Indian women’s cricket team : ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡಲಿದೆ ಭಾರತ ಮಹಿಳಾ ಕಿಕೆಟ್ ತಂಡ ; ಹರ್ಮನ್‌ಪ್ರೀತ್ ಕೌರ್ ಕ್ಯಾಪ್ಟನ್

ಬೆಂಗಳೂರು: ಇದೇ ತಿಂಗಳ 29ನೇ ತಾರೀಕಿನಿಂದ ಇಂಗ್ಲೆಂಡ್”ನ ಬರ್ಮಿಂಗ್”ಹ್ಯಾಮ್”ನಲ್ಲಿ ಆರಂಭವಾಗಲಿರುವ ಕಾಮನ್ವೆಲ್ತ್ ಗೇಮ್ಸ್”ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಆಡಲಿದೆ. ಕಾಮನ್ವೆಲ್ತ್ ಗೇಮ್ಸ್”ನಲ್ಲಿ ಆಡಲಿರುವ ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ ತಂಡವನ್ನು (Indian women’s cricket team) ಪ್ರಕಟಿಸಲಾಗಿದ್ದು, ಅನುಭವಿ ಆಲ್ರೌಂಡರ್ ಹರ್ಮನ್”ಪ್ರೀತ್ ಕೌರ್ (Harmanpreet Kaur) ತಂಡವನ್ನು ಮುನ್ನಡೆಸಲಿದ್ದಾರೆ. (Team India (Senior Women) squad for Birmingham 2022 Commonwealth Games announced) ಅನುಭವಿ ಎಡಗೈ ಓಪನರ್ ಸ್ಮೃತಿ ಮಂಧನ (Smriti Mandhana) ಉಪನಾಯಕಿಯಾಗಿ ನೇಮಕಗೊಂಡಿದ್ದಾರೆ. ಭಾರತ ಮಹಿಳಾ ತಂಡ ಇದೇ ಮೊದಲ ಬಾರಿ ಕಾಮನ್ವೆಲ್ತ್ ಗೇಮ್ಸ್”ನಲ್ಲಿ ಆಡಲಿದೆ.

ಕಾಮನ್ವೆಲ್ತ್ ಗೇಮ್ಸ್”ನಲ್ಲಿ ಭಾರತ ತಂಡ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಬಾರ್ಬೆಡೋಸ್ ತಂಡಗಳ ಜೊತೆ ಗ್ರೂಪ್ ‘ಎ’ನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಗ್ರೂಪ್ ‘ಬಿ’ನಲ್ಲಿ ಸ್ಥಾನ ಪಡೆದಿವೆ. ಎಂಟೂ ತಂಡಗಳು ಲೀಗ್ ಹಂತದಲ್ಲಿ ತಲಾ 3 ಪಂದ್ಯಗಳನ್ನು ಆಡಲಿದ್ದು, ಎರಡೂ ಗ್ರೂಪ್’ಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ಜುಲೈ 29ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಹರ್ಮನ್’ಪ್ರೀತ್ ಕೌರ್ ಬಳಗ ತನ್ನ ಮೂರೂ ಲೀಗ್ ಪಂದ್ಯಗಳನ್ನು ಬರ್ಮಿಂಗ್’ಹ್ಯಾಮ್”ನ ಎಡ್ಜ್ ಬಾಸ್ಟನ್ ಮೈದಾನದಲ್ಲೇ ಆಡಲಿದೆ.

ಕಾಮನ್ವೆಲ್ತ್ ಗೇಮ್ಸ್: ಭಾರತ ಮಹಿಳಾ ತಂಡದ ವೇಳಾಪಟ್ಟಿ
ಜುಲೈ 29 Vs ಆಸ್ಟ್ರೇಲಿಯಾ (ಎಡ್ಜ್’ಬಾಸ್ಟನ್)
ಜುಲೈ 31 Vs ಪಾಕಿಸ್ತಾನ (ಎಡ್ಜ್’ಬಾಸ್ಟನ್)
ಆಗಸ್ಟ್ 03 Vs ಬಾರ್ಬೆಡೋಸ್ (ಎಡ್ಜ್’ಬಾಸ್ಟನ್)

ಕಾಮನ್ವೆಲ್ತ್ ಗೇಮ್ಸ್: ಭಾರತ ಮಹಿಳಾ ತಂಡ
ಹರ್ಮನ್’ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ಶೆಫಾಲಿ ವರ್ಮಾ, ಎಸ್.ಮೇಘನಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಕಾರ್, ಮೇಘನಾ ಸಿಂಗ್, ರೇಣುಕಾ ಠಾಕೂರ್, ಜೆಮಿಮಾ ರಾಡ್ರಿಗ್ಸ್, ರಾಧಾ ಯಾಜವ್, ಹರ್ಲೀನ್ ಡಿಯೋಲ್, ಸ್ನೇಹ್ ರಾಣಾ.

ಮೀಸಲು ಆಟಗಾರ್ತಿಯರು: ಸಿರ್ಮಾನ್ ದಿಲ್ ಬಹದ್ದೂರ್, ರಿಚಾ ಘೋಷ್, ಪೂನಂ ಯಾದವ್.

ಇದನ್ನೂ ಓದಿ : Groin Injury Virat Kohli : ಇಂಗ್ಲೆಂಡ್ ವಿರುದ್ಧದ 1 ನೇ ಏಕದಿನ ಪಂದ್ಯದಿಂದ ವಿರಾಟ್‌ ಕೊಹ್ಲಿ ಔಟ್‌

ಇದನ್ನೂ ಓದಿ : KL Rahul Tattoo : ಕೈಗೆ “ಗೂಬೆ” ಚಿತ್ರವನ್ನು ಹಚ್ಚೆ ಹಾಕಿಸಿಕೊಂಡು ಅಚ್ಚರಿ ಮೂಡಿಸಿದ ರಾಹುಲ್, ಗೂಬೆಯ ಮಹತ್ವ ಏನ್ ಗೊತ್ತಾ..?

Indian women’s cricket team to play in Commonwealth Games ; Harmanpreet Kaur Captain

Comments are closed.