Honey Face Wash:ಮನೆಯಲ್ಲಿಯೇ ತಯಾರಿಸಿಕೊಳ್ಳಿ ಜೇನುತುಪ್ಪದ ಫೇಸ್‌ ವಾಶ್‌

(Honey Face Wash)ಔಷಧವಾಗಿ ಬಳಸುವಂತಹ ಜೇನುತುಪ್ಪ ನಮ್ಮ ಆರೋಗ್ಯವನ್ನು ಕಾಪಾಡುವುದು ಅಷ್ಟೇ ಅಲ್ಲದೆ ಹಲವಾರು ಸೌಂದರ್ಯವರ್ಧಕವಾಗಿ ಮಾರ್ಕೆಟ್‌ ಗೆ ಲಗ್ಗೆ ಇಡುತ್ತಿದೆ. ನೈಸರ್ಗಿಕವಾಗಿ ಸಿಗುವಂತಹ ಪ್ರಾಡಕ್ಟ್‌ ಗಳನ್ನು ಮಹಿಳೆಯರು ಇಷ್ಟ ಪಡುವುದರಿಂದ ಜೇನುತುಪ್ಪದಿಂದ ತಯಾರಿಸಿದ ಫೇಸ್‌ ಪ್ಯಾಕ್‌ , ಫೇಸ್‌ ವಾಶ್‌ ಹಲವು ಪ್ರಾಡಕ್ಟ್‌ ಅನ್ನು ಅಂಗಡಿಗಳಿಂದ ಖರೀದಿ ಮಾಡುತ್ತಾರೆ. ಅಂಗಡಿಗಳಲ್ಲಿ ಖರೀದಿಸುವ ಇಂತಹ ಪ್ರಾಡಕ್ಟ್‌ ಗಳನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ನಾನೀಗ ಮನೆಯಲ್ಲಿಯೇ ಹೇಗೆ ಫೇಸ್‌ ವಾಶ್‌ ಮಾಡಿಕೊಳ್ಳುವುದು ಎನ್ನುವುದರ ಕುರಿತು ಮಾಹಿತಿಯನ್ನು ನೀಡುತ್ತೇನೆ . ಇದರ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Honey Face Wash : ಬೇಕಾಗುವ ಸಾಮಾಗ್ರಿಗಳು:

  • ಜೇನುತುಪ್ಪ
  • ಆಲವೇರಾ ಜೆಲ್‌
  • ಅರಿಶಿಣ
  • ರೋಸ್‌ ವಾಟರ್‌

ಮಾಡುವ ವಿಧಾನ:
ಒಂದು ಡಬ್ಬಿಯಲ್ಲಿ ಅರ್ಧ ಕಪ್ ಜೇನುತುಪ್ಪ, ಅರ್ಧ ಕಪ್ ಆಲವೇರಾ ಜೆಲ್‌, ಒಂದು ಪಿಂಚ್ ಅರಿಶಿಣ, ಒಂದು ‌ ಕಪ್‌ ರೋಸ್‌ ವಾಟರ್‌ ಹಾಕಿಕೊಂಡು ಗಟ್ಟಿಯಾಗಿ ಮುಚ್ಚಳವನ್ನು ಮುಚ್ಚಬೇಕು. ನಂತರ ಡಬ್ಬಿಯನ್ನು ಜೊರಾಗಿ ಅಲ್ಲಾಡಿಸಿದರೆ ಪೇಸ್‌ ವಾಶ್‌ ರೆಡಿಯಾಗುತ್ತದೆ.

ಇದನ್ನೂ ಓದಿ:Banana Hair pack:ಸುಕ್ಕುಗಟ್ಟುವ ಕೂದಲಿಗೆ ಬಾಳೆಹಣ್ಣಿನ ಹೇರ್‌ ಪ್ಯಾಕ್ ಟ್ರೈ ಮಾಡಿ

ಇದನ್ನೂ ಓದಿ:Protein Dosa:ತೂಕ ಇಳಿಸಲು ಆರೋಗ್ಯಕರ ಟೇಸ್ಟಿ ಪ್ರೋಟಿನ್‌ ದೋಸೆ

ಇದನ್ನೂ ಓದಿ:Onion Beauty Tips:ಕೂದಲು ಉದುರುವ ಸಮಸ್ಯೆಗೆ ಈರುಳ್ಳಿಯಲ್ಲಿದೆ ಪರಿಹಾರ

ಜೇನುತುಪ್ಪ:
ಶೀತ , ಕೆಮ್ಮು, ಚರ್ಮದ ಕಾಯಿಲೆಗೆ ಚಿಕಿತ್ಸೆ ನೀಡಲು ಜೇನುತುಪ್ಪ ಅತ್ಯಂತ ಪರಿಣಾಮಕಾರಿಯಾಗಿದೆ .ಪ್ರತಿ ರಾತ್ರಿ ಮಲಗುವ ಮುನ್ನ ಒಂದು ಗಂಟೆ ಮೊದಲು ಹಾಲಿನೊಂದಿಗೆ ಜೇನುತುಪ್ಪ ಮಿಶ್ರಣ ಮಾಡಿ ಸೇವಿಸುವುದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ಅಲ್ಲದೆ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆಮಾಡುತ್ತದೆ.

ಅರಿಶಿಣ:
ಅರಿಶಿಣವನ್ನು ಅಡುಗೆ ಮತ್ತು ಸೌಂದರ್ಯವರ್ಧಕವಾಗಿ ಬಳಸುವುದು ಅಷ್ಟೇ ಅಲ್ಲದೆ ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜೇನುತುಪ್ಪ ಮತ್ತು ನಿಂಬೆ ರಸದೊಂದಿಗೆ ಅರಿಶಿಣವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಪದಾರ್ಥವನ್ನು ಹೊರಹಾಕುತ್ತದೆ. ಅರಿಶಿಣದಲ್ಲಿ ಕರ್ಕ್ಯುಮಿನ್‌ ಅಂಶ ಇರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಿತಿಮೀರಿ ಅರಿಶಿಣ ಸೇವನೆ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಕಿಡ್ನಿಯಲ್ಲಿ ಕಲ್ಲಿರುವವರು ಅರಿಶಿಣವನ್ನು ಸೇವನೆ ಮಾಡಬಾರದು. ಒಂದು ವೇಳೆ ಅರಿಶಿಣವನ್ನು ಸೇವನೆ ಮಾಡುವುದಾದರೆ ವೈದ್ಯರ ಸಲಹೆಯನ್ನು ಪಡೆಯಿರಿ. ಮಧುಮೇಹಿಗಳು ಸೀಮಿತ ಪ್ರಮಾಣದಲ್ಲಿ ಅರಿಶಿಣವನ್ನು ಸೇವಿಸಬೇಕು. ಅತಿಯಾಗಿ ಅರಿಶಿಣ ಸೇವಿಸುವುದರಿಂದ ದೇಹದಲ್ಲಿನ ರಕ್ತವನ್ನು ಕಡಿಮೆ ಮಾಡುತ್ತದೆ. ಕಾಮಾಲೆ ರೋಗ ಇರುವವರು ಆದಷ್ಟು ಅರಿಶಿಣದಿಂದ ದೂರವಿರಬೇಕು.

Make homemade honey face wash :how to prepare honey face wash

Comments are closed.