Gautam Gambhir : T20 ವಿಶ್ವಕಪ್ ನಿಂದ ಹೊರಬಿದ್ದ ಭಾರತ : ಗೌತಮ್ ಗಂಭೀರ್ ರಹಸ್ಯ ಪೋಸ್ಟ್

ಅಡಿಲೇಡ್‌ : (Gautam Gambhir Secret Post)ಅಡಿಲೇಡ್‌ನಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ ಭಾರತ ಗುರುವಾರ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಟಿ 20 ವಿಶ್ವಕಪ್‌ನ್ನು ಗೆಲುವು ಪಡೆಯುವಲ್ಲಿ ತಂಡದ ಕನಸು ಮತ್ತೊಮ್ಮೆ ಭಗ್ನಗೊಂಡ ನಂತರ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮಾನ್‌ ಗೌತಮ್ ಗಂಭೀರ್ ತಮ್ಮ ಟ್ವಿಟರ್‌ ಖಾತೆಯಿಂದ ರಹಸ್ಯ ಟ್ವೀಟ್‌ನ್ನು ಪೋಸ್ಟ್ ಮಾಡಿದ್ದಾರೆ.

ಭಾರತವು 2007 ಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು.ಆದರೆ ನಂತರದಲ್ಲಿ ಭಾರತ ವಿಶ್ವಕಪ್ ಗೆದ್ದಿಲ್ಲ. ಇದೀಗ ಇಂಗ್ಲೆಂಡ್ ತಂಡದ ವಿರುದ್ದದ ಸೋಲು ತಂಡದ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ನಡುವಲ್ಲೇ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.”ನೀವು ತಲುಪಿಸಬಲ್ಲವರಿಂದ ಮಾತ್ರ ನಿರೀಕ್ಷಿಸುತ್ತೀರಿ, ಚಿನ್ ಅಪ್ ಬಾಯ್ಸ್” ಎಂದು ಟ್ವೀಟ್ ಮಾಡಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಹಾರ್ದಿಕ್ ಪಾಂಡ್ಯ ಮತ್ತು ವಿರಾಟ್ ಕೊಹ್ಲಿ ಅವರ ಕ್ರಮವಾಗಿ 63 ಮತ್ತು 50 ರನ್‌ಗಳ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 168/6 ಗಳಿಸಿತ್ತು. ಸವಾಲಿನ ಮೊತ್ತದ ಟಾರ್ಗೆಟ್ ನೀಡಿದ್ದರೂ ಕೂಡ ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಹಾಗೂ ಅಲೆಕ್ಸ್ ಹೇಲ್ಸ್ ಆರ್ಭಟದ ಮುಂದೆ ಲೆಕ್ಕಕ್ಕೇ ಬರದಂತೆ ಆಗಿತ್ತು. ಭಾರತೀಯ ಬೌಲರ್ ಗಳನ್ನು ಮನಬಂದತ್ತೆ ಥಳಿಸಿದ ಈ ಆರಂಭಿಕ ಜೋಡಿ, ವಿಕೆಟ್ ನಷ್ಟವಿಲ್ಲದೇ ಗೆಲುವನ್ನು ದಾಖಲಿಸಿತ್ತು. ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ನಡೆಯಲಿರುವ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್ ಈಗ ಪಾಕಿಸ್ತಾನವನ್ನು ಎದುರಿಸಲಿದೆ.

ಇದನ್ನೂ ಓದಿ : Semi-final phobia for India: ಭಾರತಕ್ಕೆ ಸೆಮೀಸ್ ಫೋಬಿಯಾ. 7 ವರ್ಷಗಳಲ್ಲಿ 4 ವಿಶ್ವಕಪ್ ಸೆಮಿಫೈನಲ್ ಸೋತ ಟೀಮ್ ಇಂಡಿಯಾ

ಇದನ್ನೂ ಓದಿ : India vs England : ಇಂಗ್ಲೆಂಡ್ ವಿರುದ್ದ ಭಾರತಕ್ಕೆ ಹಿನಾಯ ಸೋಲು : ವಿಶ್ವಕಪ್ ಗೆಲ್ಲುವ ಕನಸು ಭಗ್ನ

ಇದನ್ನೂ ಓದಿ : India Vs England Semifinal: ಟಿ20 ವಿಶ್ವಕಪ್ ಸೆಮಿಫೈನಲ್: ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ

ಪಂದ್ಯದ ಬೆನ್ನಲ್ಲೇ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.”ನಿಸ್ಸಂಶಯವಾಗಿ ಸೆಮಿ-ಫೈನಲ್‌ನಲ್ಲಿ ಮುಗಿಸಲು ನಿರಾಶೆಯಾಗಿದೆ. ಬಹುಶಃ ಖಂಡಿತವಾಗಿಯೂ ಒಂದೆರಡು ಹೆಜ್ಜೆ ಮುಂದೆ ಹೋಗಲು ಇಷ್ಟಪಟ್ಟಿರಬಹುದು. ಆದರೆ ಹೌದು, ಇಂದು ಕೇವಲ ಔಟ್‌ಪ್ಲೇಡ್, ಔಟ್‌ಕ್ಲಾಸ್” ಎಂದಿದ್ದಾರೆ.

India out of T20 World Cup: Gautam Gambhir Secret Post

Comments are closed.