ಭಾನುವಾರ, ಜೂನ್ 15, 2025
HomeSportsCricketIndia Vs Pakistan T20 World Cup 2022 : ಭಾರತಕ್ಕೆ 160 ರನ್ ಟಾರ್ಗೆಟ್...

India Vs Pakistan T20 World Cup 2022 : ಭಾರತಕ್ಕೆ 160 ರನ್ ಟಾರ್ಗೆಟ್ ಕೊಟ್ಟ ಪಾಕಿಸ್ತಾನ

- Advertisement -

ಮೆಲ್ಬೋರ್ನ್: ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ (India Vs Pakistan) ಟಿ20 ವಿಶ್ವಕಪ್ ಪಂದ್ಯದ ಮೊದಲ ಇನ್ನಿಂಗ್ಸ್ ಹಲವು ರೋಚಕತೆಗಳಿಗೆ ಸಾಕ್ಷಿಯಾಗಿದೆ. ಆರಂಭಿಕ ಆಘಾತದಿಂದ ಚೇತರಿಸಿಕೊಂಡು ಮಧ್ಯಮ ಕ್ರಮಾಂಕದಲ್ಲಿ ಸಡ್ಡು ಹೊಡೆದ ಪಾಕಿಸ್ತಾನ, ಭಾರತದ ಗೆಲುವಿಗೆ 160 ರನ್’ಗಳ ಗುರಿ ನಿಗದಿ ಪಡಿಸಿದೆ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ಬ್ಯಾಟಿಂಗ್ ಆಹ್ವಾನವಿತ್ತರು. ಭುವನೇಶ್ವರ್ ಕುಮಾರ್ ಅವರ ಬಿಗು ಓವರ್ ನಂತರ ಮತ್ತೊಂದು ತುದಿಯಲ್ಲಿ ಹೊಸ ಚೆಂಡಿನೊಂದಿಗೆ ದಾಳಿಗಿಳಿದ ಪಂಜಾಬ್’ನ ಯುವ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್, ತಮ್ಮ ಮೊದಲ ಎಸೆತದಲ್ಲೇ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಭಾರತ ವಿರುದ್ಧದ ಮಹತ್ವದ ಪಂದ್ಯದಲ್ಲಿ ಬಾಬರ್ ಎದುರಿಸಿದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್’ಗೆ ಔಟಾದರು.

ತಮ್ಮ 2ನೇ ಓವರ್’ನಲ್ಲಿ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊಹಮ್ಮದ್ ರಿಜ್ವಾನ್ (4) ವಿಕೆಟ್ ಪಡೆದ ಅರ್ಷದೀಪ್ ಭಾರತಕ್ಕೆ ಆರಂಭಿಕ ಮೇಲುಗೈ ತಂದುಕೊಟ್ಟರು.
ಆದರೆ 3ನೇ ವಿಕೆಟ್’ಗೆ ಜೊತೆಯಾದ ಶಾನ್ ಮಸೂದ್ ಹಾಗೂ ಇಫ್ತಿಕಾರ್ ಅಹ್ಮದ್ 50 ಎಸೆತಗಳಲ್ಲಿ 76 ರನ್’ಗಳ ಜೊತೆಯಾಟವಾಡಿ ಪಾಕಿಸ್ತಾನದ ಚೇತರಿಕೆಗೆ ಕಾರಣರಾದರು. ಆರಂಭದಲ್ಲೇ 2 ವಿಕೆಟ್’ಗಳು ಬಿದ್ದಾಗ ಕೌಂಟರ್ ಅಟ್ಯಾಕ್ ನಡೆಸಿದ ಪಾಕ್ ದಾಂಡಿಗ ಇಫ್ತಿಕಾರ್ ಅಹ್ಮದ್, ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವರ ಒಂದೇ ಓವರ್’ನಲ್ಲಿ 3 ಸಿಕ್ಸರ್ ಸಿಡಿಸಿದರು,. ಅಂತಿಮವಾಗಿ 34 ಎಸೆತಗಳಲ್ಲಿ 51 ರನ್ ಗಳಿಸಿದ ಇಫ್ತಿಕಾರ್, ವೇಗಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನವಿತ್ತ 3ನೇ ಕ್ರಮಾಂಕದ ದಾಂಡಿಗ ಶಾನ್ ಮಸೂದ್ 42 ಎಸೆತಗಳಲ್ಲಿ 52 ರನ್ ಗಳಿಸಿ ಅಜೇಯರಾಗುಳಿದರು. ಕೊನೇ ಕ್ಷಣಗಳಲ್ಲಿ ಅಬ್ಬರಿಸಿದ ವೇಗಿ ಶಾಹೀನ್ ಶಾ ಆಫ್ರಿದಿ ಕೇವಲ 8 ಎಸೆತಗಳಲ್ಲಿ 16 ರನ್ ಸಿಡಿಸಿ ಪಾಕಿಸ್ತಾನದ ಮೊತ್ತ 150ರ ಗಡಿ ದಾಟಲು ಕಾರಣರಾದರು.

ಪಾಕಿಸ್ತಾನ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್’ರನ್ನು ತಮ್ಮ ಆರಂಭಿಕ ಸ್ಪೆಲ್’ನಲ್ಲಿ ಪೆವಿಲಿಯನ್’ಗಟ್ಟಿದ ಅರ್ಷದೀಪ್ ಸಿಂಗ್, ತಮ್ಮ 2ನೇ ಸ್ಪೆಲ್’ನಲ್ಲಿ ಪಾಕಿಸ್ತಾನದ ಮತ್ತೊಬ್ಬ ಡೇಂಜರಸ್ ಬ್ಯಾಟ್ಸ್’ಮನ್ ಆಸಿಫ ಅಲಿ ಅವರನ್ನು ಕೇವಲ 2 ರನ್ನಿಗೆ ಔಟ್ ಮಾಡಿದರು. ಅಂತಿಮವಾಗಿ ತಮ್ಮ 4 ಓವರ್’ಗಳ ಸ್ಪೆಲ್’ನಲ್ಲಿ 32 ರನ್ ಬಿಟ್ಟು ಕೊಟ್ಟ ಅರ್ಷದೀಪ್, 3 ಪ್ರಮುಖ ವಿಕೆಟ್ ಪಡೆದರು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 30 ರನ್ನಿಗೆ 3 ವಿಕೆಟ್ ಉರುಳಿಸಿದ್ರೆ, ಭುವನೇಶ್ವರ್ ಕುಮಾಪ್ ಮತ್ತು ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ : Arshdeep Singh: ಪಾಕ್ ಬ್ಯಾಟಿಂಗ್ ಬೆನ್ನೆಲುಬು ಮುರಿದ ಅರ್ಷದೀಪ್, ಅಂದು ಖಲಿಸ್ತಾನಿ ಅಂದವರೇ ಇಂದು ಬಹುಪರಾಕ್ ಹಾಕಿದ್ರು

ಇದನ್ನೂ ಓದಿ : T20 World cup Super 12 : ಅರ್ಹತಾ ಸುತ್ತು ಮುಕ್ತಾಯ, ಸೂಪರ್-12ಗೆ 4 ತಂಡಗಳು, ಇಲ್ಲಿದೆ ಹೊಸ ವೇಳಾಪಟ್ಟಿ

India Vs Pakistan T20 World Cup 2022 Pak 160 Target Arshdeep Singh

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular