Women’s Asia Cup Final INDW vs SLW : ಮಹಿಳಾ ಏಷ್ಯಾ ಕಪ್: ನಾಳೆ ಭಾರತ Vs ಶ್ರೀಲಂಕಾ ಫೈನಲ್, 8ನೇ ಕಿರೀಟದ ಗುರಿಯಲ್ಲಿ ಟೀಮ್ ಇಂಡಿಯಾ

ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾ ಕಪ್ ಟಿ20 ಟೂರ್ನಿ (Womens Asia Cup Final ) ಅಂತಿಮ ಘಟ್ಟ ತಲುಪಿದ್ದು, ಶನಿವಾರ ನಡೆಯುವ ಫೈನಲ್ ಮುಖಾಮುಖಿಯಲ್ಲಿ 6 ಬಾರಿಯ ಚಾಂಪಿಯನ್ ಭಾರತ ಮತ್ತು ಶ್ರೀಲಂಕಾ ತಂಡಗಳು (INDW vs SLW) ಮುಖಾಮುಖಿಯಾಗಲಿವೆ. ಈ ಪಂದ್ಯದ ಬಾಂಗ್ಲಾದೇಶದ ಸಿಲ್ಹೆಟ್’ನಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ಶುಕ್ರವಾರ ನಡೆದ ಸೆಮಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 74 ರನ್’ಗಳಿಂದ ಸುಲಭವಾಗಿ ಮಣಿಸಿದ್ದ ಭಾರತ ದಾಖಲೆಯ 8ನೇ ಬಾರಿ ಫೈನಲ್’ಗೆ ಲಗ್ಗೆಯಿಟ್ಟಿತ್ತು. ಮತ್ತೊಂದು ಸೆಮಿಫೈನಲ್’ನಲ್ಲಿ ಪಾಕಿಸ್ತಾನ ವಿರುದ್ಧ ಒಂದು ರನ್ನಿನ ರೋಚಕ ಗೆಲುವು ಸಾಧಿಸಿದ ಶ್ರೀಲಂಕಾ ವನಿತೆಯರು ಫೈನಲ್ ತಲುಪಿದ್ದಾರೆ. 2004, 2005, 2006 ಹಾಗೂ 2008ರಲ್ಲೂ ಫೈನಲ್ ತಲುಪಿದ್ದ ಶ್ರೀಲಂಕಾ ತಂಡ, ಫೈನಲ್’ನಲ್ಲಿ ಭಾರತ ವಿರುದ್ಧ ಸೋಲು ಕಂಡಿತ್ತು.

2004ರಲ್ಲಿ ಆರಂಭಗೊಂಡಿದ್ದ ಮಹಿಳಾ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಇದುವರೆಗೆ 8 ಬಾರಿಯೂ ಫೈನಲ್ ತಲುಪಿದ ಸಾಧನೆ ಮಾಡಿದೆ. ಈ ಪೈಕಿ 2004ರಿಂದ 2016ರವರೆಗೆ ಸತತ ಆರು ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದ ಟೀಮ್ ಇಂಡಿಯಾ, 2018ರ ಫೈನಲ್’ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋತು ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಈ ಬಾರಿ ಮತ್ತೆ ಫೈನಲ್ ತಲುಪಿರುವ ಭಾರತ ಏಷ್ಯಾ ಕಪ್ ಮರಳಿ ಪಡೆಯುವ ವಿಶ್ವಾಸದಲ್ಲಿದೆ.

ಮಹಿಳಾ ಏಷ್ಯಾ ಕಪ್ ಫೈನಲ್
ಭಾರತ Vs ಶ್ರೀಲಂಕಾ (ಅಕ್ಟೋಬರ್ 15, ಶನಿವಾರ)
ಪಂದ್ಯ ಆರಂಭ: ಮಧ್ಯಾಹ್ನ 1ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರೀಡಾಂಗಣ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಫೈನಲ್ ಪಂದ್ಯಕ್ಕೆ ಭಾರತದ ಸಂಭಾವ್ಯ XI :

1.ಶೆಫಾಲಿ ವರ್ಮಾ, 2.ಸ್ಮೃತಿ ಮಂಧನ (ಉಪನಾಯಕಿ), 3.ಜೆಮಿಮಾ ರಾಡ್ರಿಗ್ಸ್, 4.ಹರ್ಮನ್’ಪ್ರೀತ್ ಕೌರ್, 5.ರಿಚಾ ಘೋಶ್ (ವಿಕೆಟ್ ಕೀಪರ್), 6.ದೀಪ್ತಿ ಶರ್ಮಾ, 7.ಪೂಜಾ ವಸ್ತ್ರಕಾರ್, 8.ಸ್ನೇಹ್ ರಾಣಾ, 9.ರಾಧಾ ಯಾದವ್, 10.ರೇಣುಕಾ ಸಿಂಗ್, 11.ರಾಜೇಶ್ವರಿ ಗಾಯಕ್ವಾಡ್

ಇದನ್ನೂ ಓದಿ : T20 World Cup : ಕೆ.ಎಲ್ ರಾಹುಲ್ ಏಕಾಂಗಿ ಹೋರಾಟ ವ್ಯರ್ಥ, 2ನೇ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಸೋಲು

ಇದನ್ನೂ ಓದಿ : Badminton Player PV Sindhu : ಸೀರೆಯುಟ್ಟು ರೀಲ್ಸ್ ಮಾಡಿದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು

INDW vs SLW Womens Asia Cup Final match

Comments are closed.