ಸೋಮವಾರ, ಏಪ್ರಿಲ್ 28, 2025
HomeSportsCricketIndia beat Bangladesh by 227 runs : ಇಶಾನ್ ದ್ವಿಶತಕ, ಕೊಹ್ಲಿ ಶತಕ; ಕ್ಲೀನ್...

India beat Bangladesh by 227 runs : ಇಶಾನ್ ದ್ವಿಶತಕ, ಕೊಹ್ಲಿ ಶತಕ; ಕ್ಲೀನ್ ಸ್ವೀಪ್ ಅವಮಾನ ತಪ್ಪಿಸಿದ ರಾಹುಲ್ ನಾಯಕತ್ವ

- Advertisement -

ಛಟ್ಟೋಗ್ರಾಮ್: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ (India Vs Bangladesh ODI series) ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಅವಮಾನದಿಂದ ಪಾರಾಗಿದೆ (India beat Bangladesh by 227 runs ) . ಛಟ್ಟೋಗ್ರಾಮ್’ನಲ್ಲಿ ಜಹೂರ್ ಅಹ್ಮದ್ ಚೌಧರಿ ಸ್ಟೇಡಿಯಂನಲ್ಲಿ ನಡೆದ 3 ಪಂದ್ಯಗಳ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ 227 ರನ್’ಗಳ ಭರ್ಜರಿ ಗೆಲುವು ದಾಖಲಿಸಿ ಕ್ಲೀನ್ ಸ್ವೀಪ್ ಅವಮಾನವನ್ನು ತಪ್ಪಿಸಿಕೊಂಡಿತು. ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಸೋತಿದ್ದ ಟೀಮ್ ಇಂಡಿಯಾ, ಅಂತಿಮ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ನಾಯಕತ್ವದಲ್ಲಿ ಭರ್ಜರಿ ಗೆಲುವು ದಾಖಲಿಸಿತು.

ಇಶಾನ್ ಕಿಶನ್ ದಾಖಲೆಯ ದ್ವಿಶತಕ:
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಪರ ರೋಹಿತ್ ಅನುಪಸ್ಥಿತಿಯಲ್ಲಿ ಶಿಖರ್ ಧವನ್ ಜೊತೆ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ (Ishan Kishan double hundred) ಇನ್ನಿಂಗ್ಸ್ ಆರಂಭಿಸಿದರು. ಸಿಡಿಲಬ್ಬರದ ಆಟವಾಡಿದ ಇಶಾನ್ ಏಕದಿನ ವೃತ್ತಿಜೀವನದಲ್ಲಿ ಚೊಚ್ಚಲ ಶತಕ ಸಿಡಿಸಿದ್ದಷ್ಟೇ ಅಲ್ಲದೆ, ಆ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ್ದು ವಿಶೇಷ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ವೇಗದ ದ್ವಿಶತಕದ ವಿಶ್ವದಾಖಲೆ ನಿರ್ಮಿಸಿದ ಜಾರ್ಖಂಡ್’ನ 24 ವರ್ಷದ ಎಡಗೈ ದಾಂಡಿಗ ಇಶಾನ್ ಕಿಶನ್ 131 ಎಸೆತಗಳಲ್ಲಿ 24 ಬೌಂಡರಿ ಹಾಗೂ 10 ಅಮೋಘ ಸಿಕ್ಸರ್’ಗಳ ನೆರವಿನಿಂದ 210 ರನ್ ಸಿಡಿಸಿ ಔಟಾದರು. ಈ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ದ್ವಿಶತಕ ಸಿಡಿಸಿದ ಭಾರತದ ನಾಲ್ಕನೇ ಆಟಗಾರನಾಗಿ ಮೂಡಿ ಬಂದರು. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕಕ್, ವೀರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದಾರೆ.

