India Vs Australia T20 : ಮೊಹಾಲಿಯಲ್ಲಿ ನಾಳೆ ಮೊದಲ ಪಂದ್ಯ; ಹೀಗಿದೆ ಭಾರತದ ಪ್ಲೇಯಿಂಗ್ XI

ಮೊಹಾಲಿ: (Team India)ಭಾರತ ತಂಡದ ವಿಶ್ವಕಪ್ (World Cup) ಸಿದ್ಧತೆ ಮಂಗಳವಾರ ಆರಂಭವಾಗಲಿರುವ ಪ್ರವಾಸಿ (india vs australia t20 mohali)ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೂಲಕ ಶುರುವಾಗಲಿದೆ.ಆಸೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಾಳೆ (ಮಂಗಳವಾರ) ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯಲಿದೆ.

(India Vs Australia T20)ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ (World Cup)ದೃಷ್ಟಿಯಿಂದ ಈ ಸರಣಿ ಭಾರತಕ್ಕೆ ತುಂಬಾ ಇಂಪಾರ್ಟೆಂಟ್. ಈಗಾಗ್ಲೇ ಏಷ್ಯಾ ಕಪ್ ಟೂರ್ನಿಯಲ್ಲಿ ಸೂಪರ್-4 ಹಂತದಲ್ಲೇ ಸೋತು ಫೈನಲ್ ತಲುಪಲು ವಿಫಲವಾಗಿದ್ದ(Team India) ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.

ಟಿ20 ವಿಶ್ವಕಪ್ (World Cup)ನಲ್ಲಿ ಆಡುವ ಬೆಸ್ಟ್ ಪ್ಲೇಯಿಂಗ್ XI ಆಯ್ಕೆಗೆ ಆಸೀಸ್ ವಿರುದ್ಧದ ಟಿ20 ಸರಣಿ ಭಾರತಕ್ಕೆ ಉತ್ತಮ ಅವಕಾಶ. ಹೀಗಾಗಿ ಇಲ್ಲಿ ಹೆಚ್ಚಿನ ಪ್ರಯೋಗಗಳಿಗೆ ಅವಕಾಶವಿರುವುದಿಲ್ಲ. ಇನ್ನು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ಬಲಗೈ ಮಧ್ಯಮ ವೇಗಿ ಹರ್ಷಲ್ ಪಟೇಲ್ ಅವರಿಗೆ ವಿಶ್ವಕಪ್’ಗೆ ಸಜ್ಜಾಗಲು ಆಸ್ಟ್ರೇಲಿಯಾ ವಿರುದ್ಧದ ಸರಣಿ ಉತ್ತಮ ವೇದಿಕೆ.

ಕೆ.ಎಲ್ ರಾಹುಲ್ ಓಪನರ್
ಅಪ್ಘಾನಿಸ್ತಾನ ವಿರುದ್ಧದ ಏಷ್ಯಾ ಕಪ್ ಟಿ20 ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಸಿಡಿಲಬ್ಬರದ ಶತಕ ಬಾರಿಸಿದ್ದರು. ಆ ಶತಕದ ನಂತರ ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಭಾರತದ ಇನ್ನಿಂಗ್ಸ್ ಆರಂಭಿಸಬೇಕೆಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದರು. ಆದರೆ ಇದಕ್ಕೆಲ್ಲಾ ತೆರೆ ಎಳೆದಿರುವ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರೇ ನನ್ನೊಂದಿಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದಿದ್ದಾರೆ.
“ಕೆ.ಎಲ್ ರಾಹುಲ್ ಸಾಮರ್ಥ್ಯದ ಬಗ್ಗೆ ನಮಗೆ ಗೊತ್ತೇ ಇದೆ. ಅವರು ತಂಡಕ್ಕಾಗಿ ಏನು ಮಾಡಬಲ್ಲರು ಎಂಬುದರ ಸ್ಪಷ್ಟ ಅರಿವು ನಮಗಿದೆ. ಹೀಗಾಗಿ ಅವರೇ ಇನ್ನಿಂಗ್ಸ್ ಆರಂಭಿಸುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ. ವಿರಾಟ್ ಕೊಹ್ಲಿ ಅವರನ್ನು ನಾವು 3ನೇ ಓಪನರ್ ಆಗಿಯೂ ಪರಿಗಣಿಸುತ್ತೇವೆ” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಸಂಭಾವ್ಯ ಪ್ಲೇಯಿಂಗ್ XI

1.ರೋಹಿತ್ ಶರ್ಮಾ (ನಾಯಕ), 2. ಕೆ.ಎಲ್ ರಾಹುಲ್ (ಉಪನಾಯಕ), 3. ವಿರಾಟ್ ಕೊಹ್ಲಿ, 4. ಸೂರ್ಯಕುಮಾರ್ ಯಾದವ್, 5. ರಿಷಭ್ ಪಂತ್/ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), 6. ಹಾರ್ದಿಕ್ ಪಾಂಡ್ಯ, 7. ಅಕ್ಷರ್ ಪಟೇಲ್/ಆರ್.ಅಶ್ವಿನ್, 8. ಜಸ್ಪ್ರೀತ್ ಬುಮ್ರಾ, 9. ಭುವನೇಶ್ವರ್ ಕುಮಾರ್, 10. ಯುಜ್ವೇಂದ್ರ ಚಹಲ್, 11.ಹರ್ಷಲ್ ಪಟೇಲ್.

ಇದನ್ನೂ ಓದಿ : 11 ಸಾವಿರ ಟಿ20 ರನ್ ಶಿಖರಕ್ಕೆ 98 ರನ್ ಬಾಕಿ.. ಕಾಂಗರೂಗಳ ವಿರುದ್ಧ “ವಿರಾಟ” ದಾಖಲೆಗೆ ಕಿಂಗ್ ಕೊಹ್ಲಿ ಸಜ್ಜು

ಇದನ್ನೂ ಓದಿ : ಖಾಸಗಿ ಹೋಟೆಲ್‌ನಲ್ಲಿ ನಡೆಯಿತು ವೇದಾ ಕೃಷ್ಣಮೂರ್ತಿ ನಿಶ್ಚಿತಾರ್ಥ.. ಅರ್ಜುನ್ ಜೊತೆ ಉಂಗುರ ಬದಲಿಸಿಕೊಂಡ ಸ್ಟಾರ್ ಕ್ರಿಕೆಟರ್

ಇದನ್ನೂ ಓದಿ : ಮೊಹಮ್ಮದ್ ಶಮಿಗೆ ಕೋವಿಡ್ ಪಾಸಿಟಿವ್.. ಕಂಬ್ಯಾಕ್‌ಗೆ ಮೊದಲೇ ಶಾಕ್, ಆಸೀಸ್ ಸರಣಿಯಿಂದ ಔಟ್

ಪಂದ್ಯ ಆರಂಭ: ರಾತ್ರಿ 7.30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನ, ಮೊಹಾಲಿ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

india vs australia t20 mohali world cup captain rohith sharma

Comments are closed.