Fire and Accident: ಅಗ್ನಿ ಅನಾಹುತ ಮೂವರು ಸಾವು..ಲಾರಿ ಹರಿದು ನಾಲ್ವರು ಬಲಿ

ಚಿತ್ತೂರು: Fire and Accident ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಪೇಪರ್​​​ ಪ್ಲೇಟ್​ ತಯಾರಿಸುವ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮೂವರು ಸಜೀವದಹನರಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ದುರಂತ ಸಂಭವಿಸಿದೆ ಅಂತಾ ಹೇಳಲಾಗ್ತಿದೆ.

ಚಿತ್ತೂರಿನ ರಂಗಾಚಾರಿ ಬೀದಿಯಲ್ಲಿ ರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಭಾಸ್ಕರ್ ಎಂಬುವರು ಎರಡು ಅಂತಸ್ತಿನ ಕಟ್ಟಡ ಹೊಂದಿದ್ದು, ಗ್ರೌಂಡ್ ಫ್ಲೋರ್ನಲ್ಲಿ ಪೇಪರ್ ಪ್ಲೇಟ್ ತಯಾರಿಕಾ ಘಟಕ ನಡೆಸುತ್ತಿದ್ರು. ಆದ್ರೆ ಅಗ್ನಿ ಅನಾಹುತದಲ್ಲಿ 65 ವರ್ಷದ ತಂದೆ ಭಾಸ್ಕರ್ 35 ವರ್ಷದ ಮಗ ಡೆಲ್ಲಿ ಬಾಬು ಮತ್ತೊಬ್ಬ ಮಗ 25 ವರ್ಷ ಬಾಲಾಜಿ ಅಗ್ನಿ ದುರಂತದಲ್ಲಿ ಸಜೀವ ದಹನವಾಗಿದ್ದಾರೆ.

ತಡರಾತ್ರಿ ಎಲ್ಲರೂ ಗಾಢ ನಿದ್ದೆಯಲ್ಲಿದ್ದಾಗ ಪೇಪರ್ ಪ್ಲೇಟ್ ತಯಾರಿಕಾ ಘಟಕದಲ್ಲಿ ಶಾಟ್​​​​​ಸರ್ಕ್ಯೂಟ್​ನಿಂದ ಬೆಂಕಿ ಅವಘಡ ಸಂಭವಿಸಿದೆ. ಪೇಪರ್ ಪ್ಲೇಟ್​ಗಳು ಹೊತ್ತಿ ಉರಿದಿದ್ದು,ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿತ್ತು. ಬೆಂಕಿ ನಂದಿಸಿದ ನಂತರ ಒಳ ಹೋಗಿ ನೋಡಿದಾಗ, ಮೂವರು ಸಜೀವ ದಹನವಾಗಿದ್ದಾರೆ.

ಬೀದಿಯಲ್ಲಿ ಮಲಗಿದ್ದವರು ಹೆಣವಾದ್ರು :  ಇನ್ನು ದೆಹಲಿಯಲ್ಲಿ ರಸ್ತೆಯ ಬದಿಯ ಪುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಲಾರಿಯೊಂದು ಹರಿದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ದೆಹಲಿಯ ಸೀಮಾಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಳೆದ ರಾತ್ರಿ 1:51ರ ವೇಳೆಗೆ ಈ ಘಟನೆ ನಡೆದಿದ್ದು. ನಾಲ್ವರ ಮೇಲೆ ಲಾರಿ ಹರಿಸಿದ ಚಾಲಕ, ಲಾರಿ ಸಮೇತ ಎಸ್ಕೇಪ್ ಆಗಿದ್ದಾನೆ.

ಮೃತರನ್ನು 52 ವರ್ಷದ ಕರೀಂ, 25 ವರ್ಷದ ಚೋಟ್ಟೆ ಖಾನ್ , 38 ವರ್ಷದ ಶಾ ಆಲಂ , ಹಾಗೂ 45 ವರ್ಷದ ರಾಹುಲ್ ​ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಮನೀಶ್​, ಪ್ರದೀಪ್​ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಸೀಮಾಪುರಿ ಪೊಲೀಸರು ಕೇಸ್ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಅಪಘಾತ ಮಾಡಿರೋ ಟ್ರಕ್ ಮತ್ತು ಚಾಲಕನ ಪತ್ತೆಗೆ ಕಾರ್ಯಾಚರಣೆ ನಡೆಸ್ತಿದ್ದಾರೆ.

ಇದನ್ನೂ ಓದಿ India vs Australia: ಬೌಲರ್ ಗಳೇ ಇರಲಿಲ್ಲ ಬಿಡಿ- ಹೀಗಿತ್ತು ಸೋಲಿನ ಬಳಿಕ ರೋಹಿತ್ ರಿಯಾಕ್ಷನ್

Fire and Accident Three person burnt alive in fire mishap speeding truck mowed down 4 people

Comments are closed.