ಸೋಮವಾರ, ಏಪ್ರಿಲ್ 28, 2025
HomeSportsCricketIndia Vs South Africa 1st ODI : ಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ...

India Vs South Africa 1st ODI : ಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ ಪ್ಲೇಯಿಂಗ್ XI ಹೀಗಿದೆ

- Advertisement -

ಲಕ್ನೋ: India playing XI : ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 (India Vs South Africa 1st ODI) ಸರಣಿಯನ್ನು ಕೈವಶ ಮಾಡಿಕೊಂಡಿರುವ ಭಾರತ, 3 ಪಂದ್ಯಗಳ ಏಕದಿನ ಸರಣಿಯಲ್ಲಿ ಹರಿಣಗಳನ್ನು ಎದುರಿಸಲಿದ್ದು, ಮೊದಲ ಪಂದ್ಯ ಇಂದು (ಅಕ್ಟೋಬರ್ 6) ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ (T20 World Cup 2022) ಆಡಲು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದು, (India Vs South Africa 1st ODI)ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶಿಖರ್ ಧವನ್ ಟೀಮ್ (Shikhar Dhawan) ಇಂಡಿಯಾವನ್ನು ಮುನ್ನಡೆಸಲಿದ್ದು, ಯುವ ಆಟಗಾರರಿಗೆ ಇದು ಉತ್ತಮ ಅವಕಾಶ.

ದೇಶೀಯ ಕ್ರಿಕೆಟ್’ನಲ್ಲಿ ಅಮೋಘ ಪ್ರದರ್ಶನ ತೋರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ, ಮಧ್ಯಪ್ರದೇಶದ ರಜತ್ ಪಾಟಿದಾರ್ (Rajat Patidar) ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ. ನಾಯಕ ಶಿಖರ್ ಧವನ್ ಜೊತೆ ಪಂಜಾಬ್’ನ ಯುವ ಓಪನರ್ ಶುಭಮನ್ ಗಿಲ್ ಭಾರತದ ಇನ್ನಿಂಗ್ಸ್ ಆರಂಭಿಸಲಿದ್ದು, ಉಪನಾಯಕ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಮತ್ತು ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. 6ನೇ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಠಿ ಅಥವಾ ರಜತ್ ಪಾಟಿದಾರ್ ಆಡಲಿದ್ದಾರೆ.

ಟಿ20 ವಿಶ್ವಕಪ್ ತಂಡದ ಮೀಸಲು ಆಟಗಾರರ ಪಟ್ಟಿಯಲ್ಲಿರುವ ದೀಪಕ್ ಚಹರ್ ಮೇಲೆ ಎಲ್ಲರ ಗಮನ ನೆಟ್ಟಿದೆ. ಕಾರಣ, ಟಿ20 ವಿಶ್ವಕಪ್’ನಿಂದ ಹೊರ ಬಿದ್ದಿರುವ ಜಸ್ಪ್ರೀತ್ ಬುಮ್ರಾ ಸ್ಥಾನ ತುಂಬಲು ದೀಪಕ್ ಚಹರ್ ರೇಸ್’ನಲ್ಲಿದ್ದಾರೆ. ಉಳಿದಂತೆ ದಕ್ಷಿಣ ಆಫ್ರಿಕಾ ವಿರುದ್ಧ ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ರವಿ ಬಿಷ್ಣೋಯ್ ಮತ್ತು ಕುಲ್ದೀಪ್ ಯಾದವ್ ಭಾರತ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : Rohit Sharma : ರೋಹಿತ್ ನಾಯಕತ್ವದಲ್ಲಿ ದಶ ದಿಗ್ವಿಜಯ.. ಕಂಪ್ಲೀಟ್ ಆಗುತ್ತಾ ಮಿಷನ್ ವರ್ಲ್ಡ್ ಕಪ್ ?

ಇದನ್ನೂ ಓದಿ : Sarfaraz Khan : ಭಾರತ ತಂಡದಲ್ಲಿ ಸ್ಥಾನ ಪಡೆಯಲು ಈ ಆಟಗಾರ ಇನ್ನೆಷ್ಟು ಶತಕ ಹೊಡೆಯಬೇಕು ?

ಇದನ್ನೂ ಓದಿ : Jasprit bumrah Mohamed Shami: ಟಿ20 ವಿಶ್ವಕಪ್: ಶಮಿ, ಚಹರ್, ಸಿರಾಜ್, ಬುಮ್ರಾ ಬದಲು ಯಾರು ? ಬಿಗ್ ಅಪ್‌ಡೇಟ್ ಕೊಟ್ಟ ಕೋಚ್ ದ್ರಾವಿಡ್

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI :
1.ಶಿಖರ್ ಧವನ್ (ನಾಯಕ), 2.ಶುಭಮನ್ ಗಿಲ್, 3.ಶ್ರೇಯಸ್ ಅಯ್ಯರ್, 4.ಇಶಾನ್ ಕಿಶನ್, 5.ಸಂಜು ಸ್ಯಾಮ್ಸನ್, 6.ರಾಹುಲ್ ತ್ರಿಪಾಠಿ/ರಜತ್ ಪಾಟಿದಾರ್, 7.ಶಾರ್ದೂಲ್ ಠಾಕೂರ್, 8.ದೀಪಕ್ ಚಹರ್, 9.ಕುಲ್ದೀಪ್ ಯಾದವ್, 10.ರವಿ ಬಿಷ್ಣೋಯ್, 11.ಮೊಹಮ್ಮದ್ ಸಿರಾಜ್.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ಸ್ಥಳ: ಏಕನಾ ಕ್ರಿಕೆಟ್ ಮೈದಾನ, ಲಕ್ನೋ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

This is the Team India playing XI under the captaincy of Shikhar Dhawan

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular