IPL 2022 Unsold Players : ಸ್ಟೀವ್ ಸ್ಮಿತ್, ಸುರೇಶ್ ರೈನಾ, ಸಾಹಾ, ಯಾದವ್‌ ಅನ್‌ಸೋಲ್ಡ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೆಗಾ ಹರಾಜು ( IPL Mega Auction 2022 ) ಆರಂಭಗೊಂಡಿದೆ. ಹಲವು ಆಟಗಾರರು ಈಗಾಗಲೇ ದಾಖಲೆಯ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಆದರೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಸ್ಟೀವ್‌ ಸ್ಮಿತ್‌, ಸುರೇಶ್‌ ರೈನಾ, ವೃದ್ದಿಮಾನ್‌ ಸಾಹ, ಉಮೇಶ್‌ ಯಾದವ್‌, ಮ್ಯಾಥ್ಯೂ ವೇಡ್‌, ಮೊಹಮ್ಮದ್‌ ನಬಿ ( IPL 2022 Unsold Players) ಮಾರಾಟವಾಗದೆ ಉಳಿದಿದ್ದಾರೆ. ಆದರೆ IPL 2022 ರ ಮೆಗಾ ಹರಾಜಿನಲ್ಲಿ ಅನಿರೀಕ್ಷಿತ ಎಂಬಂತೆ ಶಿಮ್ರಾನ್ ಹೆಟ್ಮೆಯರ್ (ಮೂಲ ಬೆಲೆ 1.5 ಕೋಟಿ) 8.5 ಕೋಟಿಗೆ ರಾಜಸ್ಥಾನ್ ರಾಯಲ್ಸ್‌ಗೆ ಮಾರಾಟವಾಗಿದ್ದಾರೆ.

ಸುರೇಶ್‌ ರೈನಾ ಹಾಗೂ ಸ್ಟೀವ್‌ ಸ್ಮಿತ್‌, ಮೊಹಮ್ಮದ್‌ ನಬಿ, ವೃದ್ದಿಮಾನ್‌ ಸಾಹ ಹಾಗೂ ಉಮೇಶ್‌ ಯಾದವ್‌ ಈ ಬಾರಿ ದಾಖಲೆಯ ಮೊತ್ತಕ್ಕೆ ಮಾರಾಟವಾಗುತ್ತಾರೆ ಅನ್ನೋ ನಿರೀಕ್ಷೆ ಯನ್ನು ಹೊಂದಲಾಗಿತ್ತು. ಆದರೆ ಯಾವ ಪ್ರಾಂಚೈಸಿಯೂ ಕೂಡ ಈ ಆಟಗಾರರ ಕಡೆಗೆ ಗಮನ ಹರಿಸಲೇ ಇಲ್ಲ. ಹೀಗಾಗಿಯೇ ಅನ್‌ ಸೋಲ್ಡ್‌ ಆಗಿ ಉಳಿದುಕೊಂಡಿದ್ದಾರೆ. ಆದರೆ ಇಂದು ಅನ್‌ಸೋಲ್ಡ್‌ ಆಗಿರುವ ಆಟಗಾರರು ಮತ್ತೊಮ್ಮೆ ಹರಾಜಿಗೆ ಬರುವ ಸಾಧ್ಯತೆಯಿದೆ. ತಂಡದಲ್ಲಿರುವ ಹಣಕಾಸಿನ ಲಭ್ಯತೆಯ ಆಧಾರದ ಮೇಲೆ ಹರಾಜಾಗುವ ಸಾಧ್ಯತೆಯಿದೆ.

ಇನ್ನು ಕಳೆದ ಬಾರಿ ಬೌಲಿಂಗ್‌ನಲ್ಲಿ ಮಿಂಚಿದ್ದ ಹರ್ಷಲ್ ಪಟೇಲ್ ಮತ್ತು ವನಿಂದು ಹಸರಂಗ. ಹರ್ಷಲ್ ಪಟೇಲ್ (ಮೂಲ ಬೆಲೆ 2 ಕೋಟಿ) 10.75 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮಾರಾಟವಾಗಿದ್ದಾರೆ. ಅದ್ರಲ್ಲೂ ಕಳೆದ ಬಾರಿ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನವನ್ನು ತೋರದಿದ್ದ ಶಿಮ್ರಾನ್ ಹೆಟ್ಮೆಯರ್ ದಾಖಲೆಯ ಮೊತ್ತಕ್ಕೆ ಮಾರಾಟ ವಾಗಿರುವುದು ಆಶ್ಚರ್ಯವನ್ನುಂಟು ಮಾಡಿದೆ.

