Ajinkya Rahane : ಧೋನಿ ಗರಡಿಯಲ್ಲಿ ಅರಳಿದ ರಹಾನೆ 2.0; ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿದ “ಟೆಸ್ಟ್ ಆಟಗಾರ”

ಬೆಂಗಳೂರು : ಒಬ್ಬ ಒಳ್ಳೆಯ ಟೆಸ್ಟ್ ಆಟಗಾರ ಟಿ20 ಕ್ರಿಕೆಟ್’ನಲ್ಲೂ ಅದ್ಭುತವಾಗಿ ಆಡಬಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ “ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಖ್ಯಾತಿಯ ರಾಹುಲ್ ದ್ರಾವಿಡ್. ದ್ರಾವಿಡ್ ನಂತರ ಈ ಮಾತಿಗೆ ಒಳ್ಳೆಯ ಉದಾಹರಣೆ ಚೆನ್ನೈ ಸೂಪರ್ ಕಿಂಗ್ಸ್ (IPL-2023 – Ajinkya Rahane) ಪರ ಆಡುತ್ತಿರುವ ಮುಂಬೈಕರ್ ಅಜಿಂಕ್ಯ ರಹಾನೆ (Ajinkya Rahane). ಭಾರತ ಟೆಸ್ಟ್ ತಂಡದಿಂದ ಹೊರ ಬಿದ್ದ ನಂತರ ಕಳೆದೇ ಹೋಗಿದ್ದ ಅಜಿಂಕ್ಯ ರಹಾನೆ ಐಪಿಎಲ್ ಕಂಬ್ಯಾಕ್’ನಲ್ಲಿ ಅಕ್ಷರಶಃ ಅಬ್ಬರಿಸುತ್ತಿದ್ದಾರೆ. ರಹಾನೆ ಕಥೆ ಮುಗಿದೇ ಹೋಯ್ತು ಅಂದವರಿಗೆ ಆಟದಿಂದಲೇ ಉತ್ತರ ಕೊಡುತ್ತಿದ್ದಾರೆ.

ಕಳೆದ ಐಪಿಎಲ್ ಹರಾಜಿನಲ್ಲಿ ಅಜಿಂಕ್ಯ ರಹಾನೆಯವರನ್ನು ಚೆನ್ನೈ ಫ್ರಾಂಚೈಸಿ ಮೂಲ ಬೆಲೆ 50 ಲಕ್ಷ ರೂ.ಗಳಿಗೆ ಖರೀದಿಸಿತ್ತು. ರಹಾನೆಯನ್ನು ಸಿಎಸ್’ಕೆ ಫ್ರಾಂಚೈಸಿ ಖರೀದಿಸಿದಾಗ “ವಯಸ್ಸಾಗಿರುವ ಟೆಸ್ಟ್ ಆಟಗಾರ”ನನ್ನು ಖರೀದಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿತ್ತು. ಇದೀಗ ಅದೇ ವಯಸ್ಸಾದ ಟೆಸ್ಟ್ ಆಟಗಾರ ಟಿ20 ಕ್ರಿಕೆಟ್ ಅಂದ್ರೆ ಏನು ಎಂಬುದನ್ನು ಯುವಕರಿಗೆ ತೋರಿಸಿಕೊಡುತ್ತಿದ್ದಾರೆ. ಧೋನಿ ಗರಡಿ ಸೇರಿದ ನಂತರ ರಹಾನೆ ಅವರ ಆಟದ ವೈಖರಿಯೇ ಬದಲಾಗಿ ಹೋಗಿದೆ.

ಭಾನುವಾರ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಿಡಿಲಬ್ಬರದ ಆಟವಾಡಿದ್ದ ರಹಾನೆ, ಕೇವಲ 29 ಎಸೆತಗಳಲ್ಲಿ ಅಜೇಯ 71 ರನ್ ಸಿಡಿಸಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲೂ ಅಬ್ಬರಿಸಿದ್ದ ರಹಾನೆ 27 ಎಸೆತಗಳಲ್ಲಿ 61 ರನ್ ಚಚ್ಚಿದ್ದರು.

ಐಪಿಎಲ್-2023ರಲ್ಲಿ ಅಜಿಂಕ್ಯ ರಹಾನೆ ಸಾಧನೆ :
61 (27) Vs ಮುಂಬೈ ಇಂಡಿಯನ್ಸ್, (ವಾಂಖೆಡೆ ಕ್ರೀಡಾಂಗಣ, ಮುಂಬೈ)
31 (19) Vs ರಾಜಸ್ಥಾನ್ ರಾಯಲ್ಸ್ (ಎಂ.ಎ ಚಿದಂಬರಂ ಕ್ರೀಡಾಂಗಣ, ಚೆನ್ನೈ)
37 (20) Vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)
71* (29) Vs ಕೋಲ್ಕತಾ ನೈಟ್ ರೈಡರ್ಸ್ (ಈಡನ್ ಗಾರ್ಡನ್ಸ್ ಮೈದಾನ, ಕೋಲ್ಕತಾ)

ಇದನ್ನೂ ಓದಿ : April 23 Phobia for Virat Kohli : ಕಿಂಗ್ ಕೊಹ್ಲಿಗೆ “ಏಪ್ರಿಲ್ 23” ಫೋಬಿಯಾ : ಮೂರು ವರ್ಷ, ಮೂರು ಗೋಲ್ಡನ್ ಡಕ್

ಇದನ್ನೂ ಓದಿ : MS Dhoni: ಐಪಿಎಲ್‌ನಲ್ಲಿ “ಎಲ್ಲಾ” ಮೈದಾನಗಳು “ಯೆಲ್ಲೋ” ಆಗಿ ಬದಲಾಗುತ್ತಿರುವುದನ್ನು ಕಂಡಿರಾ..?

ಈ ಬಾರಿಯ ಐಪಿಎಲ್’ನಲ್ಲಿ 5 ಪಂದ್ಯಗಳನ್ನಾಡಿರುವ ಅಜಿಂಕ್ಯ ರಹಾನೆ ಎದುರಿಸಿರುವ 105 ಎಸೆತಗಳಲ್ಲಿ 209 ರನ್ ಬಾರಿಸಿದ್ದಾರೆ.
ಪಂದ್ಯ: 05, ರನ್: 209, ಸರಾಸರಿ: 52.25, ಸ್ಟ್ರೈಕ್’ರೇಟ್: 199.04, ಅರ್ಧಶತಕ: 02

IPL-2023 – Ajinkya Rahane : Rahane 2.0 blossomed in Dhoni Garadi; “Test player” who shocked the cricket world

Comments are closed.