ICC WTC final : ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾಗೆ ಅಚ್ಚರಿಯ ಆಟಗಾರನ ಎಂಟ್ರಿ..!

ಬೆಂಗಳೂರು : ಐಪಿಎಲ್ ಬೆನ್ನಲ್ಲೇ ಇಂಗ್ಲೆಂಡ್’ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World Test Championship Final) ಪಂದ್ಯದ ಮೇಲೆ ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ನೆಟ್ಟಿದೆ. ಟೆಸ್ಟ್ ವಿಶ್ವಕಪ್ ಎಂದೇ ಕರೆಯಲ್ಪಡುವ ಈ ಪಂದ್ಯ ಲಂಡನ್’ನ ಓವಲ್ ಮೈದಾನದಲ್ಲಿ (ICC WTC final ) ಜೂನ್ 7ರಂದು ಆರಂಭವಾಗಲಿದ್ದು, ಕಳೆದ ಬಾರಿಯ ರನ್ನರ್ಸ್ ಅಪ್ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.

ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಅಚ್ಚರಿಯ ಹೆಸರೊಂದು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅವರು ಬೇರಾರೂ ಅಲ್ಲ, ಟೀಮ್ ಇಂಡಿಯಾದ ಮಾಜಿ ನಾಯಕ ಅಜಿಂಕ್ಯ ರಹಾನೆ (Ajinkya Rahane). 34 ವರ್ಷದ ಅಜಿಂಕ್ಯ ರಹಾನೆ 2022ರ ಜನವರಿಯ ನಂತರ ಟೆಸ್ಟ್ ಆಡಿಲ್ಲ. ರಹಾನೆ ಸ್ಥಾನವನ್ನು ಮುಂಬೈನ ಮತ್ತೊಬ್ಬ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ ಆಕ್ರಮಿಸಿಕೊಂಡಿದ್ದಾರೆ. ಆದರೆ ಅಯ್ಯರ್ ಗಾಯಗೊಂಡಿರುವ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ಗೆ ಲಭ್ಯರಿಲ್ಲ. ಅಯ್ಯರ್’ಗೆ ಬ್ಯಾಕಪ್ ಬ್ಯಾಟ್ಸ್’ಮನ್ ಆಗಿರುವ ಸೂರ್ಯಕುಮಾರ್ ಯಾದವ್ ದಯನೀಯ ವೈಫಲ್ಯ ಎದುರಿಸುತ್ತಿರುವ ಕಾರಣ, ಮತ್ತೆ ಅಜಿಂಕ್ಯ ರಹಾನೆಗೆ ಮಣೆ ಹಾಕಲು ಬಿಸಿಸಿಐ ಮುಂದಾಗಿದೆ.

ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡುತ್ತಿರುವ ಅಜಿಂಕ್ಯ ರಹಾನೆಗೆ ರೆಡ್ ಬಾಲ್’ನಲ್ಲಿ ಅಭ್ಯಾಸ ನಡೆಸುವಂತೆ ಬಿಸಿಸಿಐ ಸೂಚನೆ ನೀಡಿದ್ದು, ಇದು ಟೆಸ್ಟ್ ಕಂಬ್ಯಾಕ್ ಸೂಚನೆ ಎನ್ನಲಾಗುತ್ತಿದೆ. ಐಪಿಎಲ್ ಮುಗಿಯುತ್ತಿದ್ದಂತೆ ಅಜಿಂಕ್ಯ ರಹಾನೆ ಇಂಗ್ಲೆಂಡ್’ಗೆ ಹಾರಲಿದ್ದು, ಲೀಸೆಸ್ಟರ್’ಶೈರ್ ಪರ ಕೌಂಟಿ ಕ್ರಿಕೆಟ್ ಆಡಲಿದ್ದಾರೆ.

ಇದನ್ನೂ ಓದಿ : Jr. Ponting meets Virat Kohli : ಜ್ಯೂನಿಯರ್ ಪಾಂಟಿಂಗ್‌ನನ್ನು ಭೇಟಿ ಮಾಡಿದ ಕಿಂಗ್ ಕೊಹ್ಲಿ, ಇಲ್ಲಿದೆ ಕ್ಯೂಟ್ ವೀಡಿಯೊ

ಇದನ್ನೂ ಓದಿ : ಐಪಿಎಲ್ ಟೂರ್ನಿಯನ್ನು “ಶ್ರೀಮಂತ ಸಿಂಹಾಸನ”ದಿಂದ ಕೆಳಗಿಳಿಸಲು ಸೌದಿ ಅರೇಬಿಯಾ ಮಾಸ್ಟರ್ ಪ್ಲಾನ್

ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟ್ಸ್’ಮನ್ ಆಗಿರುವ ಅಜಿಂಕ್ಯ ರಹಾನೆ ಟೀಮ್ ಇಂಡಿಯಾ ಪರ ಇದುವರೆಗೆ 82 ಟೆಸ್ಟ್ ಪಂದ್ಯಗಳನ್ನಾಡಿದ್ದು, 12 ಶತಕ ಹಾಗೂ 25 ಅರ್ಧಶತಕಗಳ ನೆರವಿನಿಂದ 4931 ರನ್ ಕಲೆ ಹಾಕಿದ್ದಾರೆ. ವಿದೇಶಿ ನೆಲಗಳಲ್ಲಿ ಭಾರತ ತಂಡದ ಆಪದ್ಬಾಂಧವರಾಗಿದ್ದ ರಹಾನೆ, ಸಾಕಷ್ಟು ಪಂದ್ಯಗಳನ್ನು ತಂಡಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಕಳೆದ ಬಾರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡದ ನಾಯಕತ್ವ ವಹಿಸಿದ್ದ ಅಜಿಂಕ್ಯ ರಹಾನೆ 7 ಪಂದ್ಯಗಳಿಂದ 57,63ರ ಸರಾಸರಿಯಲ್ಲಿ ಒಂದು ದ್ವಿಶತಕ, ಒಂದು ಶತಕ ಹಾಗೂ 2 ಅರ್ಧಶತಕಗಳ ಸಹಿತ 634 ರನ್ ಗಳಿಸಿದ್ದರು.

ICC WTC final : The entry of a surprise player for Team India in the World Test Championship final..!

Comments are closed.