IPL 2023 rule change : ಐಪಿಎಲ್ ರೂಲ್ಸ್‌ನಲ್ಲಿ ದೊಡ್ಡ ಬದಲಾವಣೆ; ಟಾಸ್ ಬಳಿಕ ಪ್ಲೇಯಿಂಗ್ XI ಬದಲಿಸಲು ಅವಕಾಶ

ಬೆಂಗಳೂರು : ಮಿಲಿಯನ್ ಡಾಲರ್ ಐಪಿಎಲ್ ಟೂರ್ನಿ (IPL 2023 rule change) ಆರಂಭಕ್ಕಿನ್ನು ಬೆರಳೆಣಿಕೆಯ ದಿನಗಳಷ್ಟೇ ಬಾಕಿ. ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಲೀಗ್ ಐಪಿಎಲ್ ಟೂರ್ನಿ (IPL 2023) ಮಾರ್ಚ್ 31ರಂದು ಆರಂಭವಾಗಲಿದೆ. ಮಾರ್ಚ್ 31ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ (Gujarat Titans) ತಂಡ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಎದುರಿಸಲಿದೆ.

ಈ ಬಾರಿಯ ಐಪಿಎಲ್’ನಲ್ಲಿ ಹೊಸತೊಂದು ನಿಯಮವನ್ನು ಜಾರಿಗೆ ತರಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ (IPL 2023 rule change). ಟಾಸ್ ನಂತರೂ ಪ್ಲೇಯಿಂಗ್ XI ಬದಲಿಸಲು ಈ ಬಾರಿಯ ಐಪಿಎಲ್’ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಲ್ಲಿವರೆಗೆ ರೂಲ್ಸ್ ಹೇಗಿತ್ತು ಅಂದ್ರೆ, ಟಾಸ್’ಗಿಂತ ಮುನ್ನ ಎರಡೂ ತಂಡಗಳ ನಾಯಕರು ತಮ್ಮ ತಮ್ಮ ಪ್ಲೇಯಿಂಗ್ XI ಪಟ್ಟಿಯನ್ನು ಪರಸ್ಪರ ಒಬ್ಬರಿಗೊಬ್ಬರು ನೀಡಬೇಕಿತ್ತು. ಆದರೆ ಈ ಬಾರಿಯ ಐಪಿಎಲ್’ನಲ್ಲಿ ಟಾಸ್ ನಂತರವೂ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡುವ ನಿಯಮವನ್ನು ಜಾರಿಗೆ ತರಲಾಗಿದೆ.

ಐಪಿಎಲ್ ನಿಯಮದಲ್ಲಿ ಬದಲಾವಣೆ ಮಾಡಿರುವುದರಿಂದ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡುವ ವೇಳೆ ತಮ್ಮ ತಮ್ಮ ಬೆಸ್ಟ್ XI ಅನ್ನು ಆಯ್ಕೆ ಮಾಡಲು ಮತ್ತು ಇಂಪ್ಯಾಕ್ಟ್ ಆಟಗಾರರನ್ನು ಆಯ್ಕೆ ಮಾಡಲು ತಂಡಗಳಿಗೆ ಅವಕಾಶ ಸಿಗಲಿದೆ. ಈ ನಿಯವನ್ನು ಇತ್ತೀಚೆಗಷ್ಟೇ ನಡೆದ ದಕ್ಷಿಣ ಆಫ್ರಿಕಾ ಟಿ20 ಲೀಗ್’ನಲ್ಲಿ ಮೊದಲ ಬಾರಿ ಜಾರಿಗೆ ತರಲಾಯಿತು. ಇದೀಗ ಐಪಿಎಲ್ ಟೂರ್ನಿಯಲ್ಲೂ ಈ ನಿಯಮವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

ಇದನ್ನೂ ಓದಿ : Dehli Capitals : ಐಪಿಎಲ್‌ನಲ್ಲಿ ಇಂಗ್ಲೆಂಡ್ ಪರ ಆಡಲಿದ್ದಾರೆ ವಾರ್ನರ್, ಪೃಥ್ವಿ ಶಾ, ಅಕ್ಷರ್ ಪಟೇಲ್

ಇದನ್ನೂ ಓದಿ : IND v AUS 3rd ODI: ಹಾರ್ದಿಕ್‌ ಪಾಂಡ್ಯ ವಿರೋಚಿತ ಆಟ ವ್ಯರ್ಥ, ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ

ಇದನ್ನೂ ಓದಿ : ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಭರ್ಜರಿ ಬೌಲಿಂಗ್‌ : ಭಾರತಕ್ಕೆ 270 ರನ್‌ ಸವಾಲು

ಐಪಿಎಲ್ ಟೂರ್ನಿ 4 ವರ್ಷಗಳ ನಂತರ ಇದೇ ಮೊದಲ ಬಾರಿ ಭಾರತದ ಪ್ರಮುಖ ನಗರಗಳಲ್ಲಿ ನಡೆಯುತ್ತಿದೆ. ಕಳೆದ ಬಾರಿಯ ಟೂರ್ನಿ ಮುಂಬೈ ಮತ್ತು ಅಹ್ಮದಾಬಾದ್’ನಲ್ಲಿ ನಡೆದಿತ್ತು. ಆದರೆ ಈ ಬಾರಿಯ ಪಂದ್ಯಗಳು, ಮುಂಬೈ, ಅಹ್ಮದಾಬಾದ್, ದೆಹಲಿ, ಲಕ್ನೋ, ಬೆಂಗಳೂರು, ಜೈಪುರ, ಚೆನ್ನೈ, ಹೈದರಾಬಾದ್, ಕೋಲ್ಕೊತಾ ಮತ್ತು ಮೊಹಾಲಿಯಲ್ಲಿ ನಡೆಯಲಿವೆ.

IPL 2023 rule change : Big change in IPL Rules; Allowed to change the playing XI after the toss

Comments are closed.