Prettiest Garden : ಉತ್ತರ ಭಾರತದ ಅತಿ ಸುಂದರ ಗಾರ್ಡನ್‌ಗಳು ನಿಮಗೆ ಗೊತ್ತಾ…

ಗಾರ್ಡನ್‌ಗಳು (Gardens) ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ಅಲ್ಲಿರುವ ವಿವಿಧ ರೀತಿಯ ಸಸ್ಯಗಳು ಪ್ರಕೃತಿಯೊಂದಿಗೆ ಸಹಜವಾಗಿ ಸ್ನೇಹ ಬೆಳೆಸುವಂತೆ ಮಾಡುತ್ತದೆ. ಅಲ್ಲಿನ ಹಸಿರು ಹುಲ್ಲು, ಗಿಡಗಳು ದಣಿದ ದೇಹಕ್ಕೆ ಚೈತನ್ಯ ತುಂಬುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರಗೂ ಗಾರ್ಡನ್‌ಗಳಿಗೆ ಭೇಟಿ ನೀಡುವುದೆಂದರೆ ಬಹಳ ಸಂತೋಷ. ಏಕೆಂದರೆ ಉಸಿರುಗಟ್ಟಿಸುವಂತಹ ಮಾಲಿನ್ಯದಿಂದ ಹೊರಬಂದು ಸ್ವಲ್ಪ ಸಮಯ ಕಳೆದರೆ ಮನಸ್ಸಿಗೆ ನೆಮ್ಮದಿ. ಮಾಲಿನ್ಯದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತದೆ. ನಿಮ್ಮ ಕುಟುಂಬದೊಂದಿಗೆ ಮುಂದಿನ ಪ್ರವಾಸವನ್ನು ಈ ಸ್ಥಳಗಳಿಗೆ (Prettiest Garden) ಮೀಸಲಿಡಿ. ಇವು ಉತ್ತರ ಭಾರತದ ಅತ್ಯಂತ ಸುಂದರ ಗಾರ್ಡನ್‌ಗಳಾಗಿವೆ. ಅವುಗಳಿಗೆ ಭೇಟಿ ನೀಡುವುದರಿಂದ ಪ್ರಕೃತಿ ಸೌಂದರ್ಯವನ್ನು ನೋಡಬಹುದಾಗಿದೆ.

ಉತ್ತರ ಭಾರತದ ಅತ್ಯಂತ ಸುಂದರ ಗಾರ್ಡನ್‌ಗಳೆಂದೇ ಹೆಸರಾದ ಕೆಲವು ಗಾರ್ಡನ್‌ಗಳ ಪರಿಚಯ ಇಲ್ಲಿದೆ.

ಶ್ರೀನಗರದ ಶಾಲಿಮರ್‌ ಭಾಗ್‌:
ಇದನ್ನು ಶ್ರೀನಗರದ ಕಿರೀಟ ಎಂದು ಕರೆಯುತ್ತಾರೆ. ಶಾಲಿಮರ್‌ ಭಾಗ್‌ ದಾಲ್‌ ಸರೋವರದ ಪಕ್ಕದಲ್ಲಿದೆ. ಶಾಲಿಮರ್‌ ಎಂದರೆ ಪ್ರೀತಿಯ ವಾಸಸ್ಥಾನ ಎಂದು. ಮೊಘಲ್ ಚಕ್ರವರ್ತಿ ಜಹಾಂಗೀರ್ ತನ್ನ ಪ್ರೀತಿಯ ಪತ್ನಿ ನೂರ್ ಜಹಾನ್ ಗಾಗಿ 1619 ರಲ್ಲಿ ಈ ಉದ್ಯಾನವನ್ನು ನಿರ್ಮಿಸಿದನು. ಇದರಲ್ಲಿರುವ ಒಂದು ಕಾಲುವೆಯು ಉದ್ಯಾನದ ಮಧ್ಯಭಾಗದಿಂದ ಹಾದು ಹೋಗುತ್ತದೆ. ಇದಕ್ಕೆ ದಾಲ್‌ ಸರೋವರದ ನೀರು ಹರಿದು ಬರುತ್ತದೆ.

ಹರಿಯಾಣದ ಪಿಂಜೋರ್‌ ಗಾರ್ಡನ್‌ :
ಹರಿಯಾಣದ ಪಿಂಜೋರ್ ಉದ್ಯಾನವನ್ನು ಮೊಘಲರು 17 ನೇ ಶತಮಾನದಲ್ಲಿ ನಿರ್ಮಿಸಿದರು. ಈ ಉದ್ಯಾನವು 100 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಪಿಂಜೋರ್ ಉದ್ಯಾನದಲ್ಲಿ ಅನೇಕ ಸುಂದರವಾದ ಹೂವುಗಳನ್ನು ನೋಡಬಹುದು. ಕಾರಂಜಿಗಳು ಮತ್ತು ಹಚ್ಚಹಸಿರಿನ ಈ ಉದ್ಯಾನ‌ವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿವಿಧ ಜಾತಿಯ ಪಕ್ಷಿಗಳು ಮತ್ತು ಪ್ರಾಣಿಗಳಿರುವ ಮಿನಿ ಝೂ ಕೂಡ ಅಲ್ಲಿರುವುದು ವಿಶೇಷವಾಗಿದೆ.

