ರೋಹಿತ್‌ ಶರ್ಮಾ ಭರ್ಜರಿ ಶತಕ : ಒಂದೇ ಪಂದ್ಯದಲ್ಲಿ 2 ವಿಶ್ವದಾಖಲೆ ಬರೆದ ಟೀಂ ಇಂಡಿಯಾ ನಾಯಕ

India Vs Afghanistan : ರೋಹಿತ್‌ ಶರ್ಮಾ (Rohit Sharma) ವಿಶ್ವಕಪ್‌ನಲ್ಲಿ ಅತಿವೇಗವಾಗಿ 1000 ರನ್ ಗಳಿಸಿದ್ದಾರೆ. ಈ ಮೂಲಕ ವಾರ್ನರ್‌ ದಾಖಲೆ ಸರಿಗಟ್ಟಿದ್ದಾರೆ. ಇನ್ನೊಂದೆಡೆಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಆಟಗಾರ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ.

ವಿಶ್ವಕಪ್‌ನ (World Cup 2023) ಎರಡನೇ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನ (India Vs Afghanistan )ತಂಡದ ವಿರುದ್ದ ಭರ್ಜರಿ ಗೆಲುವು ದಾಖಲಿಸಿದೆ. ಅದ್ರಲ್ಲೂ ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ (Rohit Sharma) ಅಫ್ಘಾನಿಸ್ತಾನದ ವಿರುದ್ದ ಶತಕ ಬಾರಿಸಿರುವುದರ ಜೊತೆಗೆ ಒಂದೇ ಪಂದ್ಯದಲ್ಲಿ 2 ವಿಶ್ವದಾಖಲೆಯನ್ನು (Rohit Sharma World Record) ತನ್ನ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.

Rohit Sharma Century India Vs Afghanistan, Team India captain who wrote 2 world records in a single match
Image credit : BCCI

ಕಳೆದ ಎರಡು ದಿನಗಳ ಹಿಂದೆಯಷ್ಟೇ ಆಸ್ಟ್ರೇಲಿಯಾ ತಂಡದ ಡೇವಿಡ್‌ ವಾರ್ನರ್‌ ಅವರು ಭಾರತ ತಂಡದ ವಿರುದ್ದ ವಿಶ್ವಕಪ್‌ನಲ್ಲ ವೇಗವಾಗಿ ಸಾವಿರ ರನ್‌ ಬಾರಿಸಿದ ಆಟಗಾರ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದೀಗ ಡೇವಿಡ್‌ ವಾರ್ನರ್‌ (David Warnar)  ಅವರ ವಿಶ್ವಕಪ್‌ನ ವೇಗದ ಶತಕದ (Fastest 1000 Runs in World Cup cricket)  ದಾಖಲೆಯನ್ನು ಸರಿಗಟ್ಟಿದ್ದಾರೆ.

ವಿಶ್ವಕಪ್‌ ಆರಂಭದಲ್ಲಿಯೇ ರೋಹಿತ್‌ ಶರ್ಮಾ ಅವರಿಗೆ ವಿಶ್ವಕಪ್‌ನಲ್ಲಿ ಅತೀ ವೇಗವಾಗಿ 1000 ರನ್ ಗಳಿಸಿದ ವಿಶ್ವದಾಲೆಯನ್ನು ತನ್ನ ಹೆಸರಿಗೆ ಬರೆಯಿಸಿಕೊಳ್ಳಲು ಕೇವಲ 21 ರನ್‌ ಅವಶ್ಯಕತೆಯಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ದದ ಮೊದಲ ಪಂದ್ಯದಲ್ಲಿ ರೋಹಿತ್‌ ಶರ್ಮಾ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದರು.

Rohit Sharma Century India Vs Afghanistan, Team India captain who wrote 2 world records in a single match
Image Credit : BCCI

ಆದರೆ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಎರಡನೇ ಜಯವನ್ನು ತಂದುಕೊಟ್ಟಿದ್ದಾರೆ. ಮಾತ್ರವಲ್ಲ, ಒಂದೇ ಪಂದ್ಯದಲ್ಲಿ ಎರಡೆರಡು ದಾಖಲೆಯನ್ನು ಬರೆದಿದ್ದಾರೆ. ರೋಹಿತ್‌ ಶರ್ಮಾ 21 ರನ್‌ ಬಾರಿಸುತ್ತಲೇ ವಿಶ್ವದಾಖಲೆ ಬರೆದಿದ್ರೆ, ಇನ್ನೊಂದೆಡೆಯಲ್ಲಿ.

ಇದನ್ನೂ ಓದಿ : ವಿಶ್ವಕಪ್‌ ಭಾರತ Vs ಪಾಕಿಸ್ತಾನ ಪಂದ್ಯ: ಕೇಸರಿ ಜರ್ಸಿಯಲ್ಲಿ ಕಣಕ್ಕಿಳಿಯುತ್ತಾ ಭಾರತ, ಬಿಸಿಸಿಐ ಹೇಳಿದ್ದೇನು ?

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಸಿಕ್ಸರ್‌ ಸಿಡಿಸಿದ ವಿಶ್ವ ದಾಖಲೆಯನ್ನು ಇದೀಗ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ವೆಸ್ಟ್‌ ಇಂಡಿಸ್‌ನ ದೈತ್ಯ ಆಟಗಾರ ಕ್ರಿಸ್‌ ಗೇಲ್‌ ಅವರ ಹೆಸರಿನಲ್ಲಿ ಇತ್ತು. ಆದರೆ ರೋಹಿತ್ ಶರ್ಮಾ 550 ಸಿಕ್ಸರ್‌ಗಳನ್ನು ಬಾರಿಸಿ ವಿಶ್ವದಾಖಲೆ ಬರೆದಿದ್ದಾರೆ.

