India vs Australia: ಬೌಲರ್ ಗಳೇ ಇರಲಿಲ್ಲ ಬಿಡಿ- ಹೀಗಿತ್ತು ಸೋಲಿನ ಬಳಿಕ ರೋಹಿತ್ ರಿಯಾಕ್ಷನ್

ಮೊಹಾಲಿ : India vs Australia: 208 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿದರೂ ಭಾರತ ಆಸ್ಟ್ರೇಲಿಯಾ ವಿರುದ್ಧದ ಮೊದಲ T20 ಪಂದ್ಯದಲ್ಲಿ ಸೋಲು ಕಂಡಿದೆ. ಸೋಲಿನ ಬಗ್ಗೆ ನಾಯಕ ರೋಹಿತ್ ಶರ್ಮಾ ಅವರನ್ನ ಕೇಳಿದಾಗ, ಬೌಲರ್ ಗಳ ಮೇಲೆಯೇ ರೋಹಿತ್ ಅಸಮಾಧಾನ ಹೊರಹಾಕಿದ್ದಾರೆ. ಮಂಗಳವಾರ ನಡೆದ ಮ್ಯಾಚ್ ನಲ್ಲಿ ಬೌಲರ್ ಗಳೇ ಇರಲಿಲ್ಲ ಅಂತಾ ಹೇಳೋ ಮೂಲಕ ತಮ್ಮ ಸೋಲಿಗೆ ಬೌಲರ್ ಗಳ ಕಳಪೆ ಪ್ರದರ್ಶನ ಕಾರಣ ಎಂದಿದ್ದಾರೆ.

ಮೊಹಾಲಿಯಲ್ಲಿ ನಿನ್ನೆ ನಡೆದ ಮ್ಯಾಚ್ ನಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಿತ್ತು. 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ಗಳಿಸಿ, ಆಸಿಸ್ ತಂಡಕ್ಕೆ 209 ರನ್ ಗಳ ಟಾರ್ಗೆಟ್ ನೀಡಿತ್ತು. ಆದ್ರೆ, ಬ್ಯಾಟಿಂಗ್ ನಲ್ಲಿ ಬಂದ ಪ್ರದರ್ಶನ ಬೌಲಿಂಗ್ ನಲ್ಲಿ ಬರಲೇ ಇಲ್ಲ, ಅಕ್ಷರ್ ಪಟೇಲ್ ಅವರನ್ನ ಹೊರತು ಪಡಿಸಿದ್ರೆ, ಉಳಿದೆಲ್ಲ ಬೌಲರ್ ಗಳು ಆಸಿಸ್ ಬ್ಯಾಟ್ಸ್ಮನ್ ಗಳ ವಿಕೆಟ್ ಎತ್ತುವಲ್ಲಿ ವಿಫಲರಾದ್ರು.

ಅನುಭವಿ ಸೀಮ್ ಬೌಲರ್ ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ 52 ರನ್‌ಗಳನ್ನು ಕೊಟ್ಟರೆ, ಹರ್ಷಲ್ ಪಟೇಲ್ ಅವರ ಪೂರ್ಣ ಕೋಟಾದಲ್ಲಿ 49 ರನ್‌ ನೀಡಿದ್ರು. ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ 3.2 ಓವರ್‌ಗಳಲ್ಲಿ 42 ರನ್ ಬಿಟ್ಟು ಕೊಟ್ರು. ಅಕ್ಷರ್ ಪಟೇಲ್ 3 ಓವರ್ ಬೌಲಿಂಗ್ ಮಾಡಿ 17 ರನ್ ನೀಡಿದ್ರು. 

ಹೀಗಾಗಿ ಬೌಲರ್ ಗಳ ಮೇಲೆ ಕ್ಯಾಪ್ಟನ್ ರೋಹಿತ್ ಶರ್ಮಾ ಅಸಮಾಧಾನ ಹೊರಹಾಕಿದ್ದಾರೆ. ‘ನಾವು ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ ಎಂದು ನಾನು ಭಾವಿಸುವುದಿಲ್ಲ. 209 ಟಾರ್ಗೆಟ್ ಉತ್ತಮ ಸ್ಕೋರ್ ಆಗಿತ್ತು. ನಮ್ಮ ಬ್ಯಾಟರ್‌ಗಳಿಂದ ಪ್ರದರ್ಶನ ಬಂದಿತ್ತು. ಆದರೆ ಬೌಲರ್‌ಗಳಿಂದ ಪ್ರದರ್ಶನ ಹೊರ ಬರಲಿಲ್ಲ. ಇದು ಹೆಚ್ಚು ಸ್ಕೋರ್  ಮಾಡುವ ಮೈದಾನ ಎಂದು ನಮಗೆ ತಿಳಿದಿದೆ. ಹೀಗಾಗಿ ಇಲ್ಲಿ 200ಕ್ಕಿಂತಲೂ ಅಧಿಕ ರನ್ ಗಳಿಸಿಸಿದ್ರೂ, ಆರಾಮವಾಗಿ ಇರುವಂತಿಲ್ಲ. ನಿನ್ನೆಯ ಪಂದ್ಯದಲ್ಲಿ ನಮ್ಮ ಬೌಲರ್ ಗಳು ತಕ್ಕಮಟ್ಟಿಗೆ ವಿಕೆಟ್ ಗಳನ್ನ ಪಡೆದಿದ್ದಾರೆ. ಆದ್ರೆ, ಆಸಿಸ್ ಬ್ಯಾಟ್ಸ್ ಮನ್ ಗಳು ಕೆಲವು ಅದ್ಭುತ ಹೊಡೆತಗಳನ್ನ ಆಡಿದ್ರು ಅಂತಾ ರೋಹಿತ್ ಶರ್ಮಾ ಹೇಳಿದ್ದಾರೆ. ಈ ಸೋಲು ಈ ತಿಂಗಳ ಆರಂಭದಲ್ಲಿ ಏಷ್ಯಾಕಪ್‌ನ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಕಂಡ ಸೋಲಿನ ರೀತಿಯೇ ಇದೆ. ಯಾಕಂದ್ರೆ ಆ ಪಂದ್ಯಗಳಲ್ಲಿ ಭಾರತ 200 ಕ್ಕಿಂತ ಹೆಚ್ಚು ಸ್ಕೋರ್ ಮಾಡದಿದ್ದರೂ, ಡೆತ್ ಓವರ್ ನಲ್ಲಿ ಕಳಪೆ ಬೌಲಿಂಗ್‌ನಿಂದಾಗಿ ಭಾರತಕ್ಕೆ ಆ ಎರಡು ಪಂದ್ಯಗಳಲ್ಲಿ ಸೋತಿತ್ತು.

ಇದನ್ನೂ ಓದಿ Virat Kohli : ಕ್ರಿಕೆಟ್ ದೇವರ 100 ಶತಕಗಳ ವಿಶ್ವದಾಖಲೆಯನ್ನು ಮುರಿಯಲಿದ್ದಾರೆ ವಿರಾಟ್ “ಕಿಂಗ್” ಕೊಹ್ಲಿ

India vs Australia Bowlers Weren’t There Rohit Sharma’s Blunt Reply To Question On Mohali Loss

Comments are closed.