ಚಂಡೀಗಢದ ರಾಕ್‌ ಗಾರ್ಡನ್‌ :
ಚಂಡೀಗಢದ ರಾಕ್‌ ಗಾರ್ಡನ್‌ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಏಕೆಂದರೆ ಇಲ್ಲಿನ ಪ್ರತಿಮೆಗಳನ್ನು ಮಾಡಲು ಒಡೆದ ಗಾಜಿನ ಫಲಕಗಳು, ಬಳೆಗಳು ಮುಂತಾದ ತ್ಯಾಜ್ಯ ವಸ್ತುಗಳನ್ನು ಬಳಸಲಾಗಿದೆ. ಇದನ್ನು ಪ್ರೊಫೆಸರ್‌ ನೇಕ್‌ ಚಂದ್‌ ವಿನ್ಯಾಸಗೊಳಿಸಿದ್ದಾರೆ. ಇದು ಕ್ಯಾಪಿಟಲ್‌ ಬಿಲ್ಡಿಂಗ್‌ ಮತ್ತು ಸುಖನಾ ಸರೋವರದ ನಡುವೆ ಇದೆ. ಇಲ್ಲಿನ ವರ್ಣರಂಜಿತ ಕಲಾಕೃತಿಗಳು ಮತ್ತು ಶಿಲ್ಪಗಳ ನೋಡುಗರನ್ನು ಸೆಳೆಯುತ್ತವೆ. ಇಲ್ಲಿರುವ ಮಾನವ ನಿರ್ಮಿತ ಜಲಪಾತ ವಿಶೇಷವಾಗಿದೆ.

ನವದೆಹಲಿಯ ಮೊಘಲ್ ಗಾರ್ಡನ್‌ :
ರಾಷ್ಟ್ರಪತಿ ಭವನದ ಸುತ್ತಲೂ ಎಕರೆಗಟ್ಟಲೆ ಹರಡಿಕೊಂಡಿರುವ ಮೊಘಲ್ ಉದ್ಯಾನಗಳನ್ನು ಮೊಘಲ್ ತಂತ್ರಜ್ಞಾನ ಚಾರ್ ಬಾಗ್‌ನ ಪ್ರಕಾರ ನಿರ್ಮಿಸಲಾಗಿದೆ. ಇದನ್ನು ಜಮ್ಮು ಮತ್ತು ಕಾಶ್ಮೀರದ ಮೊಘಲ್ ಗಾರ್ಡನ್ಸ್‌ಗಳಲ್ಲಿಯೂ ಕಾಣಬಹುದಾಗಿದೆ. ಕೆಲವು ಅಪರೂಪದ ಹೂವುಗಳು ಮತ್ತು ಸಸ್ಯ ಸಂಕುಲಗಳನ್ನು ನೋಡಲು ಇದು ಉತ್ತಮ ಸ್ಥಳವಾಗಿದೆ.

ಶ್ರೀನಗರದ ನಿಶಾತ್‌ ಗಾರ್ಡನ್‌:
ನಿಶಾತ್ ಗಾರ್ಡನ್ ಅಥವಾ ‘ದಿ ಗಾರ್ಡನ್‌ ಆಪ್‌ ಬ್ಲಿಸ್‌’ ಪ್ರಶಾಂತವಾದ ದಾಲ್ ಸರೋವರದ ದಡದಲ್ಲಿದೆ. ಇದರ ಹಿಂದೆ ಹಿಮದಿಂದ ಆವೃತವಾದ ಪಿರ್ ಪಂಜಾಲ್ ಪರ್ವತವಿದೆ. ಈ ಉದ್ಯಾನವು ಸೂರ್ಯಾಸ್ತದ ವೀಕ್ಷಣೆಗೆ ಸೂಕ್ತವಾಗಿದೆ. ಉದ್ಯಾನದ ಹನ್ನೆರಡು ಟೆರೇಸ್‌ಗಳು ಗುಲಾಬಿ, ಲಿಲ್ಲಿ ಮತ್ತು ಆಸ್ಟರ್‌ಗಳಂತಹ ಹೂವಿನ ಸಸ್ಯಗಳಿಂದ ತುಂಬಿವೆ.

ಇದನ್ನೂ ಓದಿ: Goa In December 2022 : ಡಿಸೆಂಬರ್‌ ಟೂರ್‌ ಪ್ಲಾನ್‌ಗೆ ಗೋವಾನೇ ಬೆಸ್ಟ್‌…

ಇದನ್ನೂ ಓದಿ: Winter Tour : ಚಳಿಗಾಲದಲ್ಲಿ ಪ್ರವಾಸಕ್ಕೆ ಹೋಗಬೇಕಾ? ಈ ಸ್ಥಳಗಳಿಗೆ ಖಂಡಿತ ಭೇಟಿ ಕೊಡಿ

( These are the prettiest garden of the north India. Visit in your next trip)

Comments are closed.