ಮಂಗಳವಾರ, ಏಪ್ರಿಲ್ 29, 2025
HomeSportsCricketIndia vs South Africa T20 Series : ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮೊದಲೇ...

India vs South Africa T20 Series : ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮೊದಲೇ ಭಾರತಕ್ಕೆ ಆಘಾತ; ಸ್ಟಾರ್ ಪ್ಲೇಯರ್ ಸರಣಿಯಿಂದಲೇ ಔಟ್

- Advertisement -

ತಿರುವನಂತಪುರ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮೊದಲೇ ಭಾರತಕ್ಕೆ ಆಘಾತ ಎದುರಾಗಿದೆ. ಟೀಮ್ ಇಂಡಿಯಾದ ಯುವ ಆಲ್ರೌಂಡರ್ ದೀಪಕ್ ಹೂಡ (Deepak Hooda out) ಬೆನ್ನು ನೋವಿನ ಕಾರಣ ಸರಣಿಯಿಂದಲೇ ಹೊರ ಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದ್ದು, ಮೊದಲ ಪಂದ್ಯ ಬುಧವಾರ ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆಯಲಿದೆ. ಸರಣಿಯ 2ನೇ ಪಂದ್ಯ ಅಕ್ಟೋಬರ್ 2ರಂದು ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿದ್ದರೆ, ಕೊನೇ ಪಂದ್ಯಕ್ಕೆ ಅಕ್ಟೋಬರ್ 4ರಂದು ಮಧ್ಯಪ್ರದೇಶದ ಇಂದೋರ್ ಆತಿಥ್ಯ ವಹಿಸಲಿದೆ.

ಸೋಮವಾರ ರಾತ್ರಿ ತಿರುವನಂತಪುರಕ್ಕೆ ಬಂದಿಳಿದ ಟೀಮ್ ಇಂಡಿಯಾ ಜೊತೆ ದೀಪಕ್ ಹೂಡ ಕಾಣಿಸಿಕೊಳ್ಳಲಿಲ್ಲ. ಬೆನ್ನು ನೋವಿನಿಂದ ಬಳಲುತ್ತಿರುವ ದೀಪಕ್ ಹೂಡ (deepak Hooda)‌ ಸರಣಿಯಿಂದ ಹೊರ ಬಿದ್ದಿದ್ದು, ವಿಶ್ವಕಪ್’ಗೂ ಮೊದಲು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾಗಿರುವ 15 ಸದಸ್ಯರ ತಂಡದಲ್ಲಿ ದೀಪಕ್ ಹೂಡ ಸ್ಥಾನ ಪಡೆದಿದ್ದಾರೆ. ಹೂಡ ಗಾಯದ ಪ್ರಮಾಣದ ಬಗ್ಗೆ ಬಿಸಿಸಿಐ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ದೀಪಕ್ ಹೂಡ ಸ್ಥಾನದಲ್ಲಿ ಮುಂಬೈ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ (Shreyas Iyer) ಟೀಮ್ ಇಂಡಿಯಾ ಸೇರಿಕೊಂಡಿದ್ದಾರೆ. ಕೋವಿಡ್-19ನಿಂದ ಬಳಲುತ್ತಿರುವ ಅನುಭವಿ ವೇಗಿ ಮೊಹಮ್ಮದ್ ಶಮಿ ಇನ್ನೂ ಚೇತರಿಸಿಕೊಳ್ಳದ ಕಾರಣ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದಲೂ ಹೊರಗುಳಿಯಲಿದ್ದಾರೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಟಿ20 ಸರಣಿಗಳಿಗೆ ಆಯ್ಕೆಯಾಗಿದ್ದ ಮೊಹಮ್ಮದ್ (Mohammed Shami) ಶಮಿ ಆಸೀಸ್ ವಿರುದ್ಧದ ಸರಣಿ ಆರಂಭಕ್ಕೂ ಮೊದಲೇ ಕೋವಿಡ್-19ಗೆ ಗುರಿಯಾಗಿದ್ದರು. ಹರಿಣಗಳ ವಿರುದ್ಧದ ಸರಣಿಗೆ ಸ್ಟಾರ್ ಅಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದ್ದು, ಆಸೀಸ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಯುವ ಎಡಗೈ ಸೀಮರ್ ಅರ್ಷದೀಪ್ ಸಿಂಗ್ (Arshdeep Singh) ತಂಡಕ್ಕೆ ಮರಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಸಂಭಾವ್ಯ ಪ್ಲೇಯಿಂಗ್ XI
1.ರೋಹಿತ್ ಶರ್ಮಾ (ನಾಯಕ), 2.ಕೆ.ಎಲ್ ರಾಹುಲ್ (ಉಪನಾಯಕ), 3.ವಿರಾಟ್ ಕೊಹ್ಲಿ, 4.ಸೂರ್ಯಕುಮಾರ್ ಯಾದವ್, 5.ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), 6.ಅಕ್ಷರ್ ಪಟೇಲ್, 7.ರವಿಚಂದ್ರನ್ ಅಶ್ವಿನ್, 8.ಹರ್ಷಲ್ ಪಟೇಲ್/ಭುವನೇಶ್ವರ್ ಕುಮಾರ್, 9.ಜಸ್ಪ್ರೀತ್ ಬುಮ್ರಾ, 10.ಯುಜ್ವೇಂದ್ರ ಚಹಲ್, 11.ಅರ್ಷದೀಪ್ ಸಿಂಗ್.

ಭಾರತ Vs ದಕ್ಷಿಣ ಆಫ್ರಿಕಾ ಟಿ20 ಸರಣಿಯ ವೇಳಾಪಟ್ಟಿ
ಮೊದಲ ಪಂದ್ಯ: ಸೆಪ್ಟೆಂಬರ್ 28, ತಿರುವನಂತಪುರ, ಕೇರಳ
2ನೇ ಪಂದ್ಯ: ಅಕ್ಟೋಬರ್ 02, ಗುವಾಹಟಿ, ಅಸ್ಸಾಂ
3ನೇ ಪಂದ್ಯ: ಅಕ್ಟೋಬರ್ 04, ಇಂದೋರ್, ಮಧ್ಯಪ್ರದೇಶ

ಪಂದ್ಯಗಳ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : Virat Kohli batting Strategy : “ರೋಹಿತ್ ಮತ್ತು ರಾಹುಲ್ ಹೇಳಿದ್ರು..” ಆಸೀಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಸ್ಟ್ರಾಟಜಿ ರಹಸ್ಯ ಬಿಚ್ಟಿಟ್ಟ ಕಿಂಗ್ ಕೊಹ್ಲಿ

ಇದನ್ನೂ ಓದಿ : Kohli Breaks Dravid Record : ರಾಹುಲ್ ದ್ರಾವಿಡ್ ಎದುರಲ್ಲೇ ದಿ ವಾಲ್ ರೆಕಾರ್ಡ್ ಬ್ರೇಕ್ ಮಾಡಿದ ವಿರಾಟ್ ಕೊಹ್ಲಿ

India vs South Africa T20 Series Before Match Team India star player Deepak Hooda out for the series

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular