IPL Broadcasting rights : ಐಪಿಎಲ್ ಬ್ರಾಡ್‌ಕಾಸ್ಟ್ ರೈಟ್ಸ್: ಒಂದು ಪಂದ್ಯದ ಪ್ರಸಾರ ಹಕ್ಕು 100 ಕೋಟಿಗೂ ಹೆಚ್ಚು


ಮುಂಬೈ: ಮುಂದಿನ ಐದು ವರ್ಷಗಳ ಅವಧಿಗೆ ಐಪಿಎಲ್ (IPL) ಪಂದ್ಯಗಳ ಬ್ರಾಡ್ ಕಾಸ್ಟಿಂಗ್ ಹಕ್ಕಿಗಾಗಿ ( IPL Broadcasting rights) ಇ-ಹರಾಜು ಪ್ರಕ್ರಿಯೆ ಮುಂಬೈನಲ್ಲಿ ನಡೆಯುತ್ತಿದೆ. ಭಾನುವಾರ ಆರಂಭಗೊಂಡ ಬಿಡ್ಡಿಂಗ್”ನಲ್ಲಿ ಐಪಿಎಲ್ ಪಂದ್ಯವೊಂದರ ಪ್ರಸಾರ ಹಕ್ಕಿನ ಬೆಲೆ ಬರೋಬ್ಬರಿ 105 ಕೋಟಿ ದಾಟಿದ್ದು, ಹರಾಜು ಪ್ರಕ್ರಿಯೆ ಇನ್ನೂ ಮುಂದುವರಿದಿದೆ. ರಿಲಯನ್ಸ್ ವಯಾಕಾಮ್ 18, (Reliance Viacom) ಡಿಸ್ನಿ ಸ್ಟಾರ್ (Disney Star) , ಸೋನಿ ನೆಟ್’ವರ್ಕ್ (Sony Network) , ಝೀ ನೆಟ್”ವರ್ಕ್ (Zee Network) ಸೇರಿದಂತೆ ಪ್ರಮುಖ ಕಂಪನಿಗಳು ಬಿಡ್ಡಿಂಗ್”ನಲ್ಲಿ ಭಾಗವಹಿಸಿವೆ.

ಮುಖ್ಯವಾಗಿ ಡಿಸ್ನಿ ಸ್ಟಾರ್ ಮತ್ತು ವಯಾಕಾಮ್ 18 ನಡುವಿನ ಪೈಪೋಟಿಯಿಂದಾಗಿ ಐಪಿಎಲ್ ಪ್ರಸಾರ ಹಕ್ಕಿನ ಬಿಡ್ಡಿಂಗ್ ಮೊದಲ ದಿನವೇ 43 ಸಾವಿರ ಕೋಟಿ ದಾಟಿದೆ. ಅಂದರೆ ಪ್ರತೀ ಪಂದ್ಯದ ನೇರ ಪ್ರಸಾರದ ಹಕ್ಕಿನ ಮೌಲ್ಯ 105 ಕೋಟಿ ರೂಪಾಯಿ. ಈ ಮೂಲಕ ವಿಶ್ವದ 2ನೇ ಅತ್ಯಂತ ಶ್ರೀಮಂತ ಸ್ಪೋರ್ಟ್ಸ್ ಲೀಗ್ ಎಂಬ ಹಿರಿಮೆಯನ್ನು ಐಪಿಎಲ್ ತನ್ನದಾಗಿಸಿಕೊಂಡಿದೆ. ಅಮೆರಿಕದ ನ್ಯಾಷನಲ್ ಫುಟ್ಬಾಲ್ ಲೀಗ್ (NFL)ನಲ್ಲಿ ಒಂದು ಪಂದ್ಯದ ಪ್ರಸಾರ ಹಕ್ಕು 133 ಕೋಟಿ ಇದ್ದು, ಇದು ಇಲ್ಲಿಯವರೆಗೆ ದಾಖಲೆ.

