ಸ್ಯಾಂಡಲ್‌ವುಡ್‌ನ ಊರ್ಫಿಯಾದ ನಿವೇದಿತಾ : ಬಾರ್ಬಿ ಸುಂದರಿಯ ವೀಡಿಯೋ ವೈರಲ್

ಸೋಷಿಯಲ್ ಮೀಡಿಯಾದ ಹಾಟ್ ಹಾಟ್ ಸ್ಟಾರ್ ಅಂದ್ರೇ ಅದು ನಿವೇದಿತಾ ಗೌಡ (Barbie Beauty Niveditha Gowda) . ಒಂದಿಲ್ಲೊಂದು ವಿಡಿಯೋ ಹಾಗೂ ಡ್ಯಾನ್ಸ್ ಮೂಲಕವೇ ಸಂಚಲನ ಮೂಡಿಸಿದ ನಟಿ ಹಾಗೂ ರಿಯಾಲಿಟಿ ಶೋ ಸ್ಟಾರ್ ನಿವೇದಿತಾ ಗೌಡ ಈಗ ಊರ್ಫಿ ಜಾವೇದ್ ರನ್ನು ಅನುಕರಿಸಲು ಮುಂದಾಗಿದ್ದಾರೆ. ನಿವೇದಿತಾ ರಿಲೀಸ್ ಮಾಡಿರೋ ಹೊಸ ವಿಡಿಯೋ ಈಗ ನೆಟ್ಟಿಗರಿಗೆ ಆಹಾರವಾಗಿದೆ.

ಸದಾ ಒಂದಿಲ್ಲೊಂದು ವಿಡಿಯೋ, ಸಾಂಗ್, ರೀಲ್ಸ್ ಮೂಲಕವೇ ಸದ್ದು ಮಾಡೋ ನಟಿ ನಿವೇದಿತಾ ಗೌಡ ಇತ್ತೀಚಿಗೆ ಫಾದರ್ ಸ್ಪೆಲಿಂಗ್ ಹೇಳೋಕೆ ಬಾರದಂತೆ ನಟಿಸೋ ವಿಡಿಯೋ ಮಾಡಿ ಟ್ರೋಲ್ ಗೆ ಗುರಿಯಾಗಿದ್ದರು. ಒಂದೆಡೆ ಜನರು ನಿಮಗೆ ಫಾದರ್ ಸ್ಪೆಲ್ಲಿಂಗ್ ಬರಲ್ವಾ ಅಂದ್ರೇ ಇನ್ನೊಂದೆಡೆ ನಿವೇದಿತಾ ಹಾಗೂ ಚಂದನ್ ತಂದೆ ತಾಯಿಯಾಗ್ತಿದ್ದಾರೆ ಅನ್ನೋ ವಿಚಾರವೂ ಸುದ್ದಿ ಯಾಗಿತ್ತು. ಸದ್ಯ ಈಗ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋದಲ್ಲಿ ಬ್ಯುಸಿಯಾಗಿರೋ ನಟಿ ನಿವೇದಿತಾ ಹೊಸ ಅವತಾರದಲ್ಲಿ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ. ನ್ಯೂಸ್ ಪೇಪರ್ ಗಳನ್ನು ಕತ್ತರಿಸಿ ಸಿದ್ಧಪಡಿಸಲಾದ ಡ್ರೆಸ್ ಧರಿಸಿದ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾ ಸೆನ್ಸೆಶನ್ ನಿವೇದಿತಾ ಹಂಚಿಕೊಂಡಿದ್ದಾರೆ.

