ICC Under-19 Women’s World Cup : ಐಸಿಸಿ ಮಹಿಳಾ U19 ವಿಶ್ವಕಪ್: ಭಾರತ ತಂಡಕ್ಕೆ ಶೆಫಾಲಿ ವರ್ಮಾ ನಾಯಕಿ

ಬೆಂಗಳೂರು : ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಐಸಿಸಿ ಮಹಿಳಾ U19 ವಿಶ್ವಕಪ್ ಟೂರ್ನಿಗೆ (ICC Under-19 Women’s World Cup) ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಯುವ ಬಲಗೈ ಬ್ಯಾಟರ್ ಶೆಫಾಲಿ ವರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

ಭಾರತ ಸೀನಿಯರ್ ಮಹಿಳಾ ತಂಡದ ಆರಂಭಿಕ ಆಟಗಾರ್ತಿಯಾಗಿರುವ 18 ವರ್ಷದ ಶೆಫಾಲಿ ವರ್ಮಾ, ಭಾರತ ಪರ 21 ಏಕದಿನ, 40 ಟಿ20 ಹಾಗೂ 2 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಟಿ20ಯಲ್ಲಿ 1,091 ರನ್ ಗಳಿಸಿರುವ ಶೆಫಾಲಿ ಏಕದಿನದಲ್ಲಿ 531 ರನ್ ಹಾಗೂ ಟೆಸ್ಟ್’ನಲ್ಲಿ 242 ರನ್ ಕಲೆ ಹಾಕಿದ್ದಾರೆ.

ಐಸಿಸಿ ಮಹಿಳಾ U19 ವಿಶ್ವಕಪ್ ಟೂರ್ನಿ ಮುಂದಿನ ಜನವರಿ 14ರಿಂದ 29ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾ, ಯುಎಇ ಮತ್ತು ಸ್ಕಾಟ್ಲೆಂಡ್ ತಂಡಗಳ ಜೊತೆ ’ಡಿ’ ಗ್ರೂಪ್’ನಲ್ಲಿ ಸ್ಥಾನ ಪಡೆದಿದೆ.

ಜ್ಯೂನಿಯರ್ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ U19 ತಂಡ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದ್ದು, ಈ ಸರಣಿಯಲ್ಲೂ ಟೀಮ್ ಇಂಡಿಯಾವನ್ನು ಶೆಫಾಲಿ ವರ್ಮಾ ಅವರೇ ಮುನ್ನಡೆಸಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಡಿಸೆಂಬರ್ 27ರಿಂದ ಜನವರಿ 4ರವರೆಗೆ ನಡೆಯಲಿದೆ.

ಐಸಿಸಿ ಮಹಿಳಾ U19 ವಿಶ್ವಕಪ್’ಗೆ ಭಾರತ ತಂಡ (India U19 Women’s squad for ICC World Cup):
ಶೆಫಾಲಿ ವರ್ಮಾ(ನಾಯಕಿ), ಶ್ವೇತಾ ಸೆಹ್ರಾವತ್(ಉಪನಾಯಕಿ), ರಿಚಾ ಘೋಶ್(ವಿಕೆಟ್ ಕೀಪರ್), ಜಿ.ತ್ರಿಶಾ, ಸೌಮ್ಯ ತಿವಾರಿ, ಸೋನಿಯಾ ಮೆಹದಿಯಾ, ಹರ್ಲೀ ಗಾಲಾ, ಹೃಶಿತಾ ಬಸು(ವಿಕೆಟ್ ಕೀಪರ್), ಸೋನಮ್ ಯಾದವ್, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ಟೈಟಸ್ ಸಧು, ಫಲಕ್ ನಾಝ್, ಶಬ್ನಮ್ ಎಂ.ಡಿ.
ಮೀಸಲು ಆಟಗಾರ್ತಿಯರು: ಶಿಖಾ, ನಜ್ಲಾ ಸಿಎಂಸಿ, ಯಶಶ್ರೀ.

ಇದನ್ನೂ ಓದಿ : Kuldeep Sen life story : ಕ್ಷೌರಿಕನ ಮಗ ಭಾರತ ಪರ ಏಕದಿನ ಕ್ರಿಕೆಟ್ ಆಡಿದ ರೋಚಕ ಕಥೆ

ಇದನ್ನೂ ಓದಿ : Exclusive : Abu Dhabi T10 League : ಡೆಕ್ಕನ್ ಗ್ಲಾಡಿಯೇಟರ್ಸ್ ಚಾಂಪಿಯನ್ ಆಗಿದ್ದರ ಹಿಂದೆ ಕನ್ನಡಿಗ “ರಾಮನ್ ಎಫೆಕ್ಟ್”

ಇದನ್ನೂ ಓದಿ : India Vs Bangladesh ODI series : 5 ಐಪಿಎಲ್ ಟ್ರೋಫಿ ಗೆದ್ದ ನಾಯಕನ ನೇತೃತ್ವದಲ್ಲಿ ಭಾರತ ತಂಡ ಬರ್ಬಾದ್!

ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಭಾರತ ಮಹಿಳಾ U19 ತಂಡ India U19 Women’s squad for SA series):
ಶೆಫಾಲಿ ವರ್ಮಾ(ನಾಯಕಿ), ಶ್ವೇತಾ ಸೆಹ್ರಾವತ್(ಉಪನಾಯಕಿ), ರಿಚಾ ಘೋಶ್(ವಿಕೆಟ್ ಕೀಪರ್), ಜಿ.ತ್ರಿಶಾ, ಸೌಮ್ಯ ತಿವಾರಿ, ಸೋನಿಯಾ ಮೆಹದಿಯಾ, ಹರ್ಲೀ ಗಾಲಾ, ಹೃಶಿತಾ ಬಸು(ವಿಕೆಟ್ ಕೀಪರ್), ಸೋನಮ್ ಯಾದವ್, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ಟೈಟಸ್ ಸಧು, ಫಲಕ್ ನಾಝ್, ಶಬ್ನಮ್ ಎಂ.ಡಿ., ಶಿಖಾ, ನಜ್ಲಾ ಸಿಎಂಸಿ, ಯಶಶ್ರೀ.

ICC Under-19 Women’s World Cup : ICC Women’s U19 World Cup: Shefali Verma captains India

Comments are closed.