IPL 2024 : ಇಂಡಿಯನ್ ಪ್ರೀಮಿಯರ್ ಲೀಗ್ (Indian Premier Leauge)ನಲ್ಲೀಗ ಬದಲಾವಣೆಯ ಪರ್ವ ಆರಂಭಗೊಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ (Gowtham Gambir) ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ಸೇರುತ್ತಿದ್ದಂತೆಯೇ ಇತ್ತ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಲಕ್ನೋ ಸೂಪರ್‌ಜೈಂಟ್ಸ್ (Lucknow Super Giants) ತಂಡದ ಮೆಂಟರ್ ಆಗಲಿದ್ದಾರೆಂಬ ಮಾತುಗಳು ಕೇಳಿಬಂದಿದೆ.

2021 ರ ಟಿ20 ವಿಶ್ವಕಪ್ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್ ಆಗಿ ನೇಮಕವಾಗಿದ್ದ ರಾಹುಲ್ ದ್ರಾವಿಡ್ ಏಕದಿನ ವಿಶ್ವಕಪ್ ಬೆನ್ನಲ್ಲೇ ಕೋಚ್ ಹುದ್ದೆ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ರಾಹುಲ್ ದ್ರಾವಿಡ್ ಬದಲು ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾದ ಕೋಚ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ರಾಹುಲ್ ದ್ರಾವಿಡ್ ಕೋಚ್ ಹುದ್ದೆಯ ಕುರಿತು ಬಿಸಿಸಿಐ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಲಕ್ನೋ ಸೂಪರ್ ಜೈಂಟ್ಸ್ ತಂಡ 2022 ಮತ್ತು 2023 ನೇ ಸಾಲಿನಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು, ಎಲಿಮಿನೇಟರ್ ಪಂದ್ಯದಲ್ಲಿ ಸೋತು ಪಂದ್ಯಾವಳಿಯಿಂದಲೇ ಹೊರ ನಡೆದಿತ್ತು. 2022ನೇ ಸಾಲಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೆಎಲ್ ರಾಹುಲ್ ಮುನ್ನೆಡೆಸಿದ್ದರು.
ಇದನ್ನೂ ಓದಿ : ರೋಹಿತ್ ಶರ್ಮಾಗೆ ಕೊನೆಯ ಐಸಿಸಿ ಸರಣಿ ಆಗುತ್ತಾ ವಿಶ್ವಕಪ್ ಫೈನಲ್ ? ನಿವೃತ್ತಿ ಪಡೆಯುತ್ತಾರಾ ರೋಹಿತ್ ಶರ್ಮಾ
ಲಕ್ನೋ ತಂಡದ ನಾಯಕನಾಗಿದ್ದ ಕೆಎಲ್ ರಾಹುಲ್ ಅನಾರೋಗ್ಯದ ಹಿನ್ನೆಲೆಯಲ್ಲಿ ಪಂದ್ಯಾವಳಿಯಿಂದ ಅರ್ಧದಲ್ಲಿಯೇ ಹೊರ ನಡೆದಿದ್ದರು. ಹೀಗಾಗಿ ಕೃನಾಲ್ ಪಾಂಡ್ಯ ಲಕ್ನೋ ತಂಡವನ್ನು ಮುನ್ನೆಡೆಸಿದ್ದರು. ಆದರೂ ಕೂಡ ಲಕ್ನೋ ತಂಡ ಎಲಿಮಿನೇಟರ್ ತಂಡದ್ಯದಲ್ಲಿಯೇ ಮುಗ್ಗರಿಸಿತ್ತು. ತಂಡದ ಕೋಚ್ ಆಗಿದ್ದ ಆಂಡಿ ಪ್ಲವರ್ ಈಗಾಗಲೇ ಆರ್‌ಸಿಬಿ ಪಾಳಯ ಸೇರಿಕೊಂಡಿದ್ದಾರೆ.
ಇನ್ನು ಲಕ್ನೋ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಮರಳಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿ ಕೊಂಡಿದ್ದಾರೆ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅವರ ಹೆಸರು ಕೇಳಿಬಂದಿದೆ. ಈ ಹಿಂದೆ ರಾಜಸ್ಥಾನ ರಾಯಲ್ ತಂಡದ ಮೆಂಟರ್ ಆಗಿ ರಾಹುಲ್ ದ್ರಾವಿಡ್ ಕೆಲಸ ಮಾಡಿದ್ದರು.
ಇದನ್ನೂ ಓದಿ : 11 ಪಂದ್ಯ 3 ಶತಕ, 765 ರನ್ : ವಿಶ್ವಕಪ್ ಸೋತರು ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ
ಟೀಂ ಇಂಡಿಯಾದ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರಿಯೋದಿಲ್ಲ ಅನ್ನೋ ಸುದ್ದಿ ಹರಿದಾಡುತ್ತಿದ್ದಂತೆಯೇ ರಾಜಸ್ತಾನ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ರಾಹುಲ್ ದ್ರಾವಿಡ್ ಅವರಿಗೆ ಆಫರ್ ನೀಡುತ್ತಿವೆ. ಅದ್ರಲ್ಲೂ ಲಕ್ನೋ ತಂಡ ಅತೀ ಹೆಚ್ಚಿನ ಸಂಭಾವನೆ ನೀಡುವ ಆಫರ್ ನೀಡಿದೆಯಂತೆ.

ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕನ್ನಡಿಗ ಕೆಎಲ್ ರಾಹುಲ್ ಮುನ್ನೆಡೆಸುವ ಸಾಧ್ಯತೆಯಿದೆ. ಜೊತೆಗೆ ಕೆಎಲ್ ರಾಹುಲ್ ಅವರು ದ್ರಾವಿಡ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜೊತೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಅತೀ ಹೆಚ್ಚಿನ ಬೆಲೆ ನೀಡಿ ಐಪಿಎಲ್ ತಂಡವನ್ನು ಖರೀದಿ ಮಾಡಿತ್ತು. ಮುಂದಿನ ಬಾರಿಯ ಐಪಿಎಲ್ ಟ್ರೋಫಿ ಜಯಿಸುವ ಗುರಿ ಹೊಂದಿದ್ದು, ರಾಹುಲ್ ಗೆ ಗಾಳ ಹಾಕಿದೆ.
ಇದನ್ನೂ ಓದಿ : IPL 2024 Auction : ಐಪಿಎಲ್ ಹರಾಜು, ಖ್ಯಾತ ಆಟಗಾರನನ್ನು ಕೈ ಬಿಟ್ಟ RCB
ಕೆಎಲ್ ರಾಹುಲ್, ದೇವದತ್ತ ಪಡಿಕ್ಕಲ್, ಕ್ವಿಂಟನ್ ಡಿಕಾಕ್, ಆಯುಷ್ ಬದೋನಿ, ಕೆ.ಗೌತಮ್, ಮಾರ್ಕಸ್ ಸ್ಟೋಯಿನಿಸ್, ಕೀ ಮೈರಿಸ್, ಡೇನಿಯಲ್ ಸ್ಯಾಮ್, ದೀಪಕ್ ಹೂಡಾ, ಮಾರ್ಕ್ ವುಡ್, ಜಯದೇವ್ ಉನಾದ್ಕಟ್, ನವೀನ್ ಉಲ್ ಹಕ್, ರವಿ ಬಿಶ್ನೋಯಿ ಸೇರಿದಂತೆ ಬಲಿಷ್ಠ ಆಟಗಾರರು ತಂಡದಲ್ಲಿದ್ದಾರೆ.
IPL 2024 Rahul Dravid mentor for Lucknow Super Giants ? Indian Cricket Team coach is excited about IPL