IND vs NZ 2nd T20 : ಸೂರ್ಯ ಶತಕದ ಶಿಕಾರಿ, ಕಿವೀಸ್ ವಿರುದ್ಧ ಭಾರತದ ವಿಜಯದ ನಗಾರಿ

ಮೌಂಟ್ ಮೌಂಗನ್ಯುಯ್: IND vs NZ 2nd T20 : ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 (India Vs New Zealand T20 series) ಪಂದ್ಯವನ್ನು 65 ರನ್’ಗಳಿಂದ ಗೆದ್ದುಕೊಂಡ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು. ನಂತರ ಕಠಿಣ ಸವಾಲು ಬೆನ್ನಟ್ಟಿದ ಕಿವೀಸ್ ಪಡೆ 18.5 ಓವರ್’ಗಳಲ್ಲಿ ಕೇವಲ 126 ರನ್’ಗಳಿಗೆ ಆಲೌಟಾಯಿತು. ಭಾರತ ಪರ ಬೌಲಿಂಗ್’ನಲ್ಲಿ ಮಿಂಚಿದ ಆಲ್ರೌಂಡರ್ ದೀಪಕ್ ಹೂಡ 10 ರನ್ನಿತ್ತು 4 ವಿಕೆಟ್ ಕಬಳಿಸಿದರು.

IND vs NZ 2nd T20 : ಸೂರ್ಯಕುಮಾರ್‌ ಯಾದವ್ ಸ್ಪೋಟಕ ಶತಕ

ಟೀಮ್ ಇಂಡಿಯಾ ಪರ ಮಧ್ಯಮ ಕ್ರಮಾಂಕದ ಸ್ಫೋಟಕ ದಾಂಡಿಗ ಸೂರ್ಯಕುಮಾರ್ ಯಾದವ್ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 2ನೇ ಶತಕ ಬಾರಿಸಿ ತಂಡದ ಭರ್ಜರಿ ಗೆಲುವಿನ ರೂವಾರಿಯಾಗಿ ಮೂಡಿ ಬಂದರು. 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಶತಕದೊಂದಿಗೆ ಅಬ್ಬರಿಸಿದರು. 49 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ ಸೂರ್ಯ ಕುಮಾರ್ ಯಾದವ್ ಅವರ ಶತಕದ ಇನ್ನಿಂಗ್ಸ್’ನಲ್ಲಿ 11 ಬೌಂಡರಿಗಳು ಮತ್ತು 7 ಸಿಕ್ಸರ್’ಗಳಿದ್ದವು. 51 ಎಸೆತಗಳಲ್ಲಿ ಅಜೇಯ 111 ರನ್ ಬಾರಿಸಿದ ಸೂರ್ಯಕುಮಾರ್ ಯಾದವ್ 216.65ರ ಸ್ಟ್ರೈಕ್’ರೇಟ್’ನಲ್ಲಿ ಬ್ಯಾಟ್ ಬೀಸಿದರು. 32 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ ಸೂರ್ಯ ಮುಂದಿನ 19 ಎಸೆತಗಳಲ್ಲಿ 61 ರನ್ ಸಿಡಿಸಿದರು.

ಕಳೆದ ಇಂಗ್ಲೆಂಡ್ ಪ್ರವಾಸದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ ಚೊಚ್ಚಲ ಶತಕ ಸಿಡಿಸಿದ್ದರು. ಐಸಿಸಿ ಟಿ20 ಬ್ಯಾಟಿಂಗ್ rankingನಲ್ಲಿ ನಂ.1 ಸ್ಥಾನದಲ್ಲಿರುವ ಸೂರ್ಯ ತಮ್ಮ ಅಮೋಘ ಫಾರ್ಮನ್ನು ನ್ಯೂಜಿಲೆಂಡ್ ಪ್ರವಾಸದಲ್ಲೂ ಮುಂದುವರಿಸಿದ್ದಾರೆ.

ಕಿವೀಸ್ ಪರ ಅನುಭವೀ ವೇಗಿ ಟಿಮ್ ಸೌಥೀ 20ನೇ ಓವರ್’ನ ಸತತ 3 ಎಸೆತಗಳಲ್ಲಿ ಹಾರ್ದಿಕ್ ಪಾಂಡ್ಯ, ದೀಪಕ್ ಹೂಡ ಮತ್ತು ವಾಷಿಂಗ್ಟನ್ ಸುಂದರ್ ವಿಕೆಟ್ ಪಡೆದು ಅಂತಾರಾಷ್ಟ್ರೀಯ ಟಿ20 ವೃತ್ತಿಜೀವನದಲ್ಲಿ 2ನೇ ಹ್ಯಾಟ್ರಿಕ್ ಸಾಧನೆ ಮಾಡಿದರು. ಸರಣಿಯ 3ನೇ ಪಂದ್ಯ ಮಂಗಳವಾರ ನೇಪಿಯರ್’ನಲ್ಲಿ ನಡೆಯಲಿದೆ.

ಇದನ್ನೂ ಓದಿ : Suryakumar Yadav century : ಕಿವೀಸ್ ನಾಡಿನಲ್ಲಿ ಸೂರ್ಯ ಶಿಕಾರಿ, ಟಿ20ಯಲ್ಲಿ 2ನೇ ಶತಕ ಬಾರಿಸಿದ ಸೂರ್ಯಕುಮಾರ್

ಇದನ್ನೂ ಓದಿ : CSK Fielding Coach : ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸುರೇಶ್ ರೈನಾ ಫೀಲ್ಡಿಂಗ್ ಕೋಚ್?

IND vs NZ 2nd T20 Suryakumar Yadav Century Deepak Hooda 4 wicket India Vs New Zealand T20 Series

Comments are closed.