ಸೋಮವಾರ, ಏಪ್ರಿಲ್ 28, 2025
HomeSportsCricketIndia will win T20 world cup : ಭಾರತ ಈ ಬಾರಿ ಟಿ20 ವಿಶ್ವಕಪ್...

India will win T20 world cup : ಭಾರತ ಈ ಬಾರಿ ಟಿ20 ವಿಶ್ವಕಪ್ ಗೆಲ್ಲೋದು ಪಕ್ಕಾ.. ಕಾರಣ ಐರ್ಲೆಂಡ್

- Advertisement -

ಬೆಂಗಳೂರು: India will win T20 world cup : ಟೀಮ್ ಇಂಡಿಯಾ 15 ವರ್ಷಗಳ ನಂತರ ಟಿ20 ವಿಶ್ವಕಪ್ (T20 World Cup 2022) ಗೆಲ್ಲೋದು ಪಕ್ಕಾ. ಇದಕ್ಕೆ ಕಾರಣ ಐರ್ಲೆಂಡ್ (Ireland). ಅಚ್ಚರಿಯಾದ್ರೂ ಇದೊಂದು ಇಂಟ್ರೆಸ್ಟಿಂಗ್ ಸಂಗತಿ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶಗಳು ಹೊರ ಬೀಳುತ್ತಿವೆ. ಮೊದಲು 2 ಬಾರಿಯ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ತಂಡ, ಐರ್ಲೆಂಡ್ ವಿರುದ್ಧ ಸೋತು ಅರ್ಹತಾ ಸುತ್ತಿನಿಂದಲೇ ಟೂರ್ನಿ ಯಿಂದ ನಿರ್ಗಮಿಸಿತ್ತು. ನಂತರ ಐರ್ಲೆಂಡ್ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ತಂಡವನ್ನು ಮಣಿಸಿ ಅಚ್ಚರಿ ಮೂಡಿಸಿತ್ತು. ಗುರುವಾರವಷ್ಟೇ ಜಿಂಬಾಬ್ವೆ ತಂಡ ಬಲಿಷ್ಠ ಪಾಕಿಸ್ತಾನಕ್ಕೆ 1 ರನ್ನಿಂದ ಶಾಕ್ ಕೊಟ್ಟಿತ್ತು.

ಅಷ್ಟಕ್ಕೂ ಈ ಫಲಿತಾಂಶಗಳಿಗೂ ಭಾರತ ಟಿ20 ವಿಶ್ವಕಪ್ ಗೆಲ್ಲೋದಕ್ಕೂ ಇನ್ ಸಂಬಂಧ? ಸಂಬಂಧ ಇದೆ. ನಿಮ್ಗೆ ನೆನಪಿರಬಹುದು. 2011ರಲ್ಲಿ ಭಾರತದಲ್ಲೇ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ರೋಚಕ ಗೆಲುವು ಸಾಧಿಸಿತ್ತು. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ಒಡ್ಡಿದ್ದ 328 ರನ್’ಗಳ ಗುರಿ ಬೆನ್ನಟ್ಟಿದ್ದ ಐರ್ಲೆಂಡ್ 3 ವಿಕೆಟ್’ಗಳಿಂದ ಇಂಗ್ಲೆಂಡ್’ಗೆ ಆಘಾತ ನೀಡಿತ್ತು. ಆ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು.

ಇದೀಗ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದೇ ಐರ್ಲೆಂಡ್ ತಂಡ, ಇಂಗ್ಲೆಂಡ್ ವಿರುದ್ಧ ಗೆದ್ದಿದೆ. ಹೀಗಾಗಿ ಈ ಬಾರಿಯೂ ಇತಿಹಾಸ ಮರುಕಳಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 2011ರಲ್ಲಿ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ಗೆದ್ದಾಗ ಭಾರತ ವಿಶ್ವಕಪ್ ಗೆದ್ದಂತೆ, ಈ ಬಾರಿಯೂ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ಗೆದ್ದಿರುವ ಸಂದರ್ಭದಲ್ಲೇ ಭಾರತ ಮತ್ತೊಮ್ಮೆ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಭಾರತ ತಂಡ 2007ರಲ್ಲಿ ಎಂ.ಎಸ್ ಧೋನಿ ನಾಯಕತ್ವದಲ್ಲಿ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್’ನಲ್ಲಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿತ್ತು. ಆದರೆ ನಂತರ ಒಮ್ಮೆಯೂ ಭಾರತಕ್ಕೆ ಚುಟುಕು ವಿಶ್ವಕಪ್ ದಕ್ಕಿಲ್ಲ. 2014ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ತಲುಪಿದ್ರೂ, ಫೈನಲ್’ನಲ್ಲಿ ಶ್ರೀಲಂಕಾ ವಿರುದ್ಧ ಸೋತಿದ್ದ ಧೋನಿ ಪಡೆ ನಿರಾಸೆ ಅನುಭವಿಸಿತ್ತು. 2016ರಲ್ಲಿ ಭಾರತದಲ್ಲೇ ನಡೆದ ಟೂರ್ನಿಯ ಸೆಮಿಫೈನಲ್’ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋತಿತ್ತು. 2021ರ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೇರುವಲ್ಲಿ ಭಾರತ ವಿಫಲವಾಗಿತ್ತು. ಆದರೆ ಈ ಬಾರಿ ವಿಶ್ವಕಪ್ ಗೆಲ್ಲಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ : Alien in India Vs Pakistan match: ಭಾರತ Vs ಪಾಕಿಸ್ತಾನ ಪಂದ್ಯದಲ್ಲಿ ಮೈದಾನದಲ್ಲೇ ಕಾಣಿಸಿಕೊಂಡ ಏಲಿಯನ್

ಇದನ್ನೂ ಓದಿ : Ireland beat England : ಟಿ20 ವಿಶ್ವಕಪ್’ನಲ್ಲಿ ಮತ್ತೊಂದು ಅಚ್ಚರಿ. ಐರ್ಲೆಂಡ್ ವಿರುದ್ಧ ಆಘಾತಕಾರಿ ಸೋಲುಂಡ ಇಂಗ್ಲೆಂಡ್

India will win T20 world cup this time because of Ireland

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular