Team India arrives in Thiruvananthapuram: ಸಂಜು ಸ್ಯಾಮ್ಸನ್ ನಾಡಿಗೆ ಬಂದಿಳಿದ ಟೀಮ್ ಇಂಡಿಯಾಗೆ ಭರ್ಜರಿ ವೆಲ್ ಕಮ್

ತಿರುವನಂತಪುರ: ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿರುವ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ (India Vs South Africa T20 Series) ಕೇರಳದ ತಿರುವನಂತಪುರಕ್ಕೆ ಬಂದಿಳಿದಿದೆ. ಹೈದರಾಬಾದ್’ನಿಂದ ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಟೀಮ್ ಇಂಡಿಯಾ ( Team India)ಆಟಗಾರರಿಗೆ ಸಂಜು ಸ್ಯಾಮ್ಸನ್ (Sanju Samson) ನಾಡಿನ ಕ್ರಿಕೆಟ್ ಪ್ರಿಯರು ಭರ್ಜರಿ ಸ್ವಾಗತ ಕೋರಿದರು.

ಐಸಿಸಿ ಟಿ20 ವಿಶ್ವಕಪ್ ತಂಡದಲ್ಲಿ ಸಂಜು ಸ್ಯಾಮ್ಸನ್ (Sanju Samson) ಅವರಿಗೆ ಸ್ಥಾನ ನೀಡದಿರುವುದನ್ನು ವಿರೋಧಿ, ಸೆಪ್ಟೆಂಬರ್ 28ರಂದು ನಡೆಯುವ ಭಾರತ Vs ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯದ ವೇಳೆ ಪ್ರತಿಭಟನೆ ನಡೆಸುವುದಾಗಿ ಕೇರಳದ ಕ್ರಿಕೆಟ್ ಅಭಿಮಾನಿಗಳು ಎಚ್ಚರಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 3 ಪಂದ್ಯಗಳ ಟಿ20 ಸರಣಿ ಯನ್ನಾಡಲಿದ್ದು, ಮೊದಲ ಪಂದ್ಯ ಬುಧವಾರ ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆಯಲಿದೆ. ಸರಣಿಯ 2ನೇ ಪಂದ್ಯ ಅಕ್ಟೋಬರ್ 2ರಂದು ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿದ್ದರೆ, ಕೊನೇ ಪಂದ್ಯಕ್ಕೆ ಅಕ್ಟೋಬರ್ 4ರಂದು ಮಧ್ಯಪ್ರದೇಶದ ಇಂದೋರ್ ಆತಿಥ್ಯ ವಹಿಸಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗಲು ಭಾರತಕ್ಕೆ ಸಿಕ್ಕಿರುವ ಕೊನೆಯ ಅವಕಾಶ. ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಸೋತು ಫೈನಲ್ ತಲುಪಲು ವಿಫಲವಾಗಿ ನಿರಾಸೆ ಅನುಭವಿಸಿದ್ದ ರೋಹಿತ್ ಶರ್ಮಾ ಬಳಗ, ಈಗಾಗ್ಲೇ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು (India Vs Australia T20 Series) 2-1ರಿಂದ ಗೆದ್ದುಕೊಂಡು ಆತ್ಮವಿಶ್ವಾಸವನ್ನು ಮರಳಿ ಪಡೆದಿದೆ. ಆಸೀಸ್ ವಿರುದ್ಧದ ಸರಣಿ ಮೊದಲ ಪಂದ್ಯವನ್ನು ಸೋತಿದ್ದ ಭಾರತ ನಂತರದ ಎರಡೂ ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿತ್ತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನೂ ಗೆಲ್ಲುವ ಮೂಲಕ ಭಾರತ ತಂಡ ವಿಶ್ವಕಪ್’ಗೆ ಉತ್ತಮ ರೀತಿಯಲ್ಲಿ ಸಜ್ಜಾಗುವ ಗುರಿ ಹೊಂದಿದೆ.

ಭಾರತ Vs ದಕ್ಷಿಣ ಆಫ್ರಿಕಾ ಟಿ20 ಸರಣಿಯ ವೇಳಾಪಟ್ಟಿ
ಮೊದಲ ಪಂದ್ಯ: ಸೆಪ್ಟೆಂಬರ್ 28, ತಿರುವನಂತಪುರ, ಕೇರಳ
2ನೇ ಪಂದ್ಯ: ಅಕ್ಟೋಬರ್ 02, ಗುವಾಹಟಿ, ಅಸ್ಸಾಂ
3ನೇ ಪಂದ್ಯ: ಅಕ್ಟೋಬರ್ 04, ಇಂದೋರ್, ಮಧ್ಯಪ್ರದೇಶ

ಪಂದ್ಯಗಳ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : “ರೋಹಿತ್ ಮತ್ತು ರಾಹುಲ್ ಹೇಳಿದ್ರು..” ಆಸೀಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಸ್ಟ್ರಾಟಜಿ ರಹಸ್ಯ ಬಿಚ್ಟಿಟ್ಟ ಕಿಂಗ್ ಕೊಹ್ಲಿ

ಇದನ್ನೂ ಓದಿ : India vs South Africa T20 Series : ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮೊದಲೇ ಭಾರತಕ್ಕೆ ಆಘಾತ; ಸ್ಟಾರ್ ಪ್ಲೇಯರ್ ಸರಣಿಯಿಂದಲೇ ಔಟ್

Sanju Samson Team India arrives in Thiruvananthapuram India Vs South Africa T20 Series

Comments are closed.