ಸೋಮವಾರ, ಏಪ್ರಿಲ್ 28, 2025
HomeSportsCricketBCCI: ಪಿಚ್ ಒಣಗಿಸಲು ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ, ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಗೆ ಇದೆಂಥಾ...

BCCI: ಪಿಚ್ ಒಣಗಿಸಲು ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ, ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಗೆ ಇದೆಂಥಾ ದುರ್ಗತಿ..?

- Advertisement -

ಮೊಹಾಲಿ: (India vs Australia Cricket Pitch) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ. ಬಿಸಿಸಿಐ ಬಳಿ ಇರುವ ದುಡ್ಡು ವಿಶ್ವದ ಬೇರೆ ಯಾವ ಕ್ರಿಕೆಟ್ ಮಂಡಳಿಗಳ ಬಳಿ ಇಲ್ಲ. ಬಿಸಿಸಿಐ ಅಂದ್ರೆ ಚಿನ್ನದ ಮೊಟ್ಟೆಯಿಡುವ ಕೋಳಿ. ಆದರೇನಂತೆ, ಮಳೆ ಬಂದರೆ ಕ್ರಿಕೆಟ್ ಪಿಚ್’ಗಳನ್ನು ಒಣಗಿಸುವ ಸೂಕ್ತ ಸೌಲಭ್ಯಗಳು ಬಿಸಿಸಿಐ ಬಳಿ ಇಲ್ಲ ಎಂಬುದು ವಿಪರ್ಯಾಸ.

ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶುಕ್ರವಾರ ನಡೆದ 2ನೇ ಟಿ20 ಪಂದ್ಯಕ್ಕೆ (India Vs Australia T20 Series) ಮಳೆಯ ಅಡಚಣೆ ಎದುರಾಗಿತ್ತು. ಹೀಗಾಗಿ ತಲಾ 8 ಓವರ್’ಗಳಿಗೆ ಸೀಮಿತಗೊಳಿಸಲಾಗಿದ್ದ ಪಂದ್ಯವನ್ನು 6 ವಿಕೆಟ್’ಗಳಿಂದ ಗೆದ್ದ ಭಾರತ 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತು. ಮಳೆಯಿಂದ ಒದ್ದೆಯಾಗಿದ್ದ ಪಿಚ್ ಅನ್ನು, ಮೈದಾನವನ್ನು ಒಣಗಿಸಲು ವಿದರ್ಭ ಕ್ರಿಕೆಟ್ ಸಂಸ್ಥೆಯ ಗ್ರೌಂಡ್ಸ್’ಮನ್’ಗಳು ಹರಸಾಹಸ ಪಟ್ಟರು. ಪಿಚ್ ಒಣಗಿಸಲು ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆಗಳನ್ನು ಬಳಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಗೆ ಇಂಥಾ ದುಸ್ಥಿತಿಯೇ..? ಮಳೆಯಿಂದ ಪಿಚ್ ಅನ್ನು ಕಾಪಾಡಿಕೊಳ್ಳುವ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗದಷ್ಟು ಬಿಸಿಸಿಐ ಬಡವಾಗಿದೆಯೇ ಎಂದು ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

https://twitter.com/mnw_ig/status/1573316829329887232?s=20&t=vxG5sfAsf-yppIeCjLDGFg

ಇಂಗ್ಲೆಂಡ್’ನಲ್ಲಿದೆ ಹೋವರ್ ಕವರ್ ತಂತ್ರಜ್ಞಾನ:
ಇಂಗ್ಲೆಂಡ್’ನಲ್ಲಿ ಕ್ರಿಕೆಟ್ ಪಿಚ್ ಅನ್ನು ಮಳೆಯಿಂದ ರಕ್ಷಿಸಲು ಹೋವರ್ ಕವರ್ (Hover Cover) ಅನ್ನು ಬಳಸಲಾಗುತ್ತದೆ. ಮೂರು ಅಡಿ ಉದ್ದ, 15 ಅಡಿ ಅಗಲದ ಹೋವರ್ ಕವರ್ ಕ್ರಿಕೆಟ್ ಪಿಚ್ ಅನ್ನು ಮಳೆಯಿಂದ ರಕ್ಷಿಸುತ್ತದೆ. ಎಂತಹ ಜಡಿ ಮಳೆ ಬಂದರೂ ಪಿಚ್ ಒಂದು ಚೂರೂ ಒದ್ದೆಯಾಗುವುದಿಲ್ಲ. ಪಿಚ್ ಒಳಗೆ ತೇವಾಂಶವೂ ಇರುವುದಿಲ್ಲ. ಇದನ್ನು ತಡೆಯಲೆಂದೇ ಹೋವರ್ ಕವರ್ ಒಳಭಾಗದ ಎರಡೂ ತುದಿಗಳಲ್ಲಿ ಪೆಟ್ರೋಲ್ ಮೋಟರ್, ಬಿಸಿ ಗಾಳಿ ಹೊರಹಾಕುವ ಫ್ಯಾನ್’ಗಳನ್ನು ಅಳವಡಿಸಲಾಗಿರುತ್ತದೆ. ಇಂಗ್ಲೆಂಡ್’ನ ಪ್ರಮುಖ ಕ್ರಿಕೆಟ್ ಮೈದಾನಗಳಾದ ಲಾರ್ಡ್ಸ್, ಟ್ರೆಂಟ್’ಬ್ರಿಡ್ಜ್, ಓಲ್ಡ್ ಟ್ರಾಫೋರ್ಡ್, ಸೋಫಿಯಾ ಗಾರ್ಡನ್ಸ್, ರೋಸ್ ಬೌಲ್ ಕ್ರೀಡಾಂಗಣಗಳಲ್ಲಿ ಅದನ್ನು ಬಳಸಲಾಗುತ್ತದೆ.

ಬಾಂಗ್ಲಾದೇಶದ ಶೇರ್-ಎ-ಬಾಂಗ್ಲಾ ಮೈದಾನ, ಭಾರತದಲ್ಲಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಈ ತಂತ್ರಜ್ಞಾನವನ್ನು ಭಾರತದ ಎಲ್ಲಾ ಕ್ರಿಕೆಟ್ ಮೈದಾನಗಳಿಗೆ ವಿಸ್ತರಿಸಿದರೆ ಪಂದ್ಯಕ್ಕೆ ಮಳೆ ಅಡ್ಡಿ ಮಾಡಿದ ಸಂದರ್ಭಗಳಲ್ಲಿ ಮತ್ತೆ ಪಂದ್ಯವನ್ನು ಬೇಗನೆ ಆರಂಭಿಸಲು ಸಹಕಾರಿಯಾಗಬಲ್ಲುದು.

ಇದನ್ನೂ ಓದಿ : Rohit Sharma World Record : ಆಸೀಸ್ ವಿರುದ್ಧ ಸಿಕ್ಸರ್‌ಗಳ ಸುರಿಮಳೆ.. ಅಮೋಘ ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ : DK= ‘D’eath Over ‘K’iller : ಟೀಮ್ ಇಂಡಿಯಾ ಫಿನಿಷರ್ ದಿನೇಶ್ ಕಾರ್ತಿಕ್‌ಗೆ ಹೊಸ ಬಿರುದು

India vs Australia world’s richest cricket board BCCI Cricket Pitch Drying Use Hair Dryer And Iron Box

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular