Arshdeep Singh: ಪಾಕ್ ಬ್ಯಾಟಿಂಗ್ ಬೆನ್ನೆಲುಬು ಮುರಿದ ಅರ್ಷದೀಪ್, ಅಂದು ಖಲಿಸ್ತಾನಿ ಅಂದವರೇ ಇಂದು ಬಹುಪರಾಕ್ ಹಾಕಿದ್ರು

ಮೆಲ್ಬೋರ್ನ್: Arshdeep Singh IND vs PAK : ಟೀಮ್ ಇಂಡಿಯಾದ ಯುವ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರನ್ನು ಕೆಲ ತಿಂಗಳುಗಳ ಹಿಂದೆ ಖಲಿಸ್ತಾನಿ ಎಂದು ಹೀಯಾಳಿಸಿದ್ದವರೇ ಇಂದು ಬಹುಪರಾಕ್ ಹಾಕುತ್ತಿದ್ದಾರೆ. ಪಾಕಿಸ್ತಾನ (Indi Vs Pakistan) ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ (T20 World Cup 2022) ಅರ್ಷದೀಪ್ ಸಿಂಗ್ ತಂಡದ ನಾಯಕ ಬಾಬರ್ ಅಜಮ್ (Babar Azam) ಹಾಗೂ ಉಪನಾಯಕ ಮೊಹಮ್ಮದ್ ರಿಜ್ವಾನ್ (Mohammad Rizwan) ವಿಕೆಟ್ ಪಡೆದು ಭಾರತಕ್ಕೆ ಆರಂಭಿಕ ಮೇಲುಗೈ ತಂದುಕೊಟ್ಟಿದ್ದರು. ಬಾಬರ್ ಅಜಮ್ ಅವರನ್ನು ಮೊದಲ ಎಸೆತದಲ್ಲೇ ಶೂನ್ಯಕ್ಕೆ ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದ ಅರ್ಷದೀಪ್, ನಂತರ ಮೊಹಮ್ಮದ್ ರಿಜ್ವಾನ್ ಅವರನ್ನು ಕೇವಲ 4 ರನ್ನಿಗೆ ಪೆವಿಲಿಯನ್’ಗಟ್ಟಿದರು.

ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಪಾಕಿಸ್ತಾನದ ಬ್ಯಾಟಿಂಗ್ ಆಧಾರಸ್ಥಂಭಗಳು. ಇಬ್ಬರನ್ನೂ ಆರಂಭದಲ್ಲೇ ಔಟ್ ಮಾಡಿದ ಅರ್ಷದೀಪ್ ಅವರಿಗೆ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಬಹುಪರಾಕ್ ಹಾಕುತ್ತಿದ್ದಾರೆ.

ಇಂಟ್ರೆಸ್ಟಿಂಗ್ ವಿಷ್ಯ ಏನಂದ್ರೆ ಕಳೆದ ಏಷ್ಯಾ ಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಆಸಿಫ್ ಅಲಿ ಕ್ಯಾಚ್ ಕೈಚೆಲ್ಲಿದ್ದ ಕಾರಣಕ್ಕೆ ಅರ್ಷದೀಪ್ ಸಿಂಗ್ ಅವರನ್ನು ಇದೇ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಲಾಗಿತ್ತು. ಅರ್ಷದೀಪ್ ಸಿಂಗ್ ಭಾರತ ಕ್ರಿಕೆಟ್ ತಂಡದ ಆಟಗಾರ ಎಂಬುದನ್ನು ಮರೆತು ಅವರ ಮೇಲೆ ದೇಶದ್ರೋಹಿ, ಖಲಿಸ್ತಾನಿ ಎಂದೆಲ್ಲಾ ಆಕ್ರಮಣ ನಡೆಸಲಾಗಿತ್ತು. ಆ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲು ಕಂಡು ಏಷ್ಯಾ ಕಪ್ ಫೈನಲ್ ತಲುಪಲು ವಿಫಲವಾಗಿತ್ತು.