ಮೊದಲ ದಿನವಾದ ಭಾನುವಾರದ ಹರಾಜಿನಲ್ಲಿ ಟಿವಿ ಪ್ರಸಾರ ಹಕ್ಕುಗಳಿಗೆ ಸೋನಿ ನೆಟ್’ವರ್ಕ್, ರಿಲಯನ್ಸ್ ವಯಾಕಾಮ್ 18 ಮತ್ತು ಸ್ಟಾರ್ ನೆಟ್’ವರ್ಕ್ ಮಧ್ಯೆ ಭಾರೀ ಪೈಪೋಟಿ ನಡೆದಿದೆ. ಡಿಜಿಟಲ್ ಹಕ್ಕುಗಳಿಗಾಗಿ ಡಿಸ್ನಿ ಹಾಟ್’ಸ್ಟಾರ್ , ಝೀ ಮತ್ತು ರಿಲಯನ್ಸ್ ಜಿಯೋ ಮಧ್ಯೆ ಸ್ಪರ್ಧೆ ನಡೆಯುತ್ತಿದೆ. ಈ ಬಾರಿ ಬಿಸಿಸಿಐ, ಐಪಿಎಲ್ ಪ್ರಸಾರ ಹಕ್ಕುಗಳನ್ನು ನಾಲ್ಕು ಪ್ಯಾಕೇಜ್’ಗಳ ರೂಪದಲ್ಲಿ ಬಿಡ್ಡಿಂಗ್ ಮಾಡುತ್ತಿದೆ.

IPL Broadcasting rights : 4 ಪ್ಯಾಕೇಜ್ ಸಿಸ್ಟಮ್

ಇನ್ನು ಮುಂದೆ ಐಪಿಎಲ್’ನ ಎಲ್ಲಾ ಪಂದ್ಯಗಳು ಒಂದೇ ವಾಹಿನಿಯಲ್ಲಿ ಪ್ರಸಾರವಾಗುವ ಸಾಧ್ಯತೆಗಳು ಕಡಿಮೆ. ಕಾರಣ ಬಿಸಿಸಿಐ ಸಿದ್ಧಪಡಿಸಿರುವ 4 ಪ್ಯಾಕೇಜ್ ಸಿಸ್ಟಮ್. A, B, C ಮತ್ತು D ಎಂಬ ನಾಲ್ಕು ಪ್ಯಾಕೇಜ್”ಗಳಲ್ಲಿ ಐಪಿಎಲ್ ಬ್ರಾಡ್ ಕಾಸ್ಟಿಂಗ್ ಹಕ್ಕನ್ನು ನೀಡಲು ಬಿಸಿಸಿಐ ನಿರ್ಧರಿಸಿದೆ.
ಪ್ಯಾಕೇಜ್ A: ಭಾರತೀಯ ಉಪಖಂಡದ ಟಿವಿ ಹಕ್ಕು
ಪ್ಯಾಕೇಜ್ B: ಭಾರತೀಯ ಉಪಖಂಡಕ್ಕೆ ಮಾತ್ರ ಡಿಜಿಟಲ್ ಹಕ್ಕು
ಪ್ಯಾಕೇಜ್ C: ಭಾರತೀಯ ಉಪಖಂಡಕ್ಕೆ ಮಾತ್ರ ಪ್ಲೇಆಫ್ ಸೇರಿದಂತೆ ಕೆಲ ಪಂದ್ಯಗಳ ಡಿಜಿಟಲ್ ಹಕ್ಕು.
ಪ್ಯಾಕೇಜ್ D: ಭಾರತೀಯ ಉಪಖಂಡ ಹೊರತು ಪಡಿಸಿ ಪ್ರಪಂಚದ ಉಳಿದ ಭಾಗಗಳಿಗೆ ಟಿವಿ ಮತ್ತು ಡಿಜಿಟಲ್ ಹಕ್ಕು.

ಪ್ಯಾಕೇಜ್ C ವಿಶೇಷತೆ

ಪ್ಯಾಕೇಜ್ C ‘ಸ್ಪೆಷಲ್ ಪ್ಯಾಕೇಜ್’ ಪಂದ್ಯಗಳನ್ನು ಒಳಗೊಂಡಿರುತ್ತದೆ. ಈ ಪ್ಯಾಕೇಜ್‌ನಲ್ಲಿನ ಪಂದ್ಯಗಳ ಸಂಖ್ಯೆ, ಐಪಿಎಲ್ ಋತುವಿನಲ್ಲಿನ ಒಟ್ಟು ಪಂದ್ಯಗಳ ಸಂಖ್ಯೆಯ ಆಧಾರದ ಮೇಲೆ ಬದಲಾಗುತ್ತದೆ. 2022ರಂತೆ ಐಪಿಎಲ್’ನಲ್ಲಿ 74 ಪಂದ್ಯಗಳಿದ್ದರೆ, ವಿಶೇಷ ಪ್ಯಾಕೇಜ್ 18 ಪಂದ್ಯಗಳನ್ನು ಹೊಂದಿರುತ್ತದೆ. ಒಂದು ಋತುವಿನಲ್ಲಿ 74 ಕ್ಕಿಂತ ಹೆಚ್ಚು ಪಂದ್ಯಗಳು ಇದ್ದರೆ, ವಿಶೇಷ ಪ್ಯಾಕೇಜ್ ಪಂದ್ಯಗಳು ಪ್ರತಿ ಹೆಚ್ಚುವರಿ 10 ಪಂದ್ಯಗಳಿಗೆ ಎರಡು ಹಂತಗಳಲ್ಲಿ ಏರಿಕೆಯಾಗುತ್ತದೆ. ಒಂದು ಋತುವಿನಲ್ಲಿ 84 ಪಂದ್ಯಗಳಿದ್ದರೆ, ವಿಶೇಷ ಪ್ಯಾಕೇಜ್ ಪಂದ್ಯಗಳು 20 ಆಗಿರುತ್ತದೆ ಮತ್ತು ಪಂದ್ಯಾವಳಿಯು 94 ಪಂದ್ಯಗಳನ್ನು ಹೊಂದಿದ್ದರೆ, ನಂತರ ವಿಶೇಷ ಪ್ಯಾಕೇಜ್ 22 ಪಂದ್ಯಗಳನ್ನು ಹೊಂದಿರುತ್ತದೆ.

ಸ್ಪೆಷಲ್ ಪ್ಯಾಕೇಜ್”ನಲ್ಲಿ ಯಾವ ಯಾವ ಪಂದ್ಯಗಳು :

ಉದ್ಘಾಟನಾ ಪಂದ್ಯ, ವಾರಾಂತ್ಯದ ರಾತ್ರಿ ಪಂದ್ಯಗಳು, ಫೈನಲ್ ಸೇರಿದಂತೆ ನಾಲ್ಕು ಪ್ಲೇ ಆಫ್ ಪಂದ್ಯಗಳು.

ಪ್ರತಿ ಪ್ಯಾಕೇಜ್‌ಗೆ ಪ್ರತಿ ಪಂದ್ಯದ ಮೂಲ ಬೆಲೆ ಎಷ್ಟು..?
ಪ್ಯಾಕೇಜ್ A: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 49 ಕೋಟಿ.
ಪ್ಯಾಕೇಜ್ B: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 33 ಕೋಟಿ.
ಪ್ಯಾಕೇಜ್ C: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 22 ಕೋಟಿ.
ಪ್ಯಾಕೇಜ್ D: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 3 ಕೋಟಿ.

5 ವರ್ಷಗಳಿಗೆ ಪ್ರತೀ ಪ್ಯಾಕೇಜ್’ನ ಒಟ್ಟು ಮೂಲ ಬೆಲೆ ಎಷ್ಟು ?

ಪ್ಯಾಕೇಜ್ A: 74 x 49 ಕೋಟಿ x 5 (ಸೀಸನ್) = 18,130 ಕೋಟಿ.
ಪ್ಯಾಕೇಜ್ B: 12,210 ಕೋಟಿ
ಪ್ಯಾಕೇಜ್ D: 1,110 ಕೋಟಿ

ಇದನ್ನೂ ಓದಿ : ಐಪಿಎಲ್‌ನಲ್ಲಿ ಗಳಿಸಿದ ಅಷ್ಟೂ ದುಡ್ಡನ್ನು ತಂದೆಗೆ ಕೊಟ್ಟ ಮುಂಬೈ ಇಂಡಿಯನ್ಸ್ ಸ್ಟಾರ್

ಇದನ್ನೂ ಓದಿ : Ashwin : ತಮಿಳುನಾಡಿನಲ್ಲಿ ಕ್ಲಬ್ ಕ್ರಿಕೆಟ್ ಆಡಿದ ಅಶ್ವಿನ್ : ದ್ರಾವಿಡ್ ಹಾದಿಯಲ್ಲಿ ಸ್ಪಿನ್ ಮಾಂತ್ರಿಕ

IPL Broadcasting rights a match are over 100 crores

Comments are closed.