Virat Kohli India vs Australia : 11 ಸಾವಿರ ಟಿ20 ರನ್ ಶಿಖರಕ್ಕೆ 98 ರನ್ ಬಾಕಿ.. ಕಾಂಗರೂಗಳ ವಿರುದ್ಧ “ವಿರಾಟ” ದಾಖಲೆಗೆ ಕಿಂಗ್ ಕೊಹ್ಲಿ ಸಜ್ಜು

ಮೊಹಾಲಿ:(Team India) ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli India vs Australia) ಟಿ20 ಕ್ರಿಕೆಟ್’ನಲ್ಲಿ ವಿರಾಟ ದಾಖಲೆಯೊಂದರ ಹೊಸ್ತಿಲಲ್ಲಿ ನಿಂತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ (India Vs Australia T20 Series) ಮಂಗಳವಾರ (ಸೆಪ್ಟೆಂಬರ್ 20) ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಆ ದಾಖಲೆ ಬರೆಯುವ ವಿಶ್ವಾಸದಲ್ಲಿದ್ದಾರೆ.

ಆಧುನಿಕ ಕ್ರಿಕೆಟ್’ನ ಬ್ಯಾಟಿಂಗ್ ಗ್ರೇಟ್ ವಿರಾಟ್ ಕೊಹ್ಲಿ(Virat Kohli) ಟಿ20 ಕ್ರಿಕೆಟ್’ನಲ್ಲಿ 11 ಸಾವಿರ ರನ್’ಗಳ ಹೊಸ್ತಿಲ್ಲಿದ್ದಾರೆ. ಇನ್ನು 98 ರನ್ ಗಳಿಸಿದ್ರೆ, ಕಿಂಗ್ ಕೊಹ್ಲಿ ಒಟ್ಟಾರೆ ಟಿ20 ಕ್ರಿಕೆಟ್’ನಲ್ಲಿ 11 ಸಾವಿರ ರನ್ ಪೂರ್ತಿಗೊಳಿಸಿದ ಜಗತ್ತಿನ ನಾಲ್ಕನೇ ಆಟಗಾರನೆಂಬ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಲಿದ್ದಾರೆ. ಇದುವರೆಗೆ ವೆಸ್ಟ್ ಇಂಡೀಸ್’ನ ಕ್ರಿಸ್ ಗೇಲ್, ಕೀರನ್ ಪೊಲಾರ್ಡ್ ಮತ್ತು ಪಾಕಿಸ್ತಾನದ ಶೋಯೆಬ್ ಮಲಿಕ್ ಈ ಸಾಧನೆ ಮಾಡಿದ್ದಾರೆ.

2007ರ ಏಪ್ರಿಲ್ 3ರಂದು ದೆಹಲಿ ಪರ ಟಿ20 ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ, ತಮ್ಮ ಚೊಚ್ಚಲ ಪಂದ್ಯದಲ್ಲಿ 26 ಎಸೆತಗಳಲ್ಲಿ 35 ರನ್ ಗಳಿಸಿದ್ದರು. ನಂತರ ಅಂತಾರಾಷ್ಟ್ರೀಯ ಟಿ20, ಐಪಿಎಲ್ ಹಾಗೂ (Team India)ದೇಶೀಯ ಟಿ20 ಸೇರಿದಂತೆ ವೃತ್ತಿಜೀವನದಲ್ಲಿ ಇದುವರೆಗೆ 349 ಟಿ20 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ, 40.37ರ ಸರಾಸರಿಯಲ್ಲಿ 10,902 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಆರು ಶತಕಗಳು ಹಾಗೂ 80 ಅರ್ಧಶತಕಗಳು ಸೇರಿವೆ.

ಟಿ20 ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಸಾಧನೆ
ಪಂದ್ಯ: 349, ರನ್: 10,902, ಶತಕ: 06, ಅರ್ಧಶತಕ: 80, ಸರಾಸರಿ: 40.37, ಸ್ಟ್ರೈಕ್’ರೇಟ್: 132.95

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಸಾಧನೆ
ಪಂದ್ಯ: 104, ರನ್: 3,584, ಶತಕ: 01, ಅರ್ಧಶತಕ: 32, ಸರಾಸರಿ: 51.94, ಸ್ಟ್ರೈಕ್’ರೇಟ್: 138.37

ಐಪಿಎಲ್’ನಲ್ಲಿ ವಿರಾಟ್ ಕೊಹ್ಲಿ ಸಾಧನೆ
ಪಂದ್ಯ: 223, ರನ್: 6,624, ಶತಕ: 05, ಅರ್ಧಶತಕ: 44, ಸರಾಸರಿ: 36.20, ಸ್ಟ್ರೈಕ್’ರೇಟ್: 129.15

ಇದನ್ನೂ ಓದಿ : ಮೊಹಮ್ಮದ್ ಶಮಿಗೆ ಕೋವಿಡ್ ಪಾಸಿಟಿವ್.. ಕಂಬ್ಯಾಕ್‌ಗೆ ಮೊದಲೇ ಶಾಕ್, ಆಸೀಸ್ ಸರಣಿಯಿಂದ ಔಟ್

ಇದನ್ನೂ ಓದಿ : ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ 2 ಸೆಮಿಫೈನಲ್; ಮಂಗಳವಾರ ಶುರು ಮೊದಲ ಸೆಮೀಸ್

ಇದನ್ನೂ ಓದಿ : ಟಿ20 ವಿಶ್ವಕಪ್’ನಲ್ಲಿ ಸಿಗದ ಸ್ಥಾನ; ಮೌನ ಮುರಿದ ಸಂಜು, ರಾಹುಲ್, ಪಂತ್ ಬಗ್ಗೆ ಸ್ಯಾಮ್ಸನ್ ಸ್ಫೋಟಕ ಮಾತು

ಟಿ20 ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್ (ಟಾಪ್-5)

  • 14,562: ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್); 463 ಪಂದ್ಯ, 22 ಶತಕ, 88 ಅರ್ಧಶತಕ
  • 11,902: ಶೋಯೆಬ್ ಮಲಿಕ್ (ಪಾಕಿಸ್ತಾನ); 481 ಪಂದ್ಯ, 73 ಅರ್ಧಶತಕ
  • 11,871: ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್): 612 ಪಂದ್ಯ, 01 ಶತಕ, 56 ಅರ್ಧಶತಕ
  • 10,902: ವಿರಾಟ್ ಕೊಹ್ಲಿ (ಭಾರತ); 349 ಪಂದ್ಯ, 06 ಶತಕ, 80 ಅರ್ಧಶತಕ
  • 10,870: ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ); 328 ಪಂದ್ಯ, 08 ಶತಕ, 91 ಅರ್ಧಶತಕ

Virat Kohli India vs Australia : 98 runs short of the 11,000 T20 run mark, King Kohli set for ‘Virata record against Kangaroos

Comments are closed.