ಆದರೆ ಅಂದು ಅರ್ಷದೀಪ್ ಸಿಂಗ್ ಅವರನ್ನು ಖಲಿಸ್ತಾನಿ, ದೇಶದ್ರೋಹಿ ಅಂದವರೇ ಇಂದು ಪಂಜಾಬ್’ನ ಯುವ ಎಡಗೈ ವೇಗದ ಬೌಲರ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್’ರನ್ನು ತಮ್ಮ ಆರಂಭಿಕ ಸ್ಪೆಲ್’ನಲ್ಲಿ ಪೆವಿಲಿಯನ್’ಗಟ್ಟಿದ ಅರ್ಷದೀಪ್ ಸಿಂಗ್, ತಮ್ಮ 2ನೇ ಸ್ಪೆಲ್’ನಲ್ಲಿ ಪಾಕಿಸ್ತಾನದ ಮತ್ತೊಬ್ಬ ಡೇಂಜರಸ್ ಬ್ಯಾಟ್ಸ್’ಮನ್ ಆಸಿಫ ಅಲಿ ಅವರನ್ನು ಕೇವಲ 2 ರನ್ನಿಗೆ ಔಟ್ ಮಾಡಿದರು. ಅಂತಿಮವಾಗಿ ತಮ್ಮ 4 ಓವರ್’ಗಳ ಸ್ಪೆಲ್’ನಲ್ಲಿ 32 ರನ್ ಬಿಟ್ಟು ಕೊಟ್ಟ ಅರ್ಷದೀಪ್, 3 ಪ್ರಮುಖ ವಿಕೆಟ್ ಪಡೆದರು.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ, ಭಾರತೀಯ ಬೌಲರ್’ಗಳ ಸಂಘಟಿತ ದಾಳಿಗೆ ತತ್ತರಿಸಿ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಕಲೆ ಹಾಕಿತು. ಆರಂಭದಲ್ಲೇ 2 ವಿಕೆಟ್’ಗಳು ಬಿದ್ದಾಗ ಕೌಂಟರ್ ಅಟ್ಯಾಕ್ ನಡೆಸಿದ ಪಾಕ್ ದಾಂಡಿಗ ಇಫ್ತಿಕಾರ್ ಅಹ್ಮದ್, ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವರ ಒಂದೇ ಓವರ್’ನಲ್ಲಿ 3 ಸಿಕ್ಸರ್ ಸಿಡಿಸಿದರು,. ಅಂತಿಮವಾಗಿ 34 ಎಸೆತಗಳಲ್ಲಿ 51 ರನ್ ಗಳಿಸಿದ ಇಫ್ತಿಕಾರ್, ವೇಗಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. 3ನೇ ಕ್ರಮಾಂಕದ ದಾಂಡಿಗ ಶಾನ್ ಮಸೂದ್ 42 ಎಸೆತಗಳಲ್ಲಿ 52 ರನ್ ಗಳಿಸಿ ಅಜೇಯರಾಗುಳಿದರು,

ಇದನ್ನೂ ಓದಿ : T20 World Cup 2022: ಟಿ20 ವಿಶ್ವಕಪ್: ಹಾಲಿ ಚಾಂಪಿಯನ್ಸ್ ಆಸೀಸ್‌ಗೆ ಮೊದಲ ಪಂದ್ಯದಲ್ಲೇ ಶಾಕ್ ಕೊಟ್ಟ ಕಿವೀಸ್

ಇದನ್ನೂ ಓದಿ : T20 World cup Super 12 : ಅರ್ಹತಾ ಸುತ್ತು ಮುಕ್ತಾಯ, ಸೂಪರ್-12ಗೆ 4 ತಂಡಗಳು, ಇಲ್ಲಿದೆ ಹೊಸ ವೇಳಾಪಟ್ಟಿ

IND vs PAK Arshdeep Singh T20 World Cup 2022

Comments are closed.