Tata Motors Price Hike: ಏಪ್ರಿಲ್ 1 ರಿಂದ ಟಾಟಾ ವಾಹನಗಳ ಬೆಲೆ ಏರಿಕೆ

ಭಾರತೀಯ ವಾಹನ ತಯಾರಿಕಾ ಸಂಸ್ಥೆ ಟಾಟಾ ಮೋಟಾರ್ಸ್ (Tata Motors) ತನ್ನ ವಾಣಿಜ್ಯ ವಾಹನಗಳ (Commercial Vehicles) ಬೆಲೆಯಲ್ಲಿ ಹೆಚ್ಚಳವಾಗುವುದನ್ನು ತಿಳಿಸಿದೆ. ಈ ಹೆಚ್ಚಳವು 5% ವರೆಗೆ ಇರಬಹುದು. ಬೆಲೆ ಏರಿಕೆಯು (Tata Motors Price Hike) ಏಪ್ರಿಲ್ 1, 2023 ರಿಂದ ಅನ್ವಯವಾಗಲಿದೆ. BS6 ಫೇಸ್‌ 2 ಮಾನದಂಡಗಳು ಜಾರಿಯಲ್ಲಿವೆ, ಈ ಕಾರಣದಿಂದಾಗಿ ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದೆ.

ಹೊಸ RDE ಮಾನದಂಡಗಳೊಂದಿಗೆ ಉತ್ತಮ ತಂತ್ರಜ್ಞಾನ ಲಭ್ಯವಾಗಲಿದೆ:
ಕಂಪನಿಯು ತನ್ನ ಪೋರ್ಟ್‌ಫೋಲಿಯೊದಲ್ಲಿರುವ ಎಲ್ಲಾ ವಾಹನಗಳನ್ನು ಹೊಸ ನಿಯಮಗಳ ಪ್ರಕಾರ ಪರಿವರ್ತಿಸುವ ಪ್ರಕ್ರಿಯೆಯಲ್ಲಿದೆ. ಇದರಿಂದಾಗಿ ಗ್ರಾಹಕರು ಮತ್ತು ವಾಹನ ಮಾಲೀಕರು ಸ್ವಚ್ಛ, ಅಚ್ಚುಕಟ್ಟಾಗಿ ಮತ್ತು ಉತ್ತಮ ತಂತ್ರಜ್ಞಾನವನ್ನು ನಿರೀಕ್ಷಿಸಬಹುದು.

ಎಲ್ಲಾ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಳ:
ಟಾಟಾ ಮೋಟಾರ್ಸ್ ನೀಡಿರುವ ಮಾಹಿತಿಯ ಪ್ರಕಾರ, ಬೆಲೆ ಏರಿಕೆಯು ಕಂಪನಿಯ ಎಲ್ಲಾ ವಾಣಿಜ್ಯ ವಾಹನಗಳಿಗೆ ಅನ್ವಯಿಸುತ್ತವೆ. ಇದು ಮಾದರಿ ಮತ್ತು ರೂಪಾಂತರದ ಪ್ರಕಾರ ಬದಲಾಗುತ್ತದೆ. ಮತ್ತೊಂದೆಡೆ, BS6 ಫೇಸ್‌ 2 ರ ಅಳವಡಿಕೆಯಿಂದಾಗಿ, ಎಲ್ಲಾ ವಾಹನ ತಯಾರಕರು ತಮ್ಮ ವಾಹನಗಳನ್ನು RDE ನಾರ್ಮ್ಸ್ ಮತ್ತು E20 ಕಂಪ್ಲೈಂಟ್ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ವಾಹನಗಳ ಬೆಲೆ ಏರಿಕೆಯಾಗುವುದು ಸಹಜವಾಗಿದೆ.

ಇದನ್ನೂ ಓದಿ : SBI Recruitment 2023 : ರೂ 40,000 ವರೆಗೆ ಸಂಬಳ : 877 ಹುದ್ದೆಗಳಿಗೆ ಅರ್ಜಿ ಆಹ್ವಾನ

BS6 ನಾರ್ಮ್ಸ್‌ ಫೇಸ್‌ 2:
ಏಪ್ರಿಲ್‌ 1 ರಿಂದ BS6 ನಾರ್ಮ್ಸ್‌ ಫೇಸ್‌ 2 ಜಾರಿಗೆ ಬರಲಿದೆ. ಈ ಹಂತವು ರಿಯಲ್‌ ಡ್ರೈವಿಂಗ್‌ ಎಮಿಷನ್‌ (RDE) ಪರೀಕ್ಷೆಯ ಮೇಲೆ ಕೇಂದ್ರೀಕರಿಸುತ್ತದೆ. ಇದು ರಿಯಲ್‌–ವಲ್ಡ್‌ ಕಂಡೀಷನ್‌ ಪರಿಸ್ಥಿತಿಗಳಲ್ಲಿ ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ ವಾಹನದಿಂದ ಹೊರಸೂಸುವ ಮಾಲಿನ್ಯಕಾರಕಗಳನ್ನು ಅಳೆಯುವ ಪರೀಕ್ಷೆಯಾಗಿದೆ.

ಇದನ್ನೂ ಓದಿ : US Tourist Visa : ಈಗ ಅಮೇರಿಕಾದಲ್ಲಿ ಪ್ರವಾಸಿ ವೀಸಾ ಮತ್ತು ಬಿಸಿನೆಸ್‌ ವೀಸಾದಲ್ಲಿ ಉದ್ಯೋಗ ಹುಡುಕಬಹುದು; ಅನುಮತಿ ನೀಡಿದ USCIS

ಇದನ್ನೂ ಓದಿ : NRI ಭಾರತದಲ್ಲಿ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದೇ? UIDAI ಮಾರ್ಗಸೂಚಿ ಏನು ಹೇಳುತ್ತೆ ಗೊತ್ತಾ ?

(Tata Motors announce price hike on its commercial vehicle from April 1st)

Comments are closed.