ಸೋಮವಾರ, ಏಪ್ರಿಲ್ 28, 2025
HomeSportsCricketJasprit Bumrah out of T20 World Cup : ಟಿ20 ವಿಶ್ವಕಪ್’ನಿಂದ ಜಸ್‌ಪ್ರೀತ್ ಬುಮ್ರಾ...

Jasprit Bumrah out of T20 World Cup : ಟಿ20 ವಿಶ್ವಕಪ್’ನಿಂದ ಜಸ್‌ಪ್ರೀತ್ ಬುಮ್ರಾ ಔಟ್, ಭಾರತಕ್ಕೆ ಸಿಡಿಲಾಘಾತ

- Advertisement -

ಬೆಂಗಳೂರು: Jasprit Bumrah out T20 World Cup : ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾದ ಸಿಡಿಲಾಘಾತ ಎದುರಾಗಿದೆ. ತಂಡದ ಟ್ರಂಪ್ ಕಾರ್ಡ್ ಫಾಸ್ಟ್ ಬೌಲರ್ ಜಸ್’ಪ್ರೀತ್ ಬುಮ್ರಾ ಗಾಯದ ಕಾರಣ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಬೆನ್ನು ನೋವಿನ ಸಮಸ್ಯೆಗೊಳಗಾಗಿದ್ದ ವೇಗಿ ಜಸ್’ಪ್ರೀತ್ ಬುಮ್ರಾ ಬುಧವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಆಡಿರಲಿಲ್ಲ. ಬುಮ್ರಾ ಸಣ್ಣ ಪ್ರಮಾಣದ ಗಾಯದಿಂದ ಬಳಲುತ್ತಿದ್ದ ವಿಶ್ವಕಪ್’ಗೆ ಲಭ್ಯರಾಗಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಗುರುವಾರ ಹೊರ ಬಿದ್ದಿರುವ ಸುದ್ದಿ ಕೇಳಿ ಟೀಮ್ ಇಂಡಿಯಾ ದಂಗಾಗಿ ಹೋಗಿದೆ.

“ಟಿ20 ವಿಶ್ವಕಪ್’ನಲ್ಲಿ ಬುಮ್ರಾ ಆಡುತ್ತಿಲ್ಲ. ಅವರು ಗಂಭೀರ ಬೆನ್ನು ನೋವಿನಿಂದ ಬಳಲುತ್ತಿದ್ದು, ಆರು ತಿಂಗಳು ಕ್ರಿಕೆಟ್’ನಿಂದಲೇ ದೂರು ಉಳಿಯಲಿದ್ದಾರೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಗಾಯದ ಕಾರಣ ಏಷ್ಯಾ ಕಪ್ ಟೂರ್ನಿಗೂ ಅಲಭ್ಯರಾಗಿದ್ದ ಬುಮ್ರಾ, ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದರು. ಆದರೆ ಕೇವಲ 2 ಪಂದ್ಯಗಳನ್ನಾಡುವಷ್ಟರಲ್ಲಿ ಮತ್ತೆ ಗಾಯದ ಸಮಸ್ಯೆಗೆ ಗುರಿಯಾಗಿದ್ದು, ವಿಶ್ವಕಪ್ ಟೂರ್ನಿಗೆ ಅಲಭ್ಯರಾಗಿದ್ದಾರೆ.

ಟಿ20 ವಿಶ್ವಕಪ್’ಗೆ ಜಸ್’ಪ್ರೀತ್ ಬುಮ್ರಾ ಅವರ ಅಲಭ್ಯತೆ ಟೀಮ್ ಇಂಡಿಯಾಗೆ ಬಹುದೊಡ್ಡ ಹೊಡೆತ. ಈಗಾಗ್ಲೇ ರೋಹಿತ್ ಶರ್ಮಾ ಬಳಗ ಡೆತ್ ಓವರ್ ವೈಫಲ್ಯ ಎದುರಿಸುತ್ತಿದ್ದು ಬುಮ್ರಾ ಅವರ ಅನುಪಸ್ಥಿತಿ ತಂಡಕ್ಕೆ ಭಾರೀ ಹಿನ್ನಡೆಯಾಗಿ ಪರಿಣಮಿಸಲಿದೆ. ಬುಮ್ರಾ ಅವರ ಬದಲು ಬಲಗೈ ಸ್ವಿಂಗ್ ಬೌಲರ್ ದೀಪಕ್ ಚಹರ್ ವಿಶ್ವಕಪ್’ನಲ್ಲಿ ಆಡಲಿರುವ ಟೀಮ್ ಇಂಡಿಯಾ 15ರ ಬಳಗ ಸೇರಿಕೊಳ್ಳುವ ಸಾಧ್ಯತೆಯಿದೆ. ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದ ದೀಪಕ್ ಚಹರ್ 24 ರನ್ನಿಗೆ 2 ವಿಕೆಟ್ ಪಡೆದಿದ್ದರು.

ಟಿ20 ವಿಶ್ವಕಪ್’ಗಾಗಿ ಭಾರತದ ಮೀಸಲು ಆಟಗಾರನಾಗಿರುವ ಅಭವಿ ವೇಗಿ ಮೊಹಮ್ಮದ್ ಶಮಿ ಕೋವಿಡ್ ಕಾರಣದಿಂದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಅಲಭ್ಯರಾಗಿದ್ದಾರೆ. ವಿಶ್ವಕಪ್ ಟೂರ್ನಿಗೂ ಮುನ್ನ ಮೊಹಮ್ಮದ್ ಶಮಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ : KL Rahul: ಟಫ್ ಪಿಚ್‌ನಲ್ಲಿ ಟೀಮ್ ಇಂಡಿಯಾವನ್ನು ಗೆಲ್ಲಿಸಿದ್ರೂ ರಾಹುಲ್ ಮೇಲೆ ಟೀಕಾಸ್ತ್ರ, ಟ್ರೋಲ್‌ಗಳ ಸುರಿಮಳೆ

ಇದನ್ನೂ ಓದಿ : Suryakumar Yadav : ಸಿಕ್ಸ್ ಹಿಟ್ಟಿಂಗ್‌ನಲ್ಲಿ ಪಾಕಿಸ್ತಾನದ ರಿಜ್ವಾನ್ ರೆಕಾರ್ಡ್ ಪೀಸ್ ಪೀಸ್.. ಹೊಸ ವಿಶ್ವದಾಖಲೆ ಬರೆದ ಸೂರ್ಯಕುಮಾರ್ ಯಾದವ್

Indian Cricket Team Bowler Jasprit Bumrah out of T20 World Cup

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular