Anita Bhat INDIRA : A2 MUSICನಲ್ಲಿ ಬಿಡುಗಡೆಯಾಗಲಿದೆ ನಟಿ ಅನಿತಾ ಭಟ್‌ ನಿರ್ಮಾಣದ ಇಂದಿರಾ ಸಿನಿಮಾದ ಹಾಡು

ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯ ನಟಿ ಅನಿತಾ ಭಟ್‌ ನಿರ್ಮಾಪಕಿಯಾಗಿ ಸ್ಯಾಂಡಲ್‌ವುಡ್‌ ಎಂಟ್ರಿ ಕೊಡ್ತಿದ್ದಾರೆ. ಅನಿತಾ ಭಟ್ ನಟಿಸಿ, ನಿರ್ಮಾಣ ಮಾಡಿರುವ ಇಂದಿರಾ ಸಿನಿಮಾ (Anita Bhat INDIRA ) ತೆರೆಗೆ ಬರಲು ಸಿದ್ದವಾಗಿದ್ದು, ಚಿತ್ರದ ಹಾಡು ನಾಳೆ ಬಿಡುಗಡೆಯಾಗಲಿದೆ. A2 ಮ್ಯೂಸಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಹಾಡಿನ ಪ್ರೋಮೋ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದೆ. ಕಣ್ಣಾ ಮುಚ್ಚೆ ಗಾಡೆಗೂಡೆ ಅಂತಾ ಶುರುವಾಗುವ ಸಾಂಗ್‌ ಎಲ್ಲರಿಗೂ ಇಷ್ಟವಾಗುವಂತಿದೆ.

ಇಂದಿರಾ.. ನಿಜಕ್ಕೂ ಹೆಸರಿನಲ್ಲೇ ಕುತೂಹಲ ಸೃಷ್ಟಿಸುತ್ತಿರುವ ಸಿನಿಮಾ. ಇದೊಂದು ಪಕ್ಕಾ ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಚಿತ್ರದ ಟೈಟಲ್‌ ಪೋಸ್ಟರ್ ಅನ್ನು ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರು ಬಿಡುಗಡೆ ಮಾಡಿದ್ದು, ಪೋಸ್ಟರ್‌ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದ ಅಪ್ಪು, ಅನಿತಾ ಭಟ್‌ ಅವರ ತಂಡಕ್ಕೆ ಶುಭ ಹಾರೈಸಿದ್ದರು.

ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಇಂದಿರಾ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಅನಿತಾ ಭಟ್ ಹಾಗೂ ಸಹ ನಿರ್ಮಾಪಕರಾಗಿ ಪ್ರಜ್ಞಾನಂದ ಸೊರಬ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಟನೆಯ ಜೊತೆಗೆ ಸಿನಿಮಾ ನಿರ್ಮಾಣದತ್ತ ಹೆಜ್ಜೆ ಇಟ್ಟಿರುವ ಅನಿತಾ ಭಟ್‌ ತಮ್ಮದೇ ಕ್ರಿಯೇಷನ್ಸ್‌ ಮೂಲಕ ಹೊಸ ಹೊಸ ಪ್ರತಿಭೆಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಚಂದನವನಕ್ಕೆ ವಿಭಿನ್ನ ಸಿನಿಮಾಗಳನ್ನು ನೀಡಬೇಕು ಅನ್ನೋ ಉದ್ದೇಶದಿಂದಲೇ ಇಂದಿರಾ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಬಿಗ್‌ ಬಾಸ್‌ ಖ್ಯಾತಿಯ ರೆಹಮಾನ್‌ ಹಾಸನ್‌, ಚಕ್ರವರ್ತಿ ಚಂದ್ರಚೂಡ್‌, ನೀತು ಹಾಗೂ ಶಫಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವ ಅನಿತಾ ಭಟ್‌ ಇಂದಿರಾ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಗ್ಯಾಮರಸ್‌ ಪಾತ್ರದಿಂದ ಹಳ್ಳಿ ಹುಡುಗಿ ವರೆಗಿನ ಪಾತ್ರದಲ್ಲಿ ಮಿಂಚು ಹರಿಸಿರುವ ಅನಿತಾ ಭಟ್‌ ಸದ್ಯ ಚಂದನವನದ ಬಹುಬೇಡಿಕೆಯ ನಟಿ. ಇದೀಗ ಇಂದಿರಾ ಸಿನಿಮಾದಲ್ಲಿ ಅಂಧೆಯೋರ್ವಳ ಬದುಕನ್ನು ಸಿನಿಮಾದ ಮೂಲಕ ಹೇಳು ಹೊರಟಿದ್ದು, ಇಂದಿರಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

ಇಂದಿರಾ ಸಿನಿಮಾಕ್ಕೆ ರಿಷಿಕೇಶ್ ನಿರ್ದೇಶನದ ಜೊತೆಗೆ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಲೋಹಿತ್‌ ಎಲ್.ನಾಯಕ್‌ ಸಂಗೀತದ ಜೊತೆಗೆ ಅಭಿಷೇಕ್ ಮಠದ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ :‌ ಶಿವಕಾಶಿ: ಪಟಾಕಿ, ಬೆಂಕಿ ಪೆಟ್ಟಿಗೆ, ಪ್ರಿಂಟಿಂಗ್‌ಗೆ ಹೆಸರುವಾಸಿ ಕುಟ್ಟಿ ಜಪಾನ್ ಜನರ ದಾರುಣ ಕಥೆ ಇಲ್ಲಿದೆ ನೋಡಿ

ಇದನ್ನೂ ಓದಿ : ಭಾರತದ “ನಯಾಗರ ಜಲಪಾತ” ಆದಿರಪ್ಪಳ್ಳಿ; ಬಾಹುಬಲಿ ಸಿನಿಮಾದಲ್ಲಿ ಇರೋದು ಇದೇ ಜಲಪಾತ!

( Actress Anita Bhat Indira Movie Songs Release in A2 MUSIC)

Comments are closed.