IPL Most Expensive Players : ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರರು ಯಾರು ಗೊತ್ತಾ ?

ಇಂಡಿಯನ್ ಪ್ರೀಮಿಯರ್ ಲೀಗ್ (IPL) ವಿಶ್ವದ ಅತ್ಯಂತ ದುಬಾರಿ ಕ್ರಿಕೆಟ್‌ ಲೀಗ್‌ ಎನಿಸಿಕೊಂಡಿದೆ. ಜಗತ್ತಿನ ಖ್ಯಾತ ಆಟಗಾರರೇ ಈ ಲೀಗ್‌ನಲ್ಲಿ ಭಾಗಿಯಾಗಲು ತುದಿಗಾಲಲ್ಲಿ ನಿಲ್ಲುತ್ತಿದ್ದಾರೆ. ಅದ್ರಲ್ಲೂ ಆಟಗಾರರು ಕೋಟಿ ಕೋಟಿ ಸಂಭಾವನೆಯನ್ನು (IPL Most Expensive Players) ಪಡೆಯುತ್ತಿದ್ದಾರೆ. ಮೊದಲ ಐಪಿಎಲ್‌ನಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಐಪಿಎಲ್‌ ಮೊದಲ ಸೀಸನ್‌ನಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಲ್‌ ಇತಿಹಾಸದಲ್ಲಿಯೇ ಕ್ರಿಸ್‌ ಮೊರಿಸ್‌ ಅತ್ಯಂತ ದುಬಾರಿ ಆಟಗಾರರಾಗಿದ್ದರೆ, ಯುವರಾಜ್‌ ಸಿಂಗ್‌, ಪಾಟ್‌ ಕುಮಿನ್ಸ್‌, ಬೆನ್‌ ಸ್ಟೋಕ್‌, ಗೌತಮ್‌ ಗಂಭೀರ್‌ ದಾಖಲೆಯ ಮೊತ್ತಕ್ಕೆ ಹರಾಜು ಆಗಿದ್ದಾರೆ. ಹಾಗಾದ್ರೆ ಇದುವರೆಗೆ ಅತೀ ಹೆಚ್ಚು ಮೊತ್ತಕ್ಕೆ ಸೇಲ್‌ ಆಗಿರುವ ಆಟಗಾರರು ಯಾರು ಅನ್ನೋ ಮಾಹಿತಿ ಇಲ್ಲಿದೆ.

ಐಪಿಎಲ್‌ ಇದುವರೆಗೆ 14 ಸೀಸನ್‌ಗಳನ್ನು ಕಂಡಿದೆ. ಇದೀಗ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 15ನೇ ಆವೃತ್ತಿಗಾಗಿ ತಂಡಗಳು ಸಿದ್ದತೆ ನಡೆಸುತ್ತಿವೆ. ಈ ಬಾರಿ ಮೆಗಾ ಹರಾಜು ನಡೆಯುತ್ತಿದ್ದು, ಈಗಾಗಲೇ ಎಂಟು ತಂಡಗಳು ಹಲವು ಆಟಗಾರರನ್ನು ಉಳಿಸಿಕೊಂಡಿವೆ. ಉಳಿದಂತೆ ಅಹಮದಾಬಾದ್‌ ಹಾಗೂ ಲಕ್ನೋ ತಂಡಗಳು ಇನ್ನಷ್ಟೇ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಬೇಕಾಗಿದೆ. ಅದ್ರಲ್ಲೂ ಖ್ಯಾತ ಆಟಗಾರರೆಲ್ಲಾ ಈ ಬಾರಿ ಐಪಿಎಲ್‌ ಮೆಗಾ ಹರಾಜಿನಲ್ಲಿ ಭಾಗಿಯಾಗಲಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ( IPL ) ನ ದುಬಾರಿ ಆಟಗಾರರು (IPL Most Expensive Players) ಯಾರು ಅನ್ನೋ ಪಟ್ಟಿ ಇಲ್ಲಿದೆ :

2008 ಮಹೇಂದ್ರ ಸಿಂಗ್‌ ಧೋನಿ- ಚೆನ್ನೈ ಸೂಪರ್‌ ಕಿಂಗ್ಸ್‌ : 6.5 ಕೋಟಿ

ಇಂಡಿಯನ್‌ ಪ್ರೀಮಿಯರ್‌ ಲೋಗ್‌ ಆರಂಭಗೊಂಡಾಗ ಅತ್ಯಂತ ಪ್ರಖ್ಯಾತಿ ಪಡೆದಿದ್ದವರು ಮಹೇಂದ್ರ ಸಿಂಗ್‌ ಧೋನಿ. ಬ್ಯಾಟಿಂಗ್‌ ಕೀಪಿಂಗ್‌ನಲ್ಲಿ ಮಿಂಚು ಹರಿಸಿದ್ದ ಧೋನಿ ಮೊದಲ ಋತುವಿನಲ್ಲಿಯೇ ಅತ್ಯಂತ ದುಬಾರಿ ಆಟಗಾರ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದರು. ಮಹೇಂದ್ರ ಸಿಂಗ್‌ ಧೋನಿ ಬರೋಬ್ಬರಿ 6.5 ಕೋಟಿ ರೂಪಾಯಿ ನೀಡಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಖರೀದಿ ಮಾಡಿತ್ತು. ಮಾತ್ರವಲ್ಲ ತಂಡದ ನಾಯಕರಾಗಿ ಧೋನಿ ಅದ್ಬುತ ಸಾಧನೆಯನ್ನು ಮಾಡಿದ್ದಾರೆ. ಇದುವರೆಗೆ ನಾಲ್ಕು ಬಾರಿ ಐಪಿಎಲ್‌ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅಲ್ಲದೇ ಆರಂಭದಿಂದ ಇಂದಿನವರೆಗೂ ಸಿಎಸ್‌ಕೆ ನಾಯಕನಾಗಿಯೇ ಉಳಿದುಕೊಂಡಿದ್ದಾರೆ.

2009 ಕೆವಿನ್‌ ಪೀಟರ್‌ ಸನ್‌ ( ರಾಯಲ್‌ ಚಾಲೆಂಜರ್ಸ್‌ ), ಆಂಡ್ರೋ ಪ್ಲಿಂಟಾಪ್‌ (ಚೆನ್ನೈ ಸೂಪರ್‌ ಕಿಂಗ್ಸ್‌ ) : 6.8 ಕೋಟಿ

ಐಪಿಎಲ್‌ ಎರಡನೇ ಅವಧಿಯಲ್ಲಿ ಇಂಗ್ಲೆಂಡ್‌ ಆಟಗಾರರಾಗಿರುವ ಕೆವಿನ್‌ ಪೀಟರ್ಸನ್‌ ಹಾಗೂ ಆಲ್‌ರೌಂಡರ್‌ ಆಂಡ್ರೋ ಫ್ಲಿಂಟಾಪ್‌ ಅವರು ಅತ್ಯಂತ ದುಬಾರಿ ಆಟಗಾರರು ಎನಿಸಿಕೊಂಡಿದ್ದರು.

2010 ಶೇನ್‌ ಬಾಂಡ್‌ ( ಕೆಕೆಆರ್‌), ಕಿರಾನ್‌ ಪೋಲಾರ್ಡ್‌ : 4.8 ಕೋಟಿ

ವರ್ಷದಿಂದ ವರ್ಷಕ್ಕೆ ಐಪಿಎಲ್‌ ಹೆಚ್ಚು ಜನಪ್ರಿಯಗೊಂಡಿತ್ತು. 2010ರ ಅವಧಿಯಲ್ಲಿ ಮತ್ತೆ ವಿದೇಶಿ ಆಟಗಾರರೇ ದುಬಾರಿ ಬೆಲೆಗೆ ಹರಾಜಾಗಿದ್ದರು. ಶೇನ್‌ ಬಾಂಡ್‌ ಅವರನ್ನು ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಹಾಗೂ ಕಿರಾನ್‌ ಪೋಲಾರ್ಡ್‌ ಅವರನ್ನು ಮುಂಬೈ ಇಂಡಿಯನ್ಸ್‌ ತಂಡ 4.8 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು.

2011 ಗೌತಮ್‌ ಗಂಭೀರ್‌ (ಕೋಲ್ಕತ್ತಾ ನೈಟ್‌ ರೈಡರ್ಸ್‌ ) 14.8 ಕೋಟಿ

ಟೀಂ ಇಂಡಿಯಾದ ಭರವಸೆಯ ಆರಂಭಿಕ ಆಟಗಾರರಾಗಿದ್ದ ಗೌತಮ್‌ ಗಂಭೀರ್‌ ಅಂತರಾಷ್ಟ್ರೀಯ ಪಂದ್ಯಗಳ ಜೊತೆಗೆ ಐಪಿಎಲ್‌ನಲ್ಲಿ ಉತ್ತಮ ಆಟದ ಪ್ರದರ್ಶನವನ್ನು ನೀಡಿದ್ದರು. ಇದೇ ಕಾರಣಕ್ಕೆ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಬರೋಬ್ಬರಿ 14.8 ಕೋಟಿ ರೂಪಾಯಿ ಕೊಟ್ಟು ಗೌತಮ್‌ ಗಂಭೀರ್‌ ಅವರನ್ನು ಖರೀದಿ ಮಾಡಿತ್ತು. ಅಲ್ಲದೇ ಅವರನ್ನೇ ನಾಯಕನ್ನಾಗಿ ಆಯ್ಕೆ ಮಾಡಿತ್ತು. ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ ಕೆಕೆಆರ್‌ ತಂಡ ಐಪಿಎಲ್‌ನಲ್ಲಿ ಉತ್ತಮ ಸಾಧನೆಯನ್ನು ಮಾಡಿತ್ತು.

2012 ರವೀಂದ್ರ ಜಡೇಜಾ (ಚೆನ್ನೈ ಸೂಪರ್‌ ಕಿಂಗ್ಸ್‌ ) 12.8 ಕೋಟಿ

ಧೋನಿ ನಾಯಕತ್ವದಲ್ಲಿ ಬಲಿಷ್ಟವಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ರವೀಂದ್ರ ಜಡೇಜಾ ಅವರನ್ನು ಬರೋಬ್ಬರಿ 12.8 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿತ್ತು.

2013 ಗ್ಲೇನ್‌ ಮ್ಯಾಕ್ಸ್‌ವೆಲ್‌ (ಮುಂಬೈ ಇಂಡಿಯನ್ಸ್‌ ) 6.3 ಕೋಟಿ

ಐಪಿಎಲ್‌ ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ತಂಡ ೨೦೧೩ರಲ್ಲಿ ಆಸ್ಟ್ರೇಲಿಯಾದ ಖ್ಯಾತ ಆಟಗಾರ ಗ್ಲೇನ್‌ ಮ್ಯಾಕ್ಸ್‌ವೆಲ್‌ ಅವರನ್ನು 6.3ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಹೀಗಾಗಿ ಮ್ಯಾಕ್ಸ್‌ವೆಲ್‌ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು.

2014 ಯುವರಾಜ್‌ ಸಿಂಗ್‌ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ) 14 ಕೋಟಿ

ವಿಶ್ವಕಪ್‌ನಲ್ಲಿ ಅದ್ಬುತ ಆಟದ ಪ್ರದರ್ಶನ ನೀಡಿದ್ದ ಯುವರಾಜ್‌ ಸಿಂಗ್‌ ಐಪಿಎಲ್‌ನಲ್ಲಿ ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದರು. ಆರ್‌ಸಿಬಿ ತಂಡ 2014ರಲ್ಲಿ ಯುವರಾಜ್‌ ಸಿಂಗ್‌ ಅವರನ್ನು 14ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.

2015 ಯುವರಾಜ್‌ ಸಿಂಗ್‌ ( ಡೆಲ್ಲಿ ಡೇರ್ ಡಿವಿಲ್ಸ್‌ ) 16 ಕೋಟಿ

ಸಿಕ್ಸರ್‌ ಮೂಲಕವೇ ಖ್ಯಾತರಾಗಿದ್ದ ಅನುಭವಿ ಆಟಗಾರ ಯುವರಾಜ್‌ ಸಿಂಗ್‌ 2015ರಲ್ಲಿ ಐಪಿಎಲ್‌ನ ಅತ್ಯಂತ ಬೇಡಿಕೆಯ ಆಟಗಾರರಾಗಿದ್ದರು. ಇದೇ ಕಾರಣಕ್ಕೆ ಡೆಲ್ಲಿ ಡೇರ್‌ಡಿವಿಲ್ಸ್‌ ತಂಡ ಬರೋಬ್ಬರಿ 16 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.

2016 ಶೇನ್‌ ವಾಟ್ಸನ್‌ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ) 6.5 ಕೋಟಿ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ವರ್ಷಂಪ್ರತಿ ದುಬಾರಿ ಬೆಲೆ ನೀಡಿ ಆಟಗಾರರನ್ನು ಸೆಳೆದಿತ್ತು. ಅದ್ರಲ್ಲೂ ಆಸ್ಟ್ರೇಲಿಯಾದ ಖ್ಯಾತ ಸ್ಪಿನ್ನರ್‌ ಶೇನ್‌ ವಾಟ್ಸನ್‌ ಅವರನ್ನು ಬರೋಬ್ಬರಿ 6.5 ಕೋಟಿ ರೂಪಾಯಿ ಹಣ ನೀಡಿ ಖರೀದಿ ಮಾಡಿತ್ತು. ಈ ಮೂಲಕ ಶೇನ್‌ ವಾಟ್ಸನ್‌ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.

2017 ಬೆನ್‌ ಸ್ಟೋಕ್‌ (ರೈಸಿಂಗ್‌ ಪುಣೆ ಸೂಪರ್‌ ಜೈಂಟ್ಸ್ )‌ 14.5 ಕೋಟಿ

ಮ್ಯಾಚ್‌ ಫಿಕ್ಸಿಂಗ್‌ ಆರೋಪದ ಹಿನ್ನೆಲೆಯಲ್ಲಿಐಪಿಎಲ್‌ಗೆ ಎಂಟ್ರಿ ಕೊಟ್ಟಿದ್ದ ಆರ್‌ಪಿಎಸ್‌ ತಂಡ 2017ರಲ್ಲಿ ಇಂಗ್ಲೆಂಡ್‌ ತಂಡ ಖ್ಯಾತ ಆಲ್‌ರೌಂಡರ್‌ ಬೆನ್‌ಸ್ಟೋಕ್‌ ಅವರನ್ನು 14.5 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು.

2015 ಬೆನ್‌ಸ್ಟೋಕ್‌ (ರಾಜಸ್ಥಾನ ರಾಯಲ್ಸ್)‌ 12.5

ಐಪಿಎಲ್‌ನ ದುಬಾರಿ ಆಟಗಾರ ಎನಿಸಿಕೊಂಡಿದ್ದ ಬೆನ್‌ಸ್ಟೋಕ್‌ ಸತತ ಎರಡನೇ ಆವೃತ್ತಿಯಲ್ಲಿಯೂ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ರಾಜಸ್ಥಾನ ರಾಯಲ್ಸ್‌ ತಂಡ ಬೆನ್‌ ಸ್ಟೋಕ್‌ ಅವರನ್ನು 12.5 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು.

2016 ಜಯದೇವ್‌ ಉನಾದ್ಕಟ್‌ ( ರಾಜಸ್ಥಾನ ರಾಯಲ್ಸ್‌ ) ವರುಣ್‌ ಚಕ್ರವರ್ತಿ (ಕಿಂಗ್ಸ್‌ IX ಪಂಜಾಬ್‌) 8.4 ಕೋಟಿ

2019 ರಲ್ಲಿ ಐಪಿಎಲ್‌ನಲ್ಲಿ ಇಬ್ಬರು ಆಟಗಾರರು ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದರು. ಖ್ಯಾತ ಬೌಲರ್‌ ಜಯದೇವ ಉನಾದ್ಕಟ್‌ ಅವರನ್ನು ರಾಜಸ್ಥಾನ ರಾಯಲ್ಸ್‌ ತಂಡ ಹಾಗೂ ವರುಣ್‌ ಚಕ್ರವರ್ತಿ ಅವರನ್ನು ಕಿಂಗ್ಸ್‌ IXಪಂಜಾಬ್‌ ತಂಡ 8.4 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಈ ಮೂಲಕ ದೇಶೀಯ ಆಟಗಾರರಿಬ್ಬರು ಐಪಿಎಲ್‌ನ ದುಬಾರಿ ಆಟಗಾರರು ಎನಿಸಿಕೊಂಡಿದ್ದರು.

2020 ಪಾಟ್‌ ಕುಮಿನ್ಸ್‌ ( ಕೋಲ್ಕತ್ತಾ ನೈಟ್‌ ರೈಡರ್ಸ್‌ ) 15.5 ಕೋಟಿ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಪಾಟ್‌ ಕುಮಿನ್ಸ್‌ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಪಾಟ್‌ ಕುಮಿನ್ಸ್‌ ಅವರನ್ನು ಬರೋಬ್ಬರಿ 15.5ಕೋಟಿ ರೂಪಾಯಿ ನೀಡಿ ಖರೀದಿಸಿತ್ತು.

2021ಕ್ರಿಸ್‌ ಮೊರಿಸ್‌ ( Rajasthan Royals ) 16.25 ಕೋಟಿ

ರಾಜಸ್ಥಾನ ರಾಯಲ್ಸ್‌ ತಂಡ ಕಳೆದ ಬಾರಿ ಆಲ್‌ರೌಂಡರ್‌ ಕೊರತೆಯನ್ನು ನೀಗಿಸುವ ಸಲುವಾಗಿ ಕ್ರಿಸ್‌ ಮೋರಿಸ್‌ ಅವರನ್ನು ಬರೋಬ್ಬರಿ 16.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಈ ಮೂಲಕ ಕ್ರಿಸ್‌ ಮೊರಿಸ್‌ ಇದುವರೆಗಿನ ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. IPL ಋತುಗಳಲ್ಲಿ ಯುವರಾಜ್ ಸಿಂಗ್ (ಎರಡು ಬಾರಿ), ಬೆನ್ ಸ್ಟೋಕ್ಸ್ (ಎರಡು ಬಾರಿ) ಅತ್ಯಂತ ದುಬಾರಿ ಆಟಗಾರರು ಎನಿಸಿಕೊಂಡಿದ್ದಾರೆ. ಇದೀಗ ಐಪಿಎಲ್‌ 2022ಗಾಗಿ ಸಿದ್ದತೆ ನಡೆಯುತ್ತಿದೆ. ಈಗಾಗಲೇ ಕೋಟ್ಯಾಂತರ ರೂಪಾಯಿ ನೀಡಿ ತಂಡಗಳು ಆಟಗಾರರನ್ನು ಖರೀದಿ ಮಾಡಿವೆ. ಅದ್ರಲ್ಲೂ ಹಲವು ಆಟಗಾರರನ್ನು ತಂಡದಲ್ಲಿಯೇ ಉಳಿಸಿಕೊಂಡಿವೆ.

ಐಪಿಎಲ್‌ 2022ಯಲ್ಲಿ 8 ತಂಡಗಳು ಉಳಿಸಿಕೊಂಡಿರುವ ಆಟಗಾರರ ( IPL Most Expensive Players) ವಿವರ

ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) :

1ನೇ ಆಟಗಾರ ವಿರಾಟ್ ಕೊಹ್ಲಿ – 15 ಕೋಟಿ
2ನೇ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್- 11 ಕೋಟಿ
3ನೇ ಆಟಗಾರ ಮೊಹಮ್ಮದ್ ಸಿರಾಜ್ – 7 ಕೋಟಿ.

ಚೆನ್ನೈ ಸೂಪರ್ ಕಿಂಗ್ಸ್ (CSK)​:

1ನೇ ಆಟಗಾರ ರವೀಂದ್ರ ಜಡೇಜಾ- 16 ಕೋಟಿ
2ನೇ ಆಟಗಾರ ಮಹೇಂದ್ರ ಸಿಂಗ್ ಧೋನಿ- 12 ಕೋಟಿ
3ನೇ ಆಟಗಾರ ಮೊಯೀನ್ ಅಲಿ- 8 ಕೋಟಿ
4ನೇ ಆಟಗಾರ ರುತುರಾಜ್ ಗಾಯಕ್ವಾಡ್- 6 ಕೋಟಿ

ಮುಂಬೈ ಇಂಡಿಯನ್ಸ್ (MI​:

1ನೇ ಆಟಗಾರ ರೋಹಿತ್ ಶರ್ಮಾ- 16 ಕೋಟಿ
2ನೇ ಆಟಗಾರ ಜಸ್​ಪ್ರೀತ್ ಬುಮ್ರಾ- 12 ಕೋಟಿ
3ನೇ ಆಟಗಾರ ಸೂರ್ಯಕುಮಾರ್ ಯಾದವ್​- 8 ಕೋಟಿ
4ನೇ ಆಟಗಾರ ಕೀರನ್ ಪೊಲಾರ್ಡ್​- 6 ಕೋಟಿ

ಸನ್​ರೈಸರ್ಸ್​ ಹೈದರಾಬಾದ್ (SRH):

1ನೇ ಆಟಗಾರ ಕೇನ್ ವಿಲಿಯಮ್ಸನ್- 14 ಕೋಟಿ
2ನೇ ಆಟಗಾರ ಉಮ್ರಾನ್ ಮಲಿಕ್- 4 ಕೋಟಿ
3ನೇ ಆಟಗಾರ ಅಬ್ದುಲ್ ಸಮದ್- 4 ಕೋಟಿ

ರಾಜಸ್ಥಾನ್ ರಾಯಲ್ಸ್ (RR ):

1ನೇ ಆಟಗಾರ ಸಂಜು ಸ್ಯಾಮ್ಸನ್- 14 ಕೋಟಿ
2 ನೇ ಆಟಗಾರ ಜೋಸ್ ಬಟ್ಲರ್- 10 ಕೋಟಿ
3 ನೇ ಆಟಗಾರಯಶಸ್ವಿ ಜೈಸ್ವಾಲ್- 4 ಕೋಟಿ

ಕೊಲ್ಕತ್ತಾ ನೈಟ್​ ರೈಡರ್ಸ್ (KKR)​:

1 ನೇ ಆಟಗಾರಆಂಡ್ರೆ ರಸೆಲ್- 16 ಕೋಟಿ
2 ನೇ ಆಟಗಾರ ವರುಣ್ ಚಕ್ರವರ್ತಿ- 8 ಕೋಟಿ
3 ನೇ ಆಟಗಾರವೆಂಕಟೇಶ್ ಅಯ್ಯರ್- 8 ಕೋಟಿ
4 ನೇ ಆಟಗಾರಸುನಿಲ್ ನರೈನ್- 6 ಕೋಟಿ

ಡೆಲ್ಲಿ ಕ್ಯಾಪಿಟಲ್ಸ್​ (DC) :

1ನೇ ಆಟಗಾರ ರಿಷಭ್ ಪಂತ್- 16 ಕೋಟಿ
2ನೇ ಆಟಗಾರ ಪೃಥ್ವಿ ಶಾ- 12 ಕೋಟಿ
3 ನೇ ಆಟಗಾರ ಅಕ್ಷರ್ ಪಟೇಲ್- 7.5 ಕೋಟಿ
4 ನೇ ಆಟಗಾರ ಅನ್ರಿಕ್ ನೋಕಿಯಾ- 6.5 ಕೋಟಿ

ಪಂಜಾಬ್ ಕಿಂಗ್​ (PBKS) :

1ನೇ ಆಟಗಾರ ಮಯಾಂಕ್ ಅಗರ್ವಾಲ್ – 14 ಕೋಟಿ
2ನೇ ಆಟಗಾರ ಅರ್ಷದೀಪ್ ಸಿಂಗ್ – 4 ಕೋಟಿ.

ಯಾವ ತಂಡದ ಬಳಿ ಹರಾಜಿಗೆ ಎಷ್ಟು ಹಣವಿದೆ ?

ಐಪಿಎಲ್‌ 22 ರಲ್ಲಿ ಭಾಗಿಯಾಗುವ ತಂಡಗಳು ಆಟಗಾರರ ಖರೀದಿಗಾಗಿ ತಲಾ 90 ಕೋಟಿ ರೂಪಾಯಿಗಳನ್ನು ವ್ಯಯಿಸಬಹುದಾಗಿದೆ. ಈಗಾಗಲೇ ತಲಾ ನಾಲ್ಕು ಆಟಗಾರರನ್ನು ಉಳಿಸಿಕೊಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌, ಕೋಲ್ಕತ್ತಾ ನೈಟ್‌ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು 48 ಕೋಟಿ ರೂಪಾಯಿಯ ಮೂಲಕ ಮೆಗಾ ಹರಾಜಿನಲ್ಲಿ ಉಳಿದ ಆಟಗಾರರನ್ನು ಖರೀದಿಸಬೇಕಾಗಿದೆ. ಈ ಪೈಕಿ ಕೇವಲ ಇಬ್ಬರು ಆಟಗಾರರನ್ನು ಉಳಿಸಿಕೊಂಡಿರುವ ಪಂಜಾಬ್‌ ಕಿಂಗ್ಸ್‌ ತಂಡ ಅತೀ ಹೆಚ್ಚು ಅಂದ್ರೆ 72 ಕೋಟಿ ರೂಪಾಯಿ ಯನ್ನು ಉಳಿಸಿಕೊಂಡಿದ್ದು. ಸ್ಟಾರ್‌ ಆಟಗಾರರನ್ನು ಖರೀದಿ ಮಾಡಬಹುದು ಅನ್ನೋ ಲೆಕ್ಕಾಚಾರದಲ್ಲಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ : 48 ಕೋಟಿ
ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ : 57 ಕೋಟಿ
ಕೋಲ್ಕತ್ತಾ ನೈಟ್‌ ರೈಡರ್ಸ್‌ : 48 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್‌ : 48 ಕೋಟಿ
ಸನ್‌ ರೈಸಸ್‌ ಹೈದ್ರಾಬಾದ್‌ : 68 ಕೋಟಿ
ಮುಂಬೈ ಇಂಡಿಯನ್ಸ್‌ 48 ಕೋಟಿ
ರಾಜಸ್ಥಾನ್‌ ರಾಯಲ್ಸ್‌ : 62 ಕೋಟಿ
ಪಂಜಾಬ್‌ ಕಿಂಗ್ಸ್‌ : 72 ಕೋಟಿ

ಇದನ್ನೂ ಓದಿ : ಎಬಿ ಡಿವಿಲಿಯರ್ಸ್ ಬೆನ್ನಲ್ಲೇ ಐಪಿಎಲ್‌ ಮೆಗಾ ಹರಾಜಿನಿಂದ ಹೊರ ಬಿದ್ದ ಖ್ಯಾತ ಆಟಗಾರ

ಇದನ್ನೂ ಓದಿ : Ahmedabad IPL 2022 : ಗ್ಯಾರಿ ಕ್ರಿಸ್ಟನ್, ಆಶಿಶ್ ನೆಹ್ರಾ, ವಿಕ್ರಮ್ ಸೋಲಂಕಿ ಸೆಳೆಯಲು ಮುಂದಾದ ಅಹಮದಾಬಾದ್‌

( IPL Most Expensive Players, Indian premier league history )

Comments are closed.