Rohit Sharma Century India Vs Afghanistan, Team India captain who wrote 2 world records in a single match
Image Credit : BCCI

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ (IND vs AFG) ವಿರುದ್ದದ ಪಂದ್ಯದಲ್ಲಿ ಅತೀ ಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರ ಅನ್ನೋ ದಾಖಲೆ ಬರೆಯಲು ರೋಹಿತ್‌ ಶರ್ಮಾ ಅವರಿಗೆ 2 ಸಿಕ್ಸರ್‌ ಅವಶ್ಯಕತೆಯಿತ್ತು. ರೋಹಿತ್ 551 ಸಿಕ್ಸರ್‌ಗಳನ್ನು ಬಾರಿಸಿದ್ದರೆ, ಕ್ರಿಸ್‌ ಗೇಲ್‌ ಅವರು 553 ಸಿಕ್ಸರ್‌ ದಾಖಲೆ ಹೊಂದಿದ್ದರು.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್‌ ದಾಖಲಿಸಿದ ದಕ್ಷಿಣ ಆಫ್ರಿಕಾ : ವೇಗದ ಶತಕ ಸಿಡಿಸಿದ ಮಕ್ರಮ್‌

ಆದರೆ ಅಫ್ಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಕೇವಲ 84 ಎಸೆತಗಳನ್ನು ಎದುರಿಸಿ ಬರೋಬ್ಬರಿ 131 ರನ್‌ ಬಾರಿಸಿದ್ದರು. ಇದರಲ್ಲಿ 16 ಬೌಂಡರಿ ಹಾಗೂ 5 ಸಿಕ್ಸರ್‌ ಒಳಗೊಂಡಿವೆ. ಈ ಮೂಲಕ ರೋಹಿತ್‌ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 554 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರರು

ರೋಹಿತ್ ಶರ್ಮಾ (ಭಾರತ) – 554 ಸಿಕ್ಸರ್*

ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) – 553 ಸಿಕ್ಸರ್

ಶಾಹಿದ್ ಅಫ್ರಿದಿ (ಪಾಕಿಸ್ತಾನ) – 476 ಸಿಕ್ಸರ್‌ಗಳು

ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್) – 398 ಸಿಕ್ಸರ್‌ಗಳು

ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) – 383 ಸಿಕ್ಸರ್‌ಗಳು

ರೋಹಿತ್‌ ಶರ್ಮಾ ಅವರು ಏಕದಿನ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಶತಕ ಬಾರಿಸಿರುವ ಸಚಿತ್‌ ತೆಂಡೂಲ್ಕರ್‌ ಅವರ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ. ಸಚಿತ್‌ ತೆಂಡೂಲ್ಕರ್‌ ಅವರು ವಿಶ್ವಕಪ್‌ನಲ್ಲಿ ಒಟ್ಟು 6 ಶತಕ ಬಾರಿಸಿದ್ದಾರೆ. ಸದ್ಯ ರೋಹಿತ್‌ ಶರ್ಮಾ ಕೂಡ ವಿಶ್ವಕಪ್‌ನಲ್ಲಿ 6 ಸಿಕ್ಸರ್‌ ಬಾರಿಸಿದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ವೇಗವಾಗಿ 1000 ರನ್ : ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಡೇವಿಡ್‌ ವಾರ್ನರ್‌

ಒಂದೊಮ್ಮೆ ಈ ಬಾರಿಯ ವಿಶ್ವಕಪ್‌ನಲ್ಲಿ ಇನ್ನೊಂದು ಶತಕ ಬಾರಿಸಿದ್ರೆ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಆಟಗಾರ ಅನ್ನೋ ಖ್ಯಾತಿಗೆ ರೋಹಿತ್‌ ಶರ್ಮಾ ಪಾತ್ರರಾಗಲಿದ್ದಾರೆ. ಈ ಸಾಧನೆಯನ್ನು ಮಾಡೋದಕ್ಕೆ ರೋಹಿತ್‌ ಶರ್ಮಾ ಅವರಿಗೆ ಈ ಬಾರಿಯ ವಿಶ್ವಕಪ್‌ನಲ್ಲಿ ಉತ್ತಮ ಅವಕಾಶವಿದೆ. ಟೀಂ ಇಂಡಿಯಾ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದು, ಆಡಿದ ಎರಡು ಪಂದ್ಯಗಳನ್ನು ಭಾರತ ತಂಡ ಜಯಿಸಿದೆ.

2023ರ ವಿಶ್ವಕಪ್‌ಗೆ ಭಾರತ ತಂಡ

ಬ್ಯಾಟ್ಸ್‌ಮನ್‌ : ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್

ವಿಕೆಟ್‌ ಕೀಪರ್‌ : ಇಶಾನ್ ಕಿಶನ್, ಕೆಎಲ್ ರಾಹುಲ್

ವೇಗದ ಬೌಲರ್ ಆಲ್‌ರೌಂಡರ್‌ಗಳು: ಹಾರ್ದಿಕ್ ಪಾಂಡ್ಯ (ವಿಸಿ), ಶಾರ್ದೂಲ್ ಠಾಕೂರ್

ಸ್ಪಿನ್ ಆಲ್ ರೌಂಡರ್ಸ್: ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್

ವೇಗದ ಬೌಲರ್‌ಗಳು: ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

ಸ್ಪಿನ್ನರ್: ಕುಲದೀಪ್ ಯಾದವ್

Rohit Sharma Century India Vs Afghanistan, Team India captain who wrote 2 world records in a single match

Comments are closed.