ಸುಮಾರು 600 ಆಟಗಾರರನ್ನು ಹರಾಜು ಹಾಕಲಿರುವ ಐಪಿಎಲ್ ಹರಾಜು ಪ್ರಕ್ರಿಯೆ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಪ್ರತಿಭಾನ್ವಿತ ಆಟಗಾರ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15. 25 ಕೋಟಿಗೆ ತನ್ನದಾಗಿಸಿಕೊಂಡಿದೆ. ಎಡಗೈ ಬ್ಯಾಟರ್‌ ಆಗಿರುವ ಇಶಾನ್ ಕಿಶನ್ ಅಂಡರ್-19 ಪಂದ್ಯಗಳಲ್ಲಿ ಭಾರತವನ್ನು ಮುನ್ನೆಲೆಯಲ್ಲಿ ಇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆರ್​ಸಿಬಿಗೆ ದಿನೇಶ್ ಕಾರ್ತಿಕ್ ಬಲ ಬಂದಿದ್ದು ದಿನೇಶ್ ಕಾರ್ತಿಕ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 5.50 ಕೋಟಿಗೆ ಖರೀದಿಸಿದೆ. ಅಂದಹಾಗೆ ಇನ್ನೋರ್ವ ಪ್ರತಿಭಾನ್ವಿತ ಮತ್ತು ಪ್ರಸಿದ್ಧ ಆಟಗಾರ ಶ್ರೇಯಸ್ಸ್ ಅಯ್ಯರ್ 12.25 ಕೋಟಿ ಮೊತ್ತಕ್ಕೆ ಕೊಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ. ಆರ್​ಸಿಬಿ ಮೆಗಾ ಹರಾಜಿನಲ್ಲಿ 10.75 ಕೋಟಿ ರೂ. ನೀಡಿ ಶ್ರೀಲಂಕಾದ ವನಿಂದು ಹಸರಂಗ ಅವರನ್ನು ತನ್ನದಾಗಿಸಿಕೊಂಡಿದೆ.

60 ವರ್ಷದ ಹರಾಜುದಾರ ಹಗ್ ಎಡಮೆಡ್ಸ್ ಕುಸಿದು ಬಿದ್ದ ನಂತರ, ವೀಕ್ಷಕ ವಿವರಣೆಗಾರ ಚಾರು ಶರ್ಮಾರಿಗೆ ಹರಾಜು ಪ್ರಕ್ರಿಯೆಯನ್ನು ಮುನ್ನೆಡೆಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಬೆಳಗ್ಗೆ ಆರಂಭಗೊಂಡು ಹರಾಜು ಪ್ರಕ್ರಿಯೆಯ ಮಧ್ಯಭಾಗದಲ್ಲಿ, ಶ್ರೀಲಂಕಾದ ಬೌಲರ್ ಹಸರಂಗ ಅವರ ಬಿಡ್ ಕೂಗುವಾಗ ಹರಾಜುದಾರ ಹಗ್ ಎಡಮೆಡ್ಸ್ ವೇದಿಕೆಯಲ್ಲೇ ಕುಸಿದು ಬಿದ್ದರು. ಹೀಗಾಗಿ, ಮಧ್ಯಾಹ್ನ ಕೆಲಕಾಲ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಲಾಯಿತು. ಈತನಕ ನಡೆದಿರುವ ಹರಾಜು ಪ್ರಕ್ರಿಯೆಯಲ್ಲಿ 12.25 ಕೋಟಿ ಪಡೆದ ಶ್ರೇಯಸ್ಸ್ ಅಯ್ಯರ್ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರರಾಗಿದ್ದಾರೆ.

ಎರಡನೇ ಅತಿಹೆಚ್ಚು ಮೊತ್ತ ಪಡೆದ ಆಟಗಾರ ಹರ್ಷಲ್ ಪಟೇಲ್ 10.75 ಕೋಟಿ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದಾರೆ, ದಕ್ಷಿಣಾ ಆಫ್ರಿಕಾದ ಬೌಲರ್ ಕಗ್ಗಿಸೋ ರಬಾಡ ಅವರನ್ನು 9.25 ಕೋಟಿ ಕೊಟ್ಟು ಪಂಜಾಬ್ ಕಿಂಗ್ಸ್ ತನ್ನ ತಂಡಕ್ಕೆ ಸೇರ್ಪಡೆಗೊಳಿಸಿಕೊಂಡಿದೆ. ಕರ್ನಾಟಕದ ದೇವದತ್ತ ಪಡೀಕಲ್ 7. 75 ಕೋಟಿ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅತಿ ಕಡಿಮೆ ಮೊತ್ತಕ್ಕೆ ಮಾರಾಟವಾದವರು ರಾಬಿನ್ ಉತ್ತಪ್ಪ ಹಾಗೂ ಜಾಸನ್ ರಾಯ್. ತಲಾ ಎರಡು ಕೋಟಿಗೆ ಮೊತ್ತಕ್ಕೆ ಚೆನ್ನೈಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡದ ಪಾಲಾಗಿದ್ದಾರೆ.

ಇದನ್ನೂ ಓದಿ : ಯಾವ ತಂಡ ಸೇರಿದ್ದಾರೆ ನಿಮ್ಮ ನೆಚ್ಚಿನ ಆಟಗಾರರು?

ಇದನ್ನೂ ಓದಿ : 15. 25 ಕೋಟಿಗೆ ಇಶಾನ್ ಕಿಶನ್ ಮುಂಬೈ ಪಾಲು; ಆರ್​ಸಿಬಿಗೆ ದಿನೇಶ್ ಕಾರ್ತಿಕ್ ಬಲ

(‌ IPL 2022 Mega Auction Unsold Players Steve Smith Suresh Raina Unsold Players )

Comments are closed.