40 ತಿಂಗಳ ಬಳಿಕ ಕಿಂಗ್ ಕೊಹ್ಲಿ ವಂಡೇ ಸೆಂಚುರಿ:
ಇಶಾನ್ ಕಿಶನ್ ಅಬ್ಬರದ ಮಧ್ಯೆ ರನ್ ಮಷಿನ್ ಕಿಂಗ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 72ನೇ ಶತಕ ಸಿಡಿಸಿದರು (Virat Kohli 72nd international century). ಈ ಮೂಲಕ ಅತೀ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದವರ ಸಾಲಿನಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದರು. 100 ಶತಕಗಳನ್ನು ಬಾರಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ರೆ, 71 ಶತಕಗಳೊಂದಿಗೆ ಪಾಂಟಿಂಗ್ 3ನೇ ಸ್ಥಾನದಲ್ಲಿದ್ದಾರೆ.

40 ತಿಂಗಳ ನಂತರ ಏಕದಿನ ಕ್ರಿಕೆಟ್’ನಲ್ಲಿ ಶತಕ ಬಾರಿಸಿದ ಕೊಹ್ಲಿ ಪಾಲಿಗೆ ಇದು 44ನೇ ವಂಡೇ ಸೆಂಚುರಿ. ಶತಕದ ಇನ್ನಿಂಗ್ಸ್’ನಲ್ಲಿ 91 ಎಸೆತಗಳನ್ನೆದುರಿಸಿದ ಕಿಂಗ್ ಕೊಹ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್’ಗಳ ಸಹಿತ 113 ರನ್ ಗಳಿಸಿ ಔಟಾದರು. 2ನೇ ವಿಕೆಟ್’ಗೆ ವಿರಾಟ್ ಕೊಹ್ಲಿ ಮತ್ತು ಇಶಾನ್ ಕಿಶನ್ ಜೋಡಿ 190 ಎಸೆತಗಳಲ್ಲಿ ಅಮೋಘ 290 ರನ್’ಗಳ ಜೊತೆಯಾಟವಾಡಿದ್ದರಿಂದ ಭಾರತ 50 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು.

ನಂತರ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 34 ಓವರ್’ಗಳಲ್ಲಿ 182 ರನ್ನಿಗೆ ಆಲೌಟಾಗಿ 227 ರನ್’ಗಳಿಂದ ಹೀನಾಯ ಸೋಲು ಅನುಭವಿಸಿತು. ಸೋಲಿನ ಮಧ್ಯೆಯೂ ಬಾಂಗ್ಲಾ 2-1ರಿಂದ ಸರಣಿ ಗೆದ್ದು ಭಾರತಕ್ಕೆ ಶಾಕ್ ಕೊಟ್ಟಿತು. ಏಕದಿನ ಸರಣಿಯನ್ನು ಆತಿಥೇಯರಿಗೆ ಒಪ್ಪಿಸಿರುವ ಭಾರತ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದ್ದು, ಪ್ರಥಮ ಟೆಸ್ಟ್ ಪಂದ್ಯ ಡಿಸೆಂಬರ್ 14ರಂದು ಛಟ್ಟೋಗ್ರಾಮ್’ನಲ್ಲಿ ಆರಂಭವಾಗಲಿದೆ.

ಇದನ್ನೂ ಓದಿ : Ishan Kishan Double Century : ಏಕದಿನ ಕ್ರಿಕೆಟ್ ನಲ್ಲಿ ಇಶಾನ್ ಕಿಶನ್ ದಾಖಲೆಯ ದ್ವಿಶತಕ

ಇದನ್ನೂ ಓದಿ : Virat Kohli 72nd Century : ವಿರಾಟ್ ಕೊಹ್ಲಿ 72ನೇ ಅಂತಾರಾಷ್ಟ್ರೀಯ ಶತಕ, ಪಾಂಟಿಂಗ್ ದಾಖಲೆ ಮುರಿದ ಕಿಂಗ್

ind vs ban Odi Series India beat Bangladesh by 227 runs Ishan Kishan 200 Runs

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular