ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ : ಮುಂದಿನ ಪಂದ್ಯದಲ್ಲಿ ಭಾರತ ಗೆಲ್ಲಬೇಕಿದ್ದರೆ ಈ ಇಬ್ಬರನ್ನು ಆಡಿಸಿ

ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ (India Vs South Africa T20 series) ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಸರಣಿ ಸೋಲಿನ ಭೀತಿಯಲ್ಲಿದೆ. ದೆಹಲಿ ಮತ್ತು ಕಟಕ್”ನಲ್ಲಿ ನಡೆದ ಮೊದಲೆರಡು ಟಿ20 ಪಂದ್ಯಗಳಲ್ಲಿ ರಿಷಭ್ ಪಂತ್ (Rishabh Pant) ನಾಯಕತ್ವದ ಭಾರತ ಹೀನಾಯ ಸೋಲು ಕಂಡಿದೆ. ತವರು ನೆಲದಲ್ಲಿ ಸರಣಿ ಸೋಲಿನ ಅವಮಾನ ತಪ್ಪಿಸಿಕೊಳ್ಳಬೇಕಾದರೆ ಭಾರತ ಮುಂದಿನ ಮೂರೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.

ದೆಹಲಿಯ ಅರುಣ್ ಜೈಟ್ಲಿ ಮೈದಾನದಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ 211 ರನ್ ಕಲೆ ಹಾಕಿಯೂ ಭಾರತ 7 ವಿಕೆಟ್”ಗಳ ಅಂತರದಿಂದ ಸೋಲು ಕಂಡಿತ್ತು. ಕಟಕ್”ನಲ್ಲಿ ಭಾನುವಾರ ನಡೆದ ಸರಣಿಯ 2ನೇ ಪಂದ್ಯದಲ್ಲಿ ಭಾರತ 4 ವಿಕೆಟ್’ಗಳ ಸೋಲು ಕಂಡು ಸರಣಿಯಲ್ಲಿ 0-2ರಲ್ಲಿ ಹಿನ್ನಡೆಯಲ್ಲಿದೆ. ಹೀಗಾಗಿ ವಿಶಾಖಪಟ್ಟಣದಲ್ಲಿ ಮಂಗಳವಾರ ನಡೆಯಲಿರುವ 3ನೇ ಪಂದ್ಯ ಭಾರತದ ಪಾಲಿಗೆ ಮಾಡು ಇಲ್ಲ ಮಡಿ ಪಂದ್ಯ.

India Vs South Africa T20 series India win Next Match Playing these Two Cricketers
PC: Indian cricket Team

ಡು ಆರ್ ಡೈ ಮ್ಯಾಚ್’ನಲ್ಲಿ ಗೆಲ್ಲಬೇಕಾದರೆ ಭಾರತ ತನ್ನ ಪ್ಲೇಯಿಂಗ್ ಇಲೆವೆನ್”ನಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕು. ಮುಖ್ಯವಾಗಿ ತಂಡದ ಪಾಲಿಗ X ಫ್ಯಾಕ್ಟರ್ ಆಗಿರುವ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್ (Umran Malik) ಅವರನ್ನು ಆಡಿಸಲೇಬೇಕು. ಗಂಟೆಗೆ ಸತತವಾಗಿ 150 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡುವ ಜಮ್ಮು ಎಕ್ಸ್”ಪ್ರೆಸ್ ಉಮ್ರಾನ್ ಮಲಿಕ್ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಸರದಿಯನ್ನು ಧ್ವಂಸ ಮಾಡಬಲ್ಲರು. 22 ವರ್ಷದ ಉಮ್ರಾನ್ ಐಪಿಎಲ್-2022 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ್ದು 14 ಪಂದ್ಯಗಳಿಂದ 22 ವಿಕೆಟ್ ಪಡೆದಿದ್ದರು.

India Vs South Africa T20 series India win Next Match Playing these Two Cricketers

ಇನ್ನು ಮತ್ತೊಬ್ಬ ಐಪಿಎಲ್ ಸ್ಟಾರ್, ಸ್ಲಾಗ್ ಓವರ್ಸ್ ಸ್ಪೆಷಲಿಸ್ಟ್ ಬೌಲರ್ ಅರ್ಷದೀಪ್ ಸಿಂಗ್ (Arshdeep Singh), ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಫೋಟಕ ಆಲ್ರೌಂಡರ್ ದೀಪಕ್ ಹೂಡ (Deepak Hooda) ಕೂಡ ಪಂದ್ಯ ಗೆಲ್ಲಿಸಬಲ್ಲ ಆಟಗಾರರು. ಸದ್ಯ ಪ್ಲೇಯಿಂಗ್ ಇಲೆವೆನ್”ನಲ್ಲಿ ಆಡುತ್ತಿರುವ ಆಟಗಾರರ ಪೈಕಿ ನಾಯಕ ರಿಷಭ್ ಪಂತ್ ಸೇರಿದಂತೆ ಕೆಲ ಆಟಗಾರರು ತಮ್ಮ ಜವಾಬ್ದಾರಿಗೆ ತಕ್ಕಂತೆ ಆಡುತ್ತಿಲ್ಲ. ಅಕ್ಷರ್ ಪಟೇಲ್ (Axar Patel), ಶ್ರೇಯಸ್ ಅಯ್ಯರ್ (Shreyas Iyer), ರುತುರಾಜ್ ಗಾಯಕ್ವಾಡ್ (Ruturaj Gayakwad) ಸಂಪೂರ್ಣ ವಿಫಲರಾಗಿದ್ದಾರೆ. ಅನುಭವಿ ಲೆಗ್’ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಕೂಡ ದುಬಾರಿಯಾಗುತ್ತಿರುವುದು ತಂಡಕ್ಕೆ ಹಿನ್ನಡೆಯಾಗುತ್ತಿದೆ. 2ನೇ ಟಿ20 ಪಂದ್ಯದಲ್ಲಿ ಯುಜ್ವೇಂದ್ರ ಚಹಲ್ 4 ಓವರ್’ಗಳಲ್ಲಿ 49 ರನ್ ನೀಡಿದ್ದರು. ಅದರಲ್ಲೂ ಚಹಲ್ ಅವರ ಕೊನೆಯ ಓವರ್”ನಲ್ಲಿ ದಕ್ಷಿಣ ಆಫ್ರಿಕಾ ಆಟಗಾರ ಹೆನ್ರಿಕ್ ಕ್ಲಾಸೆನ್ (Klaasen) ಮತ್ತು ಡೇವಿಡ್ ಮಿಲ್ಲರ್ (David Miller) ಮೂರು ಸಿಕ್ಸರ್ ಸಿಡಿಸಿದ್ದರು.

ಇದನ್ನೂ ಓದಿ : IPL Broadcasting rights : ಐಪಿಎಲ್ ಬ್ರಾಡ್‌ಕಾಸ್ಟ್ ರೈಟ್ಸ್: ಒಂದು ಪಂದ್ಯದ ಪ್ರಸಾರ ಹಕ್ಕು 100 ಕೋಟಿಗೂ ಹೆಚ್ಚು

ಇದನ್ನೂ ಓದಿ : ಐಪಿಎಲ್‌ನಲ್ಲಿ ಗಳಿಸಿದ ಅಷ್ಟೂ ದುಡ್ಡನ್ನು ತಂದೆಗೆ ಕೊಟ್ಟ ಮುಂಬೈ ಇಂಡಿಯನ್ಸ್ ಸ್ಟಾರ್

India Vs South Africa T20 series India win Next Match Playing these Two Cricketers

Comments are closed.