ಕೇಲ್ ಮೇಯರ್ಸ್, ಮಾರ್ಕ್‌ ವುಡ್‌ ಆರ್ಭಟ : ಡೆಲ್ಲಿ ಕ್ಯಾಪಿಟಲ್ಸ್ ಬಗ್ಗು ಬಡಿದ ಲಕ್ನೋ ಸೂಪರ್‌ ಜೈಂಟ್ಸ್‌

ಲಕ್ನೋ : ಕೇಲ್‌ ಮೇಯರ್ಸ್‌ (kyle mayers) ಭರ್ಜರಿ ಬ್ಯಾಟಿಂಗ್‌ ಹಾಗೂ ಮಾರ್ಕ್ ವುಡ್‌ ಮಾರಕ ಬೌಲಿಂಗ್‌ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮೊದಲ ಪಂದ್ಯದಲ್ಲಿಯೇ ಸೋಲಿಗೆ ಶರಣಾಗಿದೆ. ನಾಯಕ ಕೆ.ಎಲ್.ರಾಹುಲ್‌ ವೈಫಲ್ಯದ ನಡುವಲ್ಲೇ ಲಕ್ನೋ ಸೂಪರ್‌ ಜೈಂಟ್ಸ್‌ (lucknow super giants) ತನ್ನ ಎರಡನೇ ಋತುವಿನಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಕೆ.ಎಲ್‌.ರಾಹುಲ್‌ (KL Rahul) ನಾಯಕತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 193 ರನ್‌ ಸಿಡಿಸಿತ್ತು. 194 ರನ್‌ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿ ಸೋಲೊಪ್ಪಿಕೊಂಡಿದೆ.

