಯ ತಿವಾರಿ, 4. ಗೊಂಗಾಡಿ ತ್ರಿಷಾ, 5. ರಿಚಾ ಘೋಷ್ (ವಿಕೆಟ್ ಕೀಪರ್). 6. ಹೃಷಿತಾ ಬಸು, 7. ಟೈಟಸ್ ಸಧು, 8. ಮನ್ನತ್ ಕಶ್ಯಪ್, 9. ಅರ್ಚನಾ ದೇವಿ, 10. ಪಾರ್ಷವಿ ಚೋಪ್ರಾ, 11. ಸೋನಮ್ ಯಾದವ್.

ಇಂಗ್ಲೀಷ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ICC U-19 Women’s WC FINAL Tomorrow India W Vs England W Final India is the favorite

Comments are closed.