ಕಪ್ಪು ಬಣ್ಣದ ಟೀ ಶರ್ಟ್ ತೊಟ್ಟು ಅದರ ಮೇಲೆ ನೀ ಲೆಂತ್ ಶಾರ್ಟ್ ಪೇಪರ್ ಸ್ಕರ್ಟ್ ಧರಿಸಿದ ನಿವೇದಿತಾ ಮನೆಯಂಗಳದಲ್ಲೇ ಮೈ ಬಳುಕಿಸುವ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದು ಜನರು ನಿವೇದಿತಾರನ್ನು ಕನ್ನಡದ ಊರ್ಫಿ ಜಾವೇದ್, ಸ್ಯಾಂಡಲ್ ವುಡ್ ನ ಊರ್ಫಿ ಜಾವೇದ್ ಎಂದು ಬಣ್ಣಿಸಿದ್ದಾರೆ. ನಿವೇದಿತಾ ಹಂಚಿಕೊಂಡಿರೋ ಈ ವಿಡಿಯೋಗೆ ಸಖತ್ ನೆಗೆಟಿವ್ ಕಮೆಂಟ್ ಕೂಡ ಬಂದಿದ್ದು ಜನರು ಹಾಕೋಕೆ ಬಟ್ಟೆ ನೇ ಇಲ್ವೇ? ಅಂದಿದ್ದರೇ ಇನ್ನು ಕೆಲವರು ನಿಮಗೆ ಬುದ್ಧಿ ಇಲ್ವಾ? ಯಾಕೆ ಮಕ್ಕಳ ಹಾಗಾಡ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : “ಕ್ರಾಂತಿ” ಬೆನ್ನಲ್ಲೇ ಸೆಟ್ಟೇರುತ್ತಾ ನಟ ದರ್ಶನ್‌ “ವೀರ ಮದಕರಿ ನಾಯಕ” ಸಿನಿಮಾ ?

ಇದನ್ನೂ ಓದಿ : Saptami Gowda : ವಾರಿಯರ್ ಲುಕ್ ನಲ್ಲಿ ಮಿಂಚಿದ ಲೀಲಾ : ಸಪ್ತಮಿ ಗೌಡ ಹೊಸ ಪೋಟೋಸ್ ವೈರಲ್

ಇದನ್ನೂ ಓದಿ : ಸ್ಯಾಂಡಲ್‌ವುಡ್‌ನ ಬಾಕ್ಸ್‌ ಆಫೀಸ್‌ನಲ್ಲಿ ಸುಂಟರಗಾಳಿ ಎಬ್ಬಿಸಿದ “ಕ್ರಾಂತಿ” ಸಿನಿಮಾ

ಇನ್ನೂ ಹಲವರು ನಿಮಗೂ ಊರ್ಫಿಜಾವೇದ್ ಗಾಳಿ ಬೀಸಿದ್ಯಾ ಎಂದು ವ್ಯಂಗ್ಯವಾಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಪ್ರಚಲಿತಕ್ಕೆ ಬಂದ ನಿವೇದಿತಾ ಗೌಡ ತಾವು ಮಾತಾಡೋ ಕನ್ನಡ ಆಕ್ಸಂಟ್ ನಿಂದಲೇ ಪ್ರಸಿದ್ಧಿಗೆ ಬಂದಿದ್ದಾರೆ. ಮಾತ್ರವಲ್ಲ ಉದ್ದನೆಯ ತಲೆಕೂದಲು, ಬಾರ್ಬಿ ಗೊಂಬೆಯಂತಹ ಸೌಂದರ್ಯವೂ ನಿವೇದಿತಾಗೆ ಸ್ಟಾರ್ ಡಮ್ ತಂದುಕೊಟ್ಟಿದೆ. ಪತಿ ಚಂದನ್ ಶೆಟ್ಟಿ ಜೊತೆ ರ್ಯಾಪ್ ವಿಡಿಯೋಗಳನ್ನು ಮಾಡೋ ನಿವೇದಿತಾ ಹಲವು ರಿಯಾಲಿಟಿ ಶೋಗಳ ಮೂಲಕವೂ ಕನ್ನಡಿಗರ ಮನೆಮಾತಾಗಿದ್ದಾರೆ.

Barbie Beauty Niveditha Gowda : Sandalwood’s Urfia Niveditha Gowda: Barbie Beauty Video Goes Viral

Comments are closed.