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್(Lucknow super giants) ತಂಡದ ಪರವಾಗಿ ಕೇಲ್ ಮೇಯರ್ಸ್ ಸ್ಫೋಟಕ ಆಟದ ಪ್ರದರ್ಶನ ನೀಡಿದ್ರು. ಆದರೆ ನಾಯಕ ಕೆ.ಎಲ್.ರಾಹುಲ್‌ ಕೆಟ್ಟ ಹೊಡೆತಕ್ಕೆ ಮನ ಮಾಡಿ ವಿಕೆಟ್‌ ಒಪ್ಪಿಸಿದ್ದಾರೆ. ಆದರೆ ದೀಪಕ್‌ ಹೂಡಾಗೆ ಜೊತೆಯಾದ ಕೇಲ್‌ ಮೇಯರ್ಸ್‌ ಬರೋಬ್ಬರಿ 79 ರನ್‌ ಗಳ ಜೊತೆಯಾಟ ಆಡಿದ್ದಾರೆ. ಕೇಲ್‌ ಮೇಯರ್ಸ್‌ (kyle mayers) 38 ಎಸೆತಗಳಲ್ಲಿ 73 ರನ್ (7 ಸಿಕ್ಸರ್‌, 3 ಬೌಂಡರಿ) ಸಿಡಿಸುವ ಮೂಲಕ ಲಕ್ನೋ ತಂಡಕ್ಕೆ ಉತ್ತಮ ಆರಂಭ ನೀಡಿದ್ರು. ದೀಪಕ್‌ ಹೂಡಾ 17 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ರೆ, ಕೊನೆಯ ಹಂತದಲ್ಲಿ ನಿಕೋಲಸ್‌ ಪೂರನ್‌ 36 ರನ್‌ಗಳ ಅಮೂಲ್ಯ ಕೊಡುಗೆ ನೀಡಿದ್ರೆ, ಯುವ ಆಟಗಾರ ಆಯುಷ್‌ ಬದೋನಿ ಸ್ಪೋಟ ಆಟದ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಅಂತಿಮವಾಗಿ 193ರನ್‌ ಗಳಿಸಿದೆ. ಡೆಲ್ಲಿ ಪರ ಖಲೀಲ್‌ ಅಹ್ಮದ್‌, ಚೇತನ್‌ ಸಕಾರಿಯಾ ತಲಾ 2 ವಿಕೆಟ್‌ ಪಡೆದರೆ, ಅಕ್ಷರ್‌ ಪಟೇಲ್‌, ಕುಲ್‌ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ. ಇದನ್ನೂ ಓದಿ : IPL Injury : ಐಪಿಎಲ್ ಫ್ರಾಂಚೈಸಿಗಳಿಗೆ “ಇಂಜ್ಯುರಿ” ಶಾಕ್, ಯಾವೆಲ್ಲಾ ತಂಡಗಳಿಗೆ ತಟ್ಟಿದೆ ಗಾಯದ ಬಿಸಿ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಲಕ್ನೋ ಸೂಪರ್‌ ಜೈಂಟ್ಸ್‌ ನೀಡಿರುವ ಸವಾಲಿನ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ನಾಯಕ ಡೇವಿಡ್‌ ವಾರ್ನರ್‌ ಭರ್ಜರಿ ಬ್ಯಾಟಿಂಗ್‌ ನಡೆಸಿದ್ದಾರೆ. ಡೇವಿಡ್‌ ವಾರ್ನರ್‌ಗೆ ರಿಲೀ ರೋಸೌವ್‌ ಸಾಥ್‌ ನೀಡಿದ್ರೆ ಉಳಿದ ಯಾವುದೇ ಆಟಗಾರರು ಕೂಡ ಡೆಲ್ಲಿಗೆ ನೆರವಾಗಲೇ ಇಲ್ಲ.ಡೇವಿಡ್‌ ವಾರ್ನರ್‌ 48 ಎಸೆತಗಳಲ್ಲಿ 56 ರನ್‌ (7 ಬೌಂಡರಿ), ರಿಲೀ ರೋಸೌವ್ 20 ಎಸೆತಗಳಲ್ಲಿ 30 ಗಳಿಸಿದ್ರು. ಆದರೆ ಆರಂಭಿಕ ಪೃಥ್ವಿ ಶಾ 12 , ಸರ್ಫರಾಜ್‌ ಖಾನ್‌ 4 ರನ್‌, ರೋಮ್ನನ್‌ ಪೋವೆಲ್‌ 1 ರನ್‌, ಅಮಮಾನ್‌ ಹಕೀಮ್‌ ಖಾನ್‌ 4 ರನ್‌ ಗಳಿಸಿ ನಿರಾಸೆ ಮೂಡಿಸಿದ್ದಾರೆ. ಆಸ್ಟ್ರೇಲಿಯಾದ ಖ್ಯಾತ ಆಲ್‌ರೌಂಡರ್‌ ಮಿಚೆಲ್‌ ಮಾರ್ಶ್‌ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಸ್ಪೋಟಕ ಆಟವಾಡಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಬೌಲರ್‌ಗಳು ಮಾರಕ ದಾಳಿ ನಡೆಸಿದ್ದಾರೆ. ಅದ್ರಲೂ ಮಾರ್ಕ್‌ ವುಡ್‌ ದಾಳಿಗೆ ಡೆಲ್ಲಿ ಸೂಪರ್‌ ಕಿಂಗ್ಸ್‌ ತಂಡ ತತ್ತರಿಸಿ ಹೋಗಿದೆ. ಮಾರ್ಕ್‌ ವುಡ್‌ ಐದು ವಿಕೆಟ್‌ ಗಳಿಸಿದ್ರೆ, ಆವೇಶ್‌ ಖಾನ್‌ ಹಾಗೂ ರವಿ ಬಿಷ್ಙೋಯಿ ತಲಾ ಎರಡು ವಿಕೆಟ್‌ ಪಡೆಯುವ ಮೂಲಕ ಲಕ್ನೋ ತಂಡಕ್ಕೆ ನೆರವಾಗಿದ್ದಾರೆ. ಇದನ್ನೂ ಓದಿ : PBKS vs KKR IPL 2023 : ಕೋಲ್ಕತ್ತಾ ನೈಟ್‌ ರೈಡರ್ಸ್‌ ಗೆಲುವು ಕಸಿದ ಮಳೆ, ಪಂಜಾಬ್‌ ಕಿಂಗ್ಸ್‌ ಗೆ ಗೆಲುವು

